ಕೆಎಸ್ಟಿಎ ಯಿಂದ ತರಬೇತಿ ಶಿಬಿರ
ಮಂಜೇಶ್ವರ: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಎಸ್ಟಿಎ) ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಘಟನಾ ಕಾರ್ಯಕರ್ತರಿಗಿರುವ ತರಬೇತಿ ಶಿಬಿರ ಹೊಸಂಗಡಿಯ ಕೆಎಸ್ಟಿಎ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಯು. ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಕೇರಳ ಸರಕಾರವು ಸಾರ್ವಜನಿಕ ವಿದ್ಯಾಭ್ಯಾಸ ರಂಗದ ಉಳಿವಿಗಾಗಿ ಕಳೆದೆರಡು ವರ್ಷಗಳಿಂದ ಹಮ್ಮಿಕೊಂಡ ಶಿಕ್ಷಣ ಸಂರಕ್ಷಣಾ ಯಜ್ಞ ಇನ್ನಷ್ಟು ಸಶಕ್ತವಾಗಿ ಮುನ್ನಡೆಯಲು ಶಿಕ್ಷಕರ ಪಾತ್ರ ಮಹತ್ತರವಾಗಿರಬೇಕು. ಕೆಎಸ್ಟಿಎ ಅಧ್ಯಾಪಕ ಸಂಘಟನೆಯೊಂದಿಗೆ ಎಲ್ಲರೂ ಸಹಕರಿಸಿದಾಗ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಉಪಜಿಲ್ಲಾ ಉಪಾಧ್ಯಕ್ಷೆ ಕೃಷ್ಣವೇಣಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಜಿಲ್ಲಾ ಜೊತೆಕಾರ್ಯದಶರ್ಿ ಟಿ.ವಿ.ಗಂಗಾಧರನ್ ಸಂಘಟನಾ ವಿದ್ಯಾಭ್ಯಾಸ ಕುರಿತಾಗಿ ತರಗತಿ ನಡೆಸಿದರು. ಜಿಲ್ಲಾ ಉಪಾಧ್ಯಕ್ಷ ಮೋಹನ ಬಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ಯಾಮ ಭಟ್, ಪ್ರೇಮರಾಜನ್, ವಿಜಯಕುಮಾರ್ ಪಿ. ಮೊದಲಾದವರು ಉಪಸ್ಥಿತರಿದ್ದರು. ಉಪಜಿಲ್ಲಾ ಕಾರ್ಯದಶರ್ಿ ಪಿ.ಕೆ.ಅಹಮ್ಮದ್ ಹುಸೈನ್ ಸ್ವಾಗತಿಸಿ, ಖಜಾಂಜಿ ಜಯಂತ ಎಂ.ವಂದಿಸಿದರು.