HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸಂಜೀವನಿಗೆ ಬೇಕಿದೆ ಸಮರ್ಪಕ ಸೂರು
              ಪ್ರಧಾನಿ ಕಾಯರ್ಾಲಯದ ಪತ್ರಕ್ಕೂ ಬೆಲೆಯಿಲ್ಲ ಇಲ್ಲಿ
     ಉಪ್ಪಳ: ಮಳೆ ಗಾಳಿಗೆ ಇಂದೋ ನಾಳೆಯೋ ಧರಾಶಾಯಿಯಾಗುವಂತಿರುವ ಮನೆಯಲ್ಲಿ ವಾಸಿಸುವ ಕನಿಯಾಲ ಚಾಕಟೆಗುಳಿ ನಿವಾಸಿ ಸಂಜೀವನ ಕುಟುಂಬಕ್ಕೆ ಸಮರ್ಪಕ ಸೂರಿನ ಅಗತ್ಯತೆ ಇದೆ. ಹಲವು ಬಾರಿ ಸ್ಥಳೀಯ ಗ್ರಾಮ ಸಭೆ ಸಹಿತ ಜನಪ್ರತಿನಿಧಿಗಳಲ್ಲಿ ವಿನಂತಿಸಿದರೂ ಈತನ ಬೇಡಿಕೆ ಈಡೇರದೆ ಉಳಿದಿದೆ.ಮನೆಯ ದುರವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸುವ ಹಿಂದುಳಿದ ವರ್ಗ ಜನಸಮುದಾಯಕ್ಕೆ ಸೇರಿದ ಸಂಜೀವ ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಿಯಾಗಿದೆ.ಕೇಂದ್ರದಿಂದ ಉತ್ತರವೂ ತಲುಪಿ ಹಲವು ಸಮಯ ಕಳೆದರೂ ಈತನ ಸಮಸ್ಯೆ ಇನ್ನೂ ಪರಿಹಾರ ಕಾಣದೆ ಉಳಿದಿದೆ.
   ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಹೊಸ ಮನೆಗಾಗಿ ಅಜರ್ಿ ಸಲ್ಲಿಸಿದ್ದು, ಪರಿಗಣನೆಯಲ್ಲಿದೆಯೇ ಎಂದು ಕೇಳಿದರೆ- ಹೌದು ಲೈಫ್ ಲಿಸ್ಟ್ನಲ್ಲಿತಮ್ಮ ಹೆಸರಿದೆ ಎಂಬ ಉತ್ತರ ಲಭಿಸಿದೆ.ಆದರೆ ಯಾವಾಗ ಲಭಿಸೀತು, ತನ್ನ ಕನಸು ಯಾವಾಗ ಪೂರ್ಣಗೊಂಡೀತು ಎನ್ನುವುದರ ಬಗ್ಗೆ ಉತ್ತರ ಸಿಗಲಿಲ್ಲ ಎನ್ನುತ್ತಾರೆ ಇವರು.ಐದು ವರ್ಷಗಳಿಗೊಮ್ಮೆ ಬದಲಾಗುವ ಸರಕಾರಗಳು ಬಡತನದ ಬೇಗೆಯಲ್ಲಿರುವ ತನಗೆಯಾವುದೇ ಯೋಜನೆಯ ಅಡಿಯಲ್ಲಾದರೂ ಒಂದು ಸಮರ್ಪಕ ಸೂರನ್ನು ಒದಗಿಸಬೇಕಿದೆ ಎನ್ನುತ್ತಾರೆ ಸಂಜೀವ.
