HEALTH TIPS

No title

                ಅವಿನಾಶಿಯಾದ ಅಕ್ಷರ ಕ್ರಾಂತಿ ಬದುಕನ್ನು ಎತ್ತರಕ್ಕೇರಿಸುತ್ತದೆ-ವಿರಾಜ್ ಅಡೂರು
      ಕಾಸರಗೋಡು: ಕವಿತೆಗಳನ್ನು ರಚಿಸಲು ಸ್ಫೂತರ್ಿಯಾಗಬಲ್ಲ ಸುಂದರವಾದ ಪರಿಸರ ಹಾಗೂ ಅದಕ್ಕೆ ಪೂರಕವಾದ ವಾತಾವರಣ ಕುಂಡಂಗುಳಿ ಶಾಲಾ ವಿದ್ಯಾಥರ್ಿಗಳಿಗೆ ವರದಾನ ಎಂದು ವ್ಯಂಗ್ಯಚಿತ್ರಕಾರ, ಚುಟುಕು ಸಾಹಿತಿ ವಿರಾಜ್ ಅಡೂರು ಹೇಳಿದರು.
   ಅವರು ಕುಂಡಂಗುಳಿ ಸರಕಾರಿ ಪ್ರೌಢಶಾಲೆಯ ಕನ್ನಡ ವಿಭಾಗದ ವಾರದ ಸಾಹಿತ್ಯ ಸಭೆ "ಪ್ರತಿಭಾ ದರ್ಶನ"ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
   ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸುವ ಕಲೆ ಪ್ರತಿಯೊಬ್ಬನಿಗೂ ಬದುಕಿನಲ್ಲಿ ಮೂಡಿಬರಬಲ್ಲದು. ಆದರೆ ಅದನ್ನು ಪರಿಪೋಶಿಸಿ ಬೆಳೆಸಿದಾಗ ಕಾವ್ಯರೂಪದಲ್ಲಿ ಪ್ರಕಟಗೊಳ್ಳುತ್ತದೆ. ಅವಿನಾಶಿಯಾದ ಅಕ್ಷರ ಕ್ರಾಂತಿ ಬದುಕನ್ನು ಎತ್ತರಕ್ಕೇರಿಸುತ್ತದೆ ಎಂದು ಅವರು ತಿಳಿಸಿದರು. 
   ಶಾಲಾ ವಿದ್ಯಾಥರ್ಿಗಳ ಸಾಹಿತ್ಯಸಭೆಯ ಚಟುವಟಿಕೆಯನ್ನು ಪೂತರ್ಿ ವೀಕ್ಷಿಸಿದ ಅವರು ವಿದ್ಯಾಥರ್ಿಗಳನ್ನೂ ಸೇರಿಸಿಕೊಂಡು ಆಶು ಕವನ ರಚಿಸುವ ಮೂಲಕ ಗಮನಸೆಳೆದರು.
   ವಿದ್ಯಾಥರ್ಿಗಳು ಅಭಿನಯಿಸಿದ 'ರಾಜನ ಮನಪರಿವರ್ತನೆ' ನಾಟಕವನ್ನು ಬಹಳವಾಗಿ ಮೆಚ್ಚಿಕೊಂಡು, ಪ್ರತೀ ವಿದ್ಯಾಥರ್ಿಗಳಲ್ಲೂ ಪ್ರತಿಭೆಗಳಿವೆ. ಸಾಹಿತ್ಯಸಭೆಯಂತಹ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕೆಂದು ಕಿವಿಮಾತು ಹೇಳಿದರು.
   ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕಿ ಶಶಿಕಲಾ ಅಧ್ಯಕ್ಷತೆ ವಹಿಸಿ ವಾರದ ಸಾಹಿತ್ಯ ಸಭೆಯು ಕನ್ನಡ ವಿದ್ಯಾಥರ್ಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಿದೆ. ಹಲವಾರು ವಿದ್ಯಾಥರ್ಿಗಳು ಈ ಮೂಲಕ ಪ್ರಗತಿಯನ್ನು ದಾಖಲಿಸುತ್ತಿರುವುದನ್ನು ಅವರು ಉಲ್ಲೇಖಿಸಿದರು.
   ವಿದ್ಯಾಥರ್ಿಗಳೇ ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದ್ದರು. ವಿದ್ಯಾಥರ್ಿಗಳಾದ ಧನುಷ್ ಸ್ವಾಗತಿಸಿ, ನವ್ಯ ವಂದಿಸಿದರು. ರಜತಾ ನಿರೂಪಿಸಿದಳು. ಬಳಿಕ 5ರಿಂದ 10ನೇ ತರಗತಿಯ ವರೆಗಿನ ವಿದ್ಯಾಥರ್ಿಗಳು ವರದಿವಾಚನ, ಕವಿಪರಿಚಯ, ನಗೆಹನಿ,  ಆಶುಭಾಷಣ, ಸಮೂಹಗಾನ, ನಾಟಕ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದರು. ಅಧ್ಯಾಪಕರಾದ ಎಸ್ ಎನ್ ಪ್ರಕಾಶ್, ಶ್ರೀಶ ಪಂಜಿತ್ತಡ್ಕ, ಪ್ರೀತಾ, ಮನೋರಮ ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries