HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಹೆದ್ದಾರಿ ಸಂಚಾರ ಜಟಿಲ-ತುತರ್ು ಚಿಕಿತ್ಸೆಗೆ ಅವಕಾಶಗಳ ಬಾಗಿಲು ಮುಚ್ಚುವ ಭೀತಿ
     ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಮತ್ತು ತಲಪಾಡಿಯ ನವಯುಗ ಟೋಲ್ಗೇಟ್ಗಳಿಂದ ತುತರ್ು ಚಿಕಿತ್ಸೆಗಳಿಗೆ ಮಂಗಳೂರಿನ ಆಸ್ಪತ್ರೆಗೆ ತೆರಳುವ ರೋಗಿಗಳನ್ನು ಕರೆದೊಯ್ಯುವಲ್ಲಿ ಗಂಭೀರ ಸ್ವರೂಪದ ಸವಾಲುಗಳೆದುರಾಗಿ ಜೀವಹಾನಿಗಳಿಗೆ ಕಾರಣವಾಗುತ್ತಿದೆ.
   ಜಿಲ್ಲೆಯ ದಕ್ಷಿಣದ ತುದಿ ಕಾಲಿಕ್ಕಡವಿನಿಂದ ಮೊದಲ್ಗೊಂಡು ಎಲ್ಲೆಡೆಗಳಿಂದ ವಿವಿಧ ಚಿಕಿತ್ಸೆಗಳಿಗಾಗಿ ಜಿಲ್ಲೆಯ ಜನರು ಮಂಗಳೂರಿನ ಆಸ್ಪತ್ರೆಗಳನ್ನೇ ಆಶ್ರಯಿಸಿದ್ದು, ಆದರೆ ವರ್ಷದಿಂದ ವರ್ಷಕ್ಕೆ ಜಟಿಲಗೊಳ್ಳುತ್ತಿರುವ ಸಂಚಾರ ಸಮಸ್ಯೆಯಿಂದ ಕ್ಲಪ್ತ ಸಮಯಕ್ಕೆ ಚಿಕಿತ್ಸೆಪಡೆಯುವಲ್ಲಿ ವಿಫಲರಾಗುತ್ತಿರುವ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರೀಕರು, ಜನಪ್ರತಿನಿಧಿಗಳು, ಅಧಿಕಾರಿಗಳು ತುತರ್ು ಪಯರ್ಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂದು ಆಂಬುಲೆನ್ಸ್ ಓನರ್ಸ್ ಆಂಡ್ ಡ್ರೈವರ್ಸ್ ಅಸೋಸಿಯೇಶನ್(ಎಓಡಿಎ) ಪ್ರಮುಖರು ಮಂಗಳವಾರ ಸಂಜೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
   ರಾಷ್ಟ್ರೀಯ ಹೆದ್ದಾರಿಯು ಬೃಹತ್ ಹೊಂಡಗಳಿಂದ ತುತರ್ು ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಜೊತೆಗೆ ಇತರ ವಾಹನಗಳ ದಟ್ಟಣೆಯಿಂದ ಅಲ್ಲಲ್ಲಿ ಸಂಚಾರ ತಡೆ ಉಂಟಾಗುತ್ತಿರುವುದು ಆಂಬುಲೆನ್ಸ್ ಸಂಚಾರವನ್ನು ಬಾಧಿಸಿ ಗಮ್ಯ ಸ್ಥಾನ ತಲಪುವಲ್ಲಿ ಸಮಯದ ಅಭಾವದಿಂದ ಸಾವು-ನೋವುಗಳು ನಡೆಯಲು ಕಾರಣವಾಗಿದೆ. ಅಬರ್ುದ, ಹೃದಯ ಸಮಸ್ಯೆಗಳಂತಹ ಸಂಕೀರ್ಣ ರೋಗಿಗಳನ್ನು ಹೆದ್ದಾರಿಯಲ್ಲಿ ಕರೆದೊಯ್ಯುವುದು ಯಾತನಾಮಯವಾಗಿದ್ದು, ಅಧಿಕೃತರು ಹೆದ್ದಾರಿಯನ್ನು ಸಂಚಾರ ಯೋಗ್ಯಗೊಳಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಇತರ ವಾಹನಗಳು ರಾತ್ರಿಹೊತ್ತು ಅಧಿಕ ಪ್ರಭೆಯ ಹೆಡ್ಲೈಟ್ ಗಳೊಂದಿಗೆ ಅತಿ ವೇಗದ ಚಾಲನೆ ನಡೆಸುತ್ತಿರುವುದು ಆಂಬುಲೆನ್ಸ್ ಚಲಾಯಿಸುವಿಕೆಯನ್ನು ಬಾಧಿಸುತ್ತಿದ್ದು, ಇತರ ವಾಹನಗಳು ಆಂಬುಲೆನ್ಸ್ ಗೆ ಡಿಕ್ಕಿಯಾಗಿ ಅಪಘಾತಗಳೂ ನಡೆಯುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಸಹಿತ ಅಧಿಕೃತರಿಗೆ ಮನವಿ ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ವಿಪಯರ್ಾಸ ಎಂದು ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದರು.
    ಹೆದ್ದಾರಿ ಅಭಿವೃದ್ದಿ ಹೆಸರಲ್ಲಿ ತಲಪಾಡಿಯಲ್ಲಿ ತಲೆಯೆತ್ತಿರುವ ಟೋಲ್ಗೇಟ್ ನಲ್ಲಿ ಆಂಬುಲೆನ್ಸ್, ಅಗ್ನಿಶಾಮಕದಂತಹ ತುತರ್ು ವಾಹನಗಳಿಗೆ ಪ್ರತ್ಯೇಕ ಬೇ ನಿಮರ್ಿಸದಿರುವುದರಿಂದ ಇತರ ವಾಹನಗಳಂತೆ ಸರತಿಯಲ್ಲಿ 5 ರಿಂದ 10 ನಿಮಿಷಗಳಷ್ಟು ಕಾಯುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಟೋಲ್ ಗೇಟ್ ನಲ್ಲಿ ಅಳವಡಿಸಿರುವ ಪಾಸ್ಟ್ಟ್ರೇಕ್ ವ್ಯವಸ್ಥೆಯಿಂದ ಆಂಬುಲೆನ್ಸ್ ಸಂಚಾರ ಸಂಕಷ್ಟಕ್ಕೊಳಗಾಗಿದೆ. ಅಲ್ಲಿಯ ಅವ್ಯವಸ್ಥಿತ ವೇಗ ನಿಯಂತ್ರಕ(ಹಂಪ್ಸ್)ಗಳೂ ತುತರ್ು ಚಿಕಿತ್ಸೆಗೆ ಕರೆದೊಯ್ಯುವಲ್ಲಿ ಸವಾಲಾಗಿದೆ ಎಂದು ಸಂಬಂಧಪಟ್ಟವರು ಸುದ್ದಿಗೋಷ್ಠಿಯಲ್ಲಿ ಅಳಲು ವ್ಯಕ್ತಪಡಿಸಿದರು.
    ಸುದ್ದಿಗೋಷ್ಠಿಯಲ್ಲಿ ಎಓಡಿಎ ರಾಜ್ಯ ಘಟಕದ ಉಪಾಧ್ಯಕ್ಷ ಹಸ್ಸನ್ ಲೈಫ್ಕೇರ್, ಜಿಲ್ಲಾಧ್ಯಕ್ಷ ಮುನೀರ್ ಚೆಮ್ಮನಾಡು, ಕಾರ್ಯದಶರ್ಿ ಎ.ನಾರಾಯಣನ್, ಖಜಾಂಜಿ ಬಾಬುರಾಜ್ ವಿ.ಜಿ, ಅಸ್ಲಾಂ ಕುಂಜತ್ತೂರು ಉಪಸ್ಥಿತರಿದ್ದು ಮಾಹಿತಿ ನೀಡಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries