ಉಕ್ಕಿನಡ್ಕ ಸರಕಾರಿ ಆಸ್ಪತ್ರೆ ನಿಮರ್ಾಣಕ್ಕೆ ಕೊನೆಗೂ ಆಡಳಿತಾನುಮತಿ!??
ಬದಿಯಡ್ಕ: ಉಕ್ಕಿನಡ್ಕದಲ್ಲಿ ನಿಮರ್ಾಣಗೊಳ್ಳಬೇಕಿರುವ ಬಹು ನಿರೀಕ್ಷಿತ ಆಸ್ಪತ್ರೆ ನಿಮರ್ಾಣದ ಗುತ್ತಿಗೆಗೆ ಸರಕಾರ ಅನುಮತಿಸಿದೆ. 85 ಕೋಟಿ ರು. ವೆಚ್ಚದಲ್ಲಿ ನಿಮರ್ಾಣಗೊಳ್ಳಲಿರುವ ಆಸ್ಪತ್ರೆ ಕಟ್ಟಡ ಸಮುಚ್ಚಯಕ್ಕೆ ಆಡಳಿತ ಅನುಮತಿ ಲಭ್ಯವಾಗಿದೆ.
ವೈದ್ಯಕೀಯ ಕಾಲೇಜು ಕನ್ಸಲ್ಟೆನ್ಸಿ ಹಾಗೂ ಸರಕರದ ನೋಡಾಲ್ ಸಂಸ್ಥೆಯಾದ ಕಿಟ್ಕೋ ಮೂಲಕ ಚನ್ನೈ ಕಂಪೆನಿಗೆ ಆಸ್ಪತ್ರೆ ನಿಮರ್ಾಣದ ಗುತ್ತಿಗೆ ನೀಡಲಾಗಿದೆ. 2013 ರಲ್ಲಿ ಅಂದಿನ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಉಕ್ಕಿನಡ್ಕ ಕಾಲೇಜು ಮತ್ತು ಆಸ್ಪತ್ರೆ ನಿಮರ್ಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದ್ದರು. 2016 ರಲ್ಲಿ ಮೆಡಿಕಲ್ ಕಾಲೇಜು ನಿಮರ್ಾಣಕ್ಕೆ ಸರಕಾರ ಹಸಿರು ನಿಶಾನೆ ತೋರಿಸಿತ್ತು. ಅದರಂತೆ ಪ್ರಸ್ತುತ ಕಾಲೇಜು ಬ್ಲಾಕ್ ನಿಮರ್ಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಐದು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿಮರ್ಾಣಕ್ಕೆ ಅಂದಿನ ಸರಕಾರ ಬೃಹತ್ ಯೋಜನೆಯನ್ನು ರೂಪಿಸಿತ್ತು. ಎಂಡೋ ಸಂತ್ರಸ್ತರು ಹೆಚ್ಚಿರುವ ಕಾಸರಗೋಡಿನಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿಮರ್ಾಣ ಯೋಜನೆ ಹೊಸ ಭರವಸೆಯನ್ನು ಮೂಡಿಸಿತ್ತು. ಮಂಜೇರಿ, ಇಡುಕ್ಕಿ, ಕಾಸರಗೋಡು, ಕೊನ್ನಿ, ಹರಿಪ್ಪಾಡ್ ಗಳಲ್ಲಿ ಕಾಲೇಜು ಸಹಿತ ಸುಸಜ್ಜಿತ ಆಸ್ಪತ್ರೆ ನಿಮರ್ಾಣದ ರೂಪುರೇಶೆ ಮತ್ತು ವರದಿಯನ್ನು 2012 ರಲ್ಲಿ ಸರಕಾರಕ್ಕೆ ಸಮಪರ್ಿಸಲಾಗಿತ್ತು. ಕಾಸರಗೋಡು ಹೊರತುಪಡಿಸಿ ಉಳಿದೆಡೆಗಳಲ್ಲಿ ಆಸ್ಪತ್ರೆ ನಿಮರ್ಾಣದ ಕಾಮಗಾರಿ ಪೂರ್ಣಗೊಂಡು ಕಾಯರ್ಾರಂಭಗೊಂಡಿವೆ. ಬದಿಯಡ್ಕ ಸಮೀಪದ ಉಕ್ಕಿನಡ್ಕದಲ್ಲಿ ಉದ್ದೇಶಿತ ಯೋಜನೆಯು ಮಂದ ಗತಿಯಲ್ಲಿ ಸಾಗಿದ ಕಾರಣ ಸಮಯದೊಳಗೆ ಪೂರ್ಣಗೊಂಡಿಲ್ಲ. ಐ.ಪಿ ವಿಭಾಗ, ಒ.ಪಿ ವಿಭಾಗ, ಐ.ಸಿ.ಯು ಸೇರಿದಂತೆ ಒಂಭತ್ತು ಅಪರೇಶನ್ ಥಿಯೇಟರ್ಗಳಿರಲಿರುವ ಆಸ್ಪತ್ರೆಯು 37850 ಚ.ಮೀ ವಿಸ್ತೀರ್ಣದಲ್ಲಿ ನಿಮರ್ಾಣಗೊಳ್ಳಲಿದೆ.