HEALTH TIPS

No title

          ರಸ್ತೆ ಇಕ್ಕೆಲಗಳಲ್ಲಿ ಕಾಡು ಪೊದೆಗಳನ್ನು ಕಡಿದು ಮಾದರಿಯಾದ ಜನಸೇವಾ ಸಂಗಮ
     ಉಪ್ಪಳ: ರಸ್ತೆ ಇಕ್ಕೆಲಗಳಲ್ಲಿರುವ ಕಾಡು ಪೊದೆಗಳನ್ನು ಕಡಿದು ಚೊಕ್ಕಗೊಳಿಸದ ಗ್ರಾಮೀಣ ಭಾಗದ ಜನಸೇವಾ ಸಂಗಮ ಕನಿಯಾಲ ಬಳಗದ ಸದಸ್ಯರು ಮಾದರಿಯಾದರು.
   ಕನಿಯಾಲದಿಂದ ವಾಟೆತ್ತಿಲ ತಿರುವು ರಸ್ತೆಯ ತನಕದ ಎರಡು ಕಿ.ಮೀ ದೂರದ ರಸ್ತೆ ಇಕ್ಕೆಲಗಳಲ್ಲಿ ಆವರಿಸಿಕೊಂಡಿದ್ದ  ಪೊದೆಗಳನ್ನು ಕಡಿದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಬಸ್ ಸಂಚಾರ ಸಹಿತ ಪ್ರಯಾಣಿಕರ ಸಂಚಾರಕ್ಕೆ  ಆಡಚಣೆಯಾಗುತ್ತಿದ್ದ ಕಾಡು ಪೊದೆಗಳನ್ನು ಕಡಿಯುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲಗೊಳಿಸಿ, ಬಳಗದ ಸದಸ್ಯರು ಗ್ರಾಮವಾಸಿಗಳ ಪ್ರಶಂಸೆಗೆ ಪಾತ್ರರಾದರು.
   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜನಸೇವಾ ಸಂಗಮ ಕನಿಯಾಲ ಅಧ್ಯಕ್ಷ ಈಶ್ವರ್ ಭಟ್ ಸಂಗಮವು ಹಲವು ವರ್ಷಗಳಿಂದ ಜನಪರ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ. ಸಾಮಾಜಿಕ ಸೇವೆ, ಜನಪರ ಕಾಳಜಿಯ ಕಾರ್ಯಗಳನ್ನು ಇನ್ನೂ ಮುಂದೆಯೂ ಮುಂದುವರಿಸುವ ಚಿಂತನೆ ಬಳಗದ ಮುಂದಿದೆ ಎಂದರು. ಜನಸೇವಾ ಸಂಗಮದ ಉಪಾಧ್ಯಕ್ಷ ರಂಗರಾಜ ಬಿರುದಾಂಕಿತ ನಾಗಪ್ಪ ಆಚಾರ್ಯ ಕನಿಯಾಲ ಶ್ರಮಾದಾನಕ್ಕೆ ನೇತೃತ್ವ ನೀಡಿದರು. ಕಾರ್ಯದಶರ್ಿ ಸುಬ್ಬ ಡ್ರೈವರ್, ಶ್ರೀಧರ, ಲೋಕೇಶ್, ಲೆಕ್ಕ ಪರಿಶೋಧಕ ಎನ್.ಬಿ.ಎಸ್.ಸುಂದರ, ನಿತ್ಯಾನಂದ ರಾವ್ ಕನಿಯಾಲ ಸಹಿತ ಹಲವು ಮಂದಿ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries