HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ಸಾಂಸ್ಕೃತಿಕ ಅಕಾಡೆಮಿಯ ಸರಣಿ ಚಿಣ್ಣರ ಕಲರವಕ್ಕೆ ಚಾಲನೆ
                            ಪೋಟೋ: ಪೋಕ್ಸ್ಸ್ಟಾರ್ ಬದಿಯಡ್ಕ
      ಉಪ್ಪಳ: ಮಾತೃಭಾಷೆ, ಸಂಸ್ಕೃತಿಯ ಸಂವರ್ಧನೆಗೆ ಯುವ ತಲೆಮಾರನ್ನು ತಯಾರುಗೊಳಿಸುವ ಹೊಣೆ ಎಲ್ಲರಮೇಲಿದೆ. ಸಂಸ್ಕೃತಿ-ಸಂಸ್ಕಾರಗಳ ಅರಿವು ಎಳೆಯ ಪ್ರಾಯದಲ್ಲಿ ಲಭ್ಯವಾದಾಗ ಅಂತಹ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳೆದು ತೃಪ್ತ ಬದುಕು ಸಾಕಾರವಾಗುವುದೆಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಸುಬ್ಬಯ್ಯಕಟ್ಟೆಯ ತರಂಗಿಣಿ ಆಟ್ರ್ಸ ಮತ್ತು ಸ್ಪೋಟ್ಸರ್್ ಕ್ಲಬ್ ಸಹಯೋಗದಲ್ಲಿ ಗುರುವಾರ ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ "ಚಿಣ್ಣರ ಕಲರವ" ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಗಡಿನಾಡು ಕಾಸರಗೋಡಿನ ವರ್ತಮಾನದ ಭಾಷಾ ತಲ್ಲಣಗಳ ಮಧ್ಯೆ ಹೊಸ ತಲೆಮಾರನ್ನು ಕೊಂಡೊಯ್ಯುವ ಕವಲು ಹಾದಿಯಲ್ಲಿ ಮುನ್ನಡೆಸಲಾಗುವ ವಿವಿಧ ಕನ್ನಡ ಭಾಷಾ ಚಟುವಟಿಕೆಗಳು ತನ್ನದೇ ಪ್ರಭಾವದಿಂದ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ ಅವರು ಸಂಸ್ಕೃತಿ ಸಂವರ್ಧನೆಯಲ್ಲಿ ಪರಂಪರೆ ಸಾಗಿಬಂದ ನಡಾವಳಿಗಳು, ಜೀವನ ಕ್ರಮ, ಸಾಂಸ್ಕೃತಿಕ ಸೊಗಡು ಮತ್ತು ಅದು ಮಣ್ಣಿನೊಂದಿಗೆ ತೊಡಗಿಸಿಕೊಂಡಿರುವ ಹೊಕ್ಕುಬಳಸುವಿಕೆಯನ್ನು ಯುವ ಜನರಿಗೆ-ಪುಟಾಣಿಗಳಿಗೆ ತೋರಿಸಿಕೊಡುವ ಕೈಂಕರ್ಯ ಮಹತ್ವದ ಸಾಧನೆ ಎಂದು ಶ್ಲಾಘಿಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಮಾತನಾಡಿ, ತಿಳಿಯಾದ ನೀರಿನ ಹೊಳಪಿನಂತೆ, ಹರಡಿದ ಆಕಾಶದಂತೆ ನಿಷ್ಕಲ್ಮಶ ಮನಸ್ಸಿನ ಪುಟ್ಟ ಮಕ್ಕಳ ಅರಳುವಿಕೆಗೆ ಸ್ವಸ್ಥ ಸಮಾಜ ಪ್ರಯತ್ನಿಸಬೇಕು. ನಮ್ಮ ಸಂಸ್ಕೃತಿ, ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಪ್ರತಿಬಿಂಬಿಸಿದಾಗ ಬದುಕಿಗೆ ವಿಶೇಷ ಅರ್ಥಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
   ಕನರ್ಾಟಕ ಗಮಕ ಕಲಾ ಪರಿಷತ್ತಿನ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ತರಂಗಿಣಿ ಆಟ್ಸ್ ಮತ್ತು ಸ್ಪೋಟ್ಸರ್್ ಕ್ಲಬ್ ಕಾರ್ಯದಶರ್ಿ ಬಿ.ಎ.ಲತೀಫ್, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದು ಶುಭಾಶಂಸನೆಗೈದರು.
   ಕ್ಲಬ್ ಸದಸ್ಯ ಅಶೋಕ್ ಭಂಡಾರಿ, ಶೋಭಾನೆ ಹಾಡುಗಾರರಾದ ಗಿರಿಜಾ ಎಂ. ಭಟ್ ಎಡಮಲೆ,ಜನಾರ್ಧನ ಹಂದೆ, ಎಸ್.ಕೆ.ಬಾಲಕೃಷ್ಣ, ಗಡಿನಾಡು ಕಲಾ ಸಾಂಸ್ಕೃತಿಕ ಅಕಾಡೆಮಿ ಸದಸ್ಯೆ ಸಂಧ್ಯಾಗೀತಾ ಬಾಯಾರು, ಕಾರ್ಯದಶರ್ಿ ಅಖಿಲೇಶ್ ನಗುಮುಗಂ, ಮುಖಂಡರಾದ ಸೀತಾರಾಮ ಶೆಟ್ಟಿ, ಝಡ್.ಎ.ಕಯ್ಯಾರು ಉಪಸ್ಥಿತರಿದ್ದರು.
    ಸಮಾರಂಭದಲ್ಲಿ ಮಾಧ್ಯಮ ಪ್ರಶಸ್ತಿ ವಿಜೇತ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರನ್ನು ಅಭಿನಂದಿಸಲಯಿತು. ಜೊತೆಗೆ ಅವರು ಬರೆದಿರುವ ನೆಲದ ಧ್ಯಾನ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಅಕಾಡೆಮಿ ವತಿಯಿಂದ ಶಾಲಾ ಲೈಬ್ರರಿಗೆ ಉಚಿತವಾಗಿ ವಿವಿಧ ಪುಸ್ತಕಗಳನ್ನು ನೀಡಲಾಯಿತು.
   ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ನಂಬೂದಿರಿ ವಂದಿಸಿದರು. ಬಳಿಕ ಶೋಭಾನೆ ಗೀತೆಗಳ ಸಹಿತ ಕನ್ನಡ ಗೀತಗಾಯನ ಪ್ರಾತ್ಯಕ್ಷಿಕೆ ನಡೆಯಿತು.
       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries