ಓಣಂ ಮುನ್ನ ಎರಡು ಲಕ್ಷ ಆದ್ಯತಾ ಪಡಿತರ ಕಾಡರ್್ಗಳ ವಿತರಣೆ
ಕಾಸರಗೋಡು: ಸಾರ್ವಜನಿಕ ವಿತರಣಾ ಇಲಾಖೆಯು ಓಣಂ ಹಬ್ಬಕ್ಕಿಂತ ಮೊದಲು ಕೇರಳದಲ್ಲಿ ಎರಡು ಲಕ್ಷದಷ್ಟು ಆದ್ಯತಾ ಪಡಿತರ ಕಾಡರ್್ಗಳನ್ನು ವಿತರಿಸಲು ಮಹತ್ವದ ನಿಧರ್ಾರ ಕೈಗೊಂಡಿದೆ. ಈ ಯೋಜನೆಯ ಪ್ರಥಮ ಹಂತವಾಗಿ ಪ್ರತಿಯೊಂದು ತಾಲೂಕು ವ್ಯಾಪ್ತಿಯ 2500ರಷ್ಟು ಅನರ್ಹರಾದ ಆದ್ಯತಾ, ಎಎವೈ ಪಡಿತರ ಕಾಡರ್್ಗಳನ್ನು ಓಣಂನ ಮೊದಲು ಪತ್ತೆ ಹಚ್ಚಿ ಇವುಗಳನ್ನು ಆದ್ಯತೇತರ ವಿಭಾಗಕ್ಕೊಳಪಡಿಸಲಾಗುವುದು.
ಈ ನಿಟ್ಟಿನಲ್ಲಿ ಪಡಿತರ ವ್ಯಾಪಾರಿಗಳ ವಿಶೇಷ ಸಭೆಯನ್ನು ನಡೆಸಿ ಆಗಸ್ಟ್ 15ರ ಮುಂಚಿತವಾಗಿ ಅಂತಿಮ ವರದಿ ಸಲ್ಲಿಸಲು ಸಿವಿಲ್ ಸಪ್ಲೈಸ್ ನಿದರ್ೇಶಕರು ನಿದರ್ೇಶಿಸಿದ್ದಾರೆ. ಪಡಿತರ ಆದ್ಯತಾ ಪಟ್ಟಿಯಲ್ಲಿ ಇನ್ನೂ ಅನರ್ಹರು ಇದ್ದಾರೆ ಎಂದು ಸಾರ್ವಜನಿಕ ವಿತರಣಾ ಇಲಾಖೆಯು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಮತ್ತೆ ಪಟ್ಟಿಯ ಶುದ್ಧೀಕರಣಕ್ಕೆ ಆದೇಶ ಹೊರಡಿಸಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ನಿಯಮ 2013ರ ಪ್ರಕಾರ ಈಗಾಗಲೇ ಆದ್ಯತಾ ಪಟ್ಟಿಯನ್ನು ರಚಿಸಿ ಅನರ್ಹರನ್ನು ತೆಗೆಯಲಾಗುವುದು. ಇನ್ನುಳಿದ ಅನರ್ಹರನ್ನು ಹೊರತುಪಡಿಸಿ ಅರ್ಹರನ್ನು ಒಳಪಡಿಸಲು ಆದೇಶ ನೀಡಲಾಗಿದೆ. ವಾಹನಗಳು ಇರುವುದಾಗಿ ಮೋಟಾರು ವಾಹನ ಇಲಾಖೆಯಿಂದ ಲಭಿಸಿದ ಮಾಹಿತಿಗಳು ಮತ್ತು ಸ್ಥಳೀಯಾಡಳಿತ ಇಲಾಖೆ ನೀಡಿದ ಮಾಹಿತಿಗಳನ್ನು ಇದಕ್ಕಾಗಿ ತಾಲೂಕು ಸಪ್ಲೈ ಅಧಿಕಾರಿಗಳಿಗೆ ನೀಡಲಾಗಿದೆಯಾದರೂ ಇದುವರೆಗೆ ಆ ಕುರಿತು ತಪಾಸಣೆ ನಡೆಸಿ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ.
2014ರ ಬಳಿಕ ಇಲಾಖೆಯ ಗಮನಕ್ಕೆ ಬಂದ ಮಾಹಿತಿಯಂತೆ ಮೃತಪಟ್ಟವರ ಹೆಸರುಗಳನ್ನು ಕೂಡ ಪಡಿತರ ಕಾಡರ್್ಗಳಿಂದ ಹೊರತುಪಡಿಸಲಾಗಿಲ್ಲ. ಈ ಕಾರಣಗಳಿಂದ ನೂರಾರು ಮಂದಿ ಅನರ್ಹರು ಪ್ರತಿಯೊಂದು ಪ್ರದೇಶದಲ್ಲಿ ಆದ್ಯತಾ ಪಟ್ಟಿಯಲ್ಲಿ ಇರುವುದಾಗಿ ಸಾರ್ವಜನಿಕ ವಿತರಣಾ ಇಲಾಖೆಯು ಮಾಹಿತಿ ನೀಡಿದೆ. ಪಡಿತರ ಅಂಗಡಿ ಮಾಲಕರು ಮನಸ್ಸು ಮಾಡಿದರೆ ಈ ಎಲ್ಲ ಅನರ್ಹರನ್ನು ಆದ್ಯತಾ ಪಟ್ಟಿಯಿಂದ ಹೊರತುಪಡಿಸಲು ಸಾಧ್ಯವಿದೆ.
ಎಲ್ಲ ಕಾಡರ್್ ಮಾಲಕರ ಕುಟುಂಬಗಳ ಸ್ಥಿತಿಗತಿ ಮಾಹಿತಿಯನ್ನು ಒಂದು ಹಂತದವರೆಗಾದರೂ ಆಯಾ ಪಡಿತರ ಅಂಗಡಿ ಮಾಲಕರಿಗೆ ನೇರವಾಗಿ ತಿಳಿಯಬಹುದಾಗಿರುವುದರಿಂದ ಸಂಪೂರ್ಣ ಅನರ್ಹರನ್ನು ಹೊರತುಪಡಿಸಲು ಸಾಧ್ಯವಿದೆ ಎಂದು ಅಕಾರಿಗಳು ಹೇಳುತ್ತಿದ್ದಾರೆ. ಆದುದರಿಂದ ಈ ವಿಷಯದಲ್ಲಿ ಪಡಿತರ ಅಂಗಡಿ ಮಾಲಕರ ಸಭೆ ನಡೆಸಲು ಆದೇಶ ಹೊರಡಿಸಲಾಗಿದೆ. ಇನ್ನು ಪಡಿತರ ಕಾಡರ್್ ಮಾಲಕರಿಗೆ ಯಾವ ಪಡಿತರ ಅಂಗಡಿಯಿಂದ ಬೇಕಾದರೂ ಪಡಿತರ ವಸ್ತು ಖರೀದಿಸಬಹುದಾಗಿದೆ.
ಪಡಿತರ ಖರೀದಿಸಲು ಪೋರ್ಟಬಿಲಿಟಿ ವ್ಯವಸ್ಥೆ ಇರುವುದರಿಂದ ಯಾವುದೇ ಪಡಿತರ ಅಂಗಡಿಯಿಂದ ಸಾಮಗ್ರಿ ಖರೀದಿಸಬಹುದು. ಇದಕ್ಕೆ ರಾಜ್ಯ ಸರಕಾರದ ಅಂಗೀಕಾರದೊಂದಿಗೆ ಕಾಡರ್್ ಮಾಲಕರಿಗೆ ತಿಳುವಳಿಕೆ ಮೂಡಿಸಲು ಸಾರ್ವಜನಿಕ ವಿತರಣಾ ಇಲಾಖೆಯು ತೀಮರ್ಾನಿಸಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ವಾಸಸ್ಥಳ ಬದಲಾಯಿಸುವುದಕ್ಕೆ ಅನುಸರಿಸಿ ಪಡಿತರ ಕಾಡರ್್ ಬದಲಾಯಿಸಬೇಕಾಗಿಲ್ಲ. ಒಂದು ಪಡಿತರ ಅಂಗಡಿ ತೆರೆಯದಿದ್ದರೂ ಇತರ ಪಡಿತರ ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸುವ ವ್ಯವಸ್ಥೆ ಕೇರಳದಲ್ಲಿ ಜಾರಿಗೆ ಬಂದಿದೆ.
ಅನರ್ಹರು ಆದ್ಯತಾ ಪಟ್ಟಿಯಿಂದ ಹೊರಗೆ :
ಕಾಸರಗೋಡು ಜಿಲ್ಲೆಯಲ್ಲೂ ಅನರ್ಹರನ್ನು ಪಡಿತರ ಆದ್ಯತಾ ಪಟ್ಟಿಯಿಂದ ಹೊರಹಾಕುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಯ ಸಪ್ಲೈ ಕಚೇರಿಗಳಿಗೆ ನಿದರ್ೇಶನ ಕಳುಹಿಸಲಾಗಿದೆ. ಇದರಿಂದ ಅರ್ಹರು ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದು, ಅನರ್ಹರು ಹೊರತಾಗುವರು. ಅಲ್ಲದೆ ಕೇಂದ್ರ ಸರಕಾರದ ವ್ಯವಸ್ಥೆಯಂತೆ ರಾಜ್ಯದ ಎಲ್ಲ ಅರ್ಹರಿಗೂ ಕ್ರಮಬದ್ಧವಾಗಿ ಪಡಿತರ ಸಾಮಗ್ರಿಗಳು ಕಾಲಕಾಲಕ್ಕೆ ಲಭಿಸಬಹುದು.