    ಕಳೆದ ಹಲವು ವರ್ಷಗಳಿಂದ ಕಾಲಿನ ಅಶಕ್ತತೆ ಬಾಧಿಸಿದ ಹಿನ್ನಲೆಯಲ್ಲಿ ಕೂಲಿ ಕೆಲಸಕ್ಕೆ ತೆರಳಲು ಅಸಾಧ್ಯವಾದ ಸ್ಥಿತಿಯಲ್ಲಿರುವ ಸಂಜೀವ 2017 ರ ಮಾಚರ್್ ತಿಂಗಳಲ್ಲಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಸ್ಥಳೀಯ ಬಾಯಾರು ಗ್ರಾಮ ಕಚೇರಿಯ ಮೂಲಕ ಮಂಜೇಶ್ವರ ಎಸ್.ಸಿ ಕಚೇರಿಗೆ ಮನೆ ನಿಮರ್ಾಣದ ಅಹವಾಲನ್ನು ನೀಡಲಾಗಿತ್ತು, ಆದರೆ ಎಸ್.ಸಿ ಕ್ಷೇಮಾಭಿವೃದ್ಧಿ ಅಧಿಕಾರಿ ಆವಾಸ್ ಯೋಜನೆಯಡಿ ಯಾವುದೇ ಅನುಕೂಲವನ್ನು ಕೊಡಲಾಗುವುದಿಲ್ಲ ಎಂದು ಸರಾಸಗಟಾಗಿ ಹೇಳಿದ್ದಾರೆ ಎಂದು ಪತ್ರದಲ್ಲಿ ನಮೂದಿಸಲಾಗಿತ್ತು. ಪತ್ರಕ್ಕೆ ಪ್ರತ್ಯುತ್ತರ ಎಂಬಂತೆ ಸಂಜೀವರಿಗೆ ಪ್ರಧಾನಿ ಕಾಯರ್ಾಲಯದ ಮೂಲಕ ಉತ್ತರ ಲಭಿಸಿದ್ದು, ನಿಮ್ಮ ಮನೆ ನಿಮರ್ಾಣದ ಬೇಡಿಕೆಯನ್ನು ಸ್ಥಳೀಯ ಜಿಲ್ಲಾ ಕಚೇರಿಯ ಮುಂದಿಡಲಾಗಿದೆ ಎಂದು ರೆಫರೆನ್ಸ್ ಅಂಕಿಯಿರುವ ಪತ್ರವಿದೆ. ಬರೋಬ್ಬರಿ 13 ತಿಂಗಳ ನಂತರವು ಸಂಜೀವನ ಸುಖಕರ ಜೀವನಕ್ಕೆ ಪೂರಕವಾಗಿರುವ ಮನೆ ನಿಮರ್ಾಣದ ಕಾರ್ಯ ನಡೆದಿಲ್ಲ. ಪ್ರಸ್ತುತ ಮಳೆಗಾಲದಲ್ಲಿ ಸಂಜೀವನ ಮನೆ ಸೋರುತ್ತಿದ್ದು, ಹೆಂಚು ಹೊದಿಸಿದ ಮೇಲ್ಛಾವಣಿ ಸೋರುವ ಕಾರಣ ಟಾಪರ್ಾಲು ಹೊದಿಸಲಾಗಿದೆ. ಅತ್ತ ಲೈಫು ಯೋಜನೆಯು ಇಲ್ಲದೆ ಕೇಂದ್ರದ ಆವಾಸ ಯೋಜನೆಯ ಭಾಗವಾಗಿರದ ಸಂಜೀವನ ಕುಟುಂಬ ಸಂಕಷ್ಟದ ಜೀವನವನ್ನು  ಸಾಗಿಸುವಂತಾಗಿದೆ. ಪತ್ರ ಲಭಿಸಿರುವ ಯಾವುದೇ ಅಧಿಕಾರಿಯಾಗಲಿ, ಸ್ಥಳೀಯ ಸಚಿವರಾಗಲಿ, ಜಿ.ಪಂ ಸದಸ್ಯರಾಗಲಿ ತನ್ನನ್ನು ಈ ತನಕ ಸಂಪಕರ್ಿಸಿಲ್ಲ ಎಂದು ಸಂಜೀವರು ನೆಲನೋಟಕರಾಗಿ ಸಂಕಷ್ಟದ ಬಗ್ಗೆ ಹೇಳಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries