HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                           ಸಹಿ ಮರದಡಿ ಎಂಡೋಸಲಾನ್ ಸಂತ್ರಸ್ತರ ಹೋರಾಟ ಮತ್ತೆ ಆರಂಭ
                   ಆರೋಗ್ಯದಿಂದ ಬದುಕುವುದು ಮಾನವನ ಹಕ್ಕು : ಎನ್.ಎಸ್.ಮಾಧವನ್
     ಕಾಸರಗೋಡು: ಆರೋಗ್ಯವಂತನಾಗಿ ಬದುಕುವುದು ಮಾನವನ ಹಕ್ಕು. ಈ ಹಕ್ಕನ್ನು ಕಸಿದುಕೊಳ್ಳುವುದು ಮಾನವನಿಗೆ ಎಸಗುವ ದೊಡ್ಡ ಅಪರಾಧ ಎಂದು ಖ್ಯಾತ ಸಾಹಿತಿ ಎನ್.ಎಸ್.ಮಾಧವನ್ ಹೇಳಿದರು.
   ಎನ್ವಿಸಾಜ್ ನೇತೃತ್ವದಲ್ಲಿ ಕಾಸರಗೋಡಿನ ಹೊಸ ಬಸ್ ನಿಲ್ದಾಣ ಪರಿಸರದ `ಸಹಿ ಮರ'ದಡಿಯಲ್ಲಿ ಆರಂಭಿಸಿದ ನಾಲ್ಕನೇ ಎಂಡೋ ಸಂತ್ರಸ್ತರ ಪರ ಹೋರಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಮಾನವನ ಬದುಕುವ ಹಕ್ಕಿನ ಮೇಲೆ ನಡೆಯುವ ಆಕ್ರಮಣವನ್ನು ಯಾವುದೇ ಕಾರಣಕ್ಕೂ ಸಮಥರ್ಿಸಲು ಸಾಧ್ಯವಿಲ್ಲ. ಆರೋಗ್ಯವಂತನಾಗಿ ಬಾಳುವುದು ಪ್ರತೀಯೊಬ್ಬ ಮಾನವನ ಆಶಯ ಹಾಗೂ ಹಕ್ಕು. ಅದಕ್ಕಾಗಿ ಅಗತ್ಯದ ಸೌಕರ್ಯಗಳನ್ನು ಕಲ್ಪಿಸಬೇಕಾದುದು ಸರಕಾರದ ಜವಾಬ್ದಾರಿಯಾಗಿದೆ ಎಂದರು.
   ಕಾರ್ಯಕ್ರಮದಲ್ಲಿ ಹಸನ್ ಮಾಂಗಾಡ್ ಅಧ್ಯಕ್ಷತೆ ವಹಿಸಿದರು. ಸಿ.ವಿ.ಬಾಲಕೃಷ್ಣನ್, ಲೀಲಾ ಕುಮಾರಿಯಮ್ಮ, ಸಿವಿಕ್ ಚಂದ್ರನ್, ಗಫೂರ್ ಮಾಸ್ಟರ್, ಪ್ರಕಾಶ್ ಬಾರ, ಸಾಹಿರ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು. ಪ್ರೊ.ಎಂ.ಎ.ರಹಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಬಿ.ವಲ್ಸನ್ ಸ್ವಾಗತಿಸಿದರು.
   ಎಂಡೋಸಲಾನ್ ಸಂತ್ರಸ್ತರ ಪರವಾಗಿ ನಡೆಯುತ್ತಿರುವ ನಾಲ್ಕು ದಿನಗಳ ಹೋರಾಟದಲ್ಲಿ ಎಂಡೋ ಸಂತ್ರಸ್ತರು, ಸಮಾಜ ಸೇವಾ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries