HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಯುವ ಸಂಘಟನೆಗಳು ಸಮಾಜದ ಧ್ವನಿಗಳಾಗಿ-ಸಚಿವ ಇ.ಚಂದ್ರಶೇಖರನ್
                ಉಚಿತ ಆರೋಗ್ಯ ಹಾಗೂ ದಂತ ಚಿಕಿತ್ಸಾ ಶಿಬಿರ ಉದ್ಘಾಟನೆ
     ಉಪ್ಪಳ: ಸಾಮಾಜಿಕ ಸೇವಾ ಚಟುವಟಿಕೆಗಳು ವ್ಯಕ್ತಿತ್ವವನ್ನು ಬೆಳೆಸುತ್ತದೆ. ಸಮಾಜದ ದೀನರ ಸಂಕಷ್ಟಗಳಿಗೆ ಧ್ವನಿಯಾಗಿ ಸಂಘಟನೆಗಳು ಕಾರ್ಯಪ್ರವೃತ್ತರಾದಾಗ ಸಮಾಜಾಭಿವೃದ್ದಿ ಸಾಕಾರಗೊಳ್ಳುವುದೆಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
   ಪೈವಳಿಕೆ ಕಾಯರ್ಕಟ್ಟೆ ಲಾಲ್ಬಾಘ್ನ ಸುಭಾಷ್ ಫ್ರೆಂಡ್ಸ್ ಸರ್ಕಲ್ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪೈವಳಿಕೆ ವಲಯದ ನೇತೃತ್ವದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ದಿ.ಸಿ.ಕೆ.ಚಿಪ್ಪಾರ್ ರವರ 7ನೇ ಸಂಸ್ಮರಣಾರ್ಥ ಶನಿವಾರ ಲಾಲ್ಬಾಘ್ ಕುಲಾಲ ಮಂದಿರದಲ್ಲಿ ಆಯೋಜಿಸಲಾದ ಬೃಹತ್ ಉಚಿತ ಆರೋಗ್ಯ ತಪಾಸಣೆ, ದಂತ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಸರಳ ಜೀವನ ಮತ್ತು ಉದಾತ್ತ ಚಿಂತನೆಗಳ ದಿ.ಸಿ.ಚಿಪ್ಪಾರ್ ರವರು ಸಾಮಾಜಿಕ, ಧಾಮರ್ಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳು ಹೊಸ ತಲೆಮಾರಿಗೆ ಆದರ್ಶಯುತವಾದ್ದು. ಅಂತವರ ಸಂಸ್ಮರಣೆ ಯುವ ತಲೆಮಾರಿಗೆ ಮಾರ್ಗದಶರ್ಿ ಎಂದು ಸಚಿವರು ತಿಳಿಸಿದರು. ಯುವ ಸಂಘಟನೆಗಳು ಸಮಾಜದ ಧ್ವನಿಗಳಾಗಿ ವಿಶಾಲ ಚಿಂತನೆಗಳೊಂದಿಗೆ ಸಮಗ್ರ ಅಭಿವೃದ್ದಿಗೆ ತಮ್ಮ ಕೊಡುಗೆಗಳನ್ನು ನೀಡಿದಾಗ ಗ್ರಾಮಾಭಿವೃದ್ದಿಯ ಪರಿಕಲ್ಪನೆ ಸಾಕಾರವಾಗುವುದು. ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ವಿವಿಧ ಆಯಾಮಗಳ ಸೇವೆಗಳು ಸ್ತುತ್ಯರ್ಹವಾಗಿ ಅಭಿವೃದ್ದಿಯ ಪಥಕ್ಕೆ ಹೊಸ ಅರ್ಥ ನೀಡುತ್ತಿದೆ ಎಂದು ಅವರು ಶ್ಲಾಘಿಸಿದರು.
  ಅಂಬಾರು ಶ್ರೀಸದಾಶಿವ ಕ್ಷೇತ್ರದ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು-ದಕ್ಷಿಣ ಕನ್ನಡ ವಲಯ ನಿದರ್ೇಶಕ ಚಂದ್ರಶೇಖರ ನೆಲ್ಯಾಡಿ, ಕೇರಳ ತೋಟಗಾರಿಕಾ ನಿಗಮದ ಸದಸ್ಯ ಬಿ.ವಿ.ರಾಜನ್, ಕಂಬಳ ಸಮಿತಿಯ ದ.ಕ, ಉಡುಪಿ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು, , ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀರಾಮ ಮೂಡಿತ್ತಾಯ, ಶಶಿಧರ ಕಾಸರಗೋಡು, ಹಿರಿಯ ವೈದ್ಯ ಡಾ.ಕೃಷ್ಣಮೂತರ್ಿ ಅಮೈ, ಪೈವಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಸುನಿತಾ ವಾಲ್ಟಿ ಡಿಸೋಜಾ, ಚನಿಯ ಕೊಮ್ಮಂಗಳ, ಅಜೀಝ್ ಕಾಯರ್ಕಟ್ಟೆ,ಬಶೀರ್ ದೇವಕಾನ,ಜಯರಾಂ ಬಳ್ಳೆಗೋಡಿ, ಕಾಟುಕುಕ್ಕೆಯ ಸತ್ಯಸಾಯೀ ಟ್ರಸ್ಟ್ ಅಧ್ಯಕ್ಷ ಸಚ್ಚಿದಾನಂದ ಖಂಡೇರಿ, ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದಶರ್ಿ ಅಹಮ್ಮದ್ ಹುಸೈನ್ ಮಾಸ್ತರ್, ಕುಲಾಲ ಮಂದಿರದ ಅಧ್ಯಕ್ಷ ಪೂವಪ್ಪ ಮುನ್ನಿಪ್ಪಾಡಿ, ಸಾಮಾಜಿಕ ನೇತಾರ ಲಾರೆನ್ಸ್ ಡಿಸೋಜಾ, ಅನಿಲ್ ಶೆಟ್ಟಿ ಬೋಳಂಗಳ ಉಪಸ್ಥಿತರಿದ್ದು ಶುಭಹಾರೈಸಿದರು. ಅಶೋಕ ಎಂ.ಸಿ.ಲಾಲ್ಬಾಘ್ ಸ್ವಾಗತಿಸಿ, ಗ್ರಾಮಾಭಿವೃದ್ದಿ ಯೋಜನೆಯ ವಲಯ ಮೇಲ್ವಿಚಾರಕ ವಿಶ್ವನಾಥ ಗೌಡ ವಂದಿಸಿದರು. ಬಳಿಕ ನಡೆದ ಶಿಬಿರದಲ್ಲಿ ನುರಿತ ವೈದ್ಯರು ತಪಾಸಣೆ ನಡೆಸಿದರು. 80ಕ್ಕಿಂತಲೂ ಮಿಕ್ಕಿದ ಸಾರ್ವಜನಿಕರು ಪ್ರಯೋಜನ ಪಡೆದುಕೊಂಡರು.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries