ಕೊಂಡೆವೂರಿನ ``ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ"ಯ ಕಾರ್ಯಕ್ರಮ
``ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ"ದಲ್ಲಿ
ಕುಂಬಳೆ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆಯ ಕಾರ್ಯಕ್ರಮವು ಶಿರಿಯದ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.
ಪೂರ್ಣಕುಂಭದೊಂದಿಗೆ ಗ್ರಾಮಸ್ಥರು ಸಂಭ್ರಮದಿಂದ ರಥವನ್ನು ಸ್ವಾಗತಿಸಿದರು. ಭಜನೆ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಪರಮಪೂಜ್ಯ ಶ್ರೀಗಳವರು ಸಹಸ್ರ ವೃಕ್ಷಸಮೃದ್ಧಿ ಅಭಿಯಾನದ ಅಂಗವಾಗಿ ಶ್ರೀ ಕ್ಷೇತ್ರದ ಮುಂದೆ `ನೆಲ್ಲಿ" ಗಿಡ ನೆಡುವ ಮೂಲಕ ಹಸಿರು ಪರಿಸರದ ಮಹತ್ವ ಸಾರಿದರು. ಬಳಿಕ ನಡೆದ ಸತ್ಸಂಗದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು, ಮುಂದಿನ ಫೆಬ್ರವರಿ 18 ರಿಂದ 24 ರ ವರೆಗೆ ನಡೆಯುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ವಿಶೇಷತೆಗಳನ್ನು ವಿವರಿಸಿದರು. ವಿಷ್ಣುಸಹಸ್ರನಾಮ ಅಭಿಯಾನದ ಜೊತೆ ನೇತ್ರದಾನದ `ಸಹಸ್ರ ಅಕ್ಷ' ರೀತಿಯ ಇನ್ನೂ ಅನೇಕ ಕಾರ್ಯಕ್ರಮದ ಯೋಜನೆಯನ್ನು ಯಾಗ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಗ್ರಾಮಚಾವಡಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶ್ರೀವಿಷ್ಣುಸಹಸ್ರನಾಮ ಅಭಿಯಾನ ಸಮಿತಿಯ ಅಧ್ಯಕ್ಷ ಹರೀಶ್ ಮಾಡ ಉಪಸ್ಥಿತರಿದ್ದರು.ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಬಾಲಕೃಷ್ಣ ಶೆಟ್ಟಿ ವಾನಂದೆ ಸ್ವಾಗತಿಸಿ, ನಿರೂಪಿಸಿದರು. ಸುರೇಶಕುಮಾರ್ ಶೆಟ್ಟಿ ವಂದಿಸಿದರು.