HEALTH TIPS

No title

                   ಯಂ.ವಿ. ಬಳ್ಳುಳ್ಳಾಯ- ನೆನಪಿನ ಪುನರವಲೋಕನ
    ಮುಳ್ಳೇರಿಯ: ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ  ವತಿಯಿಂದ ಮಾತೃ ಸಂಸ್ಥೆ ಶ್ರೀಕಾತರ್ಿಕೇಯ ಕಲಾನಿಲಯದ ಸ್ಥಾಪಕ ಕಾರ್ಯದಶರ್ಿ, ಪ್ರಮುಖ ನಾಟಕ ನಟರಾಗಿದ್ದ, ಪತ್ರಕರ್ತ ದಿ.ಯಂ.ವಿ. ಬಳ್ಳುಳ್ಳಾಯ ಇವರ ದಿವ್ಯ ಚೇತನಕ್ಕೆ ಶ್ರದ್ಧಾಂಜಲಿಗಳೊಂದಿಗೆ "ನೆನಪಿನ ಪುನರವಲೋಕನ" ವಿಶೇಷ ಕಾರ್ಯಕ್ರಮವು ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಶನಿವಾರ ಜರಗಿತು.         
    ಮುಳಿಯಾರು ಶ್ರೀಕ್ಷೇತ್ರದ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಅವರು ದಿ. ಯಂ.ವಿ. ಬಳ್ಳುಳ್ಳಾಯರ ಗಡಿನಾಡು ಕನ್ನಡ ಹೋರಾಟ, ಪತ್ರಿಕೋದ್ಯಮ, ಕಲಾಸೇವೆ, ಸಾಮಾಜಿಕ ರಂಗ, ಹೀಗೆ ಹತ್ತು ಹಲವು ಕ್ಷೇತ್ರಗಳ ಬಗ್ಗೆ ಸಮಗ್ರ ಚಿತ್ರಣವನ್ನು ನೆನಪಿಸಿ ಮಾತನಾಡಿದರು. ವೇಣು ಕಾಸರಗೋಡು ಉಪಸ್ಥಿತರಿದ್ದು ಯಂ.ವಿ. ಬಳ್ಳುಳ್ಳಾಯರ ಪ್ರಭಾವೀ ವ್ಯಕ್ತಿತ್ವದ ಬಗ್ಗೆ ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪೆರಡಂಜಿ ಗೋಪಾಲ ಕೃಷ್ಣ ಭಟ್   ರಂಗ ನಟ ಬಳ್ಳುಳ್ಳಾಯರೊಂದಿಗಿನ ನಾಟಕ ಕ್ಷೇತ್ರದ ಬಗ್ಗೆ ಮಾತನಾಡುತ್ತಾ ಕಾತರ್ಿಕೇಯ ಕಲಾನಿಲಯ ಮತ್ತು ಯಕ್ಷತೂಣೀರ ಸಂಪ್ರತಿಷ್ಠಾನಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಪುನರವಲೋಕನ ಮಾತುಗಳನ್ನಾಡಿದರು.
   ಎ.ಜಿ. ನಾಯರ್, ವೆಂಕಟ ಭಟ್ ಎಡನೀರು, ಭಾಗೀರತಿ ಟೀಚರ್ ಸಂಸ್ಮರಣಾ ಭಾಷಣ ಮಾಡಿದರು.
  ಕಾರ್ಯಕ್ರಮದಂಗವಾಗಿ  ದಿ.ಯಂ.ವಿ.  ಬಳ್ಳುಳ್ಳಾಯ ಇವರು ಪ್ರಮುಖ  ಪಾತ್ರವೊಂದರಲ್ಲಿ  ಅಭಿನಯಿಸಿದ ರಾಜ್ಯ ರಾಜ್ಯಾಂತರಗಳಲ್ಲಿ ಸುಪ್ರಸಿದ್ಧವಾದ ಅಡ್ಕ ಗೋಪಾಲಕೃಷ್ಣ ಭಟ್ ಅವರು ರಚಿಸಿ ನಿದರ್ೇಶಿಸಿದ  'ಮಾಂಗಲ್ಯ ಭಾಗ್ಯ'  ಎಂಬ ರಂಗ ನಾಟಕದ ಕೆಲವು ಭಾಗಗಳನ್ನು ರಂಗದಲ್ಲಿ ಅಭಿನಯಿಸಿ ಪ್ರಸ್ತುತಪಡಿಸಲಾಯಿತು.  ಅಮ್ಮು ಮಾಸ್ಟರ್ ಅಮ್ಮಂಗೋಡು ಹಿನ್ನೆಲೆ ಸಂಗೀತವನ್ನು ನುಡಿಸಿ ನಾಟಕವನ್ನು ಪರಿಣಾಮಕಾರಿಯಾನ್ನಾಗಿ ಯಶಸ್ವಿಗೊಳಿಸಿದರು.
    ಪೆರಡಂಜಿ ಗೋಪಾಲ ಕೃಷ್ಣ ಭಟ್, ಅನುಪಮಾ ರಾಘವೇಂದ್ರ ಉಡುಪುಮೂಲೆ, ಡಾ ಶಿವಕುಮಾರ್ ಅಡ್ಕ, ಮುರಳಿ ಸ್ಕಂದ,  ಕೃಷ್ಣ ಭಟ್ ಅಡ್ಕ, ಸುಬ್ರಹ್ಮಣ್ಯ ಭಟ್ ಅಡ್ಕ,  ಅನಿರುದ್ಧ ವಾಸಿಷ್ಠ ಶರ್ಮ  ಇವರ ಅಭಿನಯದೊಂದಿಗೆ ನಾಟಕವು ಸಂಪನ್ನವಾಯಿತು.
   ಗೋವಿಂದ ಬಳ್ಳಮೂಲೆ ಪ್ರಾಸ್ಥಾವಿಕವಾಗಿ ಮಾತನಾಡಿ, ನಾಟಕದ ಹಾಡುಗಳನ್ನು ಹಾಡಿ  ಕಾರ್ಯಕ್ರಮ ನಿರೂಪಣೆ  ಮಾಡಿದರು. ಡಾ. ಶಿವಕುಮಾರ್ ಅಡ್ಕ ಸ್ವಾಗತಿಸಿ ವಂದಿಸಿದರು. ಈಶ್ವರ ಭಟ್ ಬಳ್ಳಮೂಲೆ, ರಾಜೇಶ್ವರಿ ಬಳ್ಳಮೂಲೆ, ವಿಜಯಾಮುರಳಿ, ಹರಿಕೃಷ್ಣ ಪೆರಡಂಜಿ , ರಾಘವೇಂದ್ರ ಉಡುಪುಮೂಲೆ, ಅನಂತಪದ್ಮನಾಭ ಮಯ್ಯ ಸಾಂದಭರ್ಿಕ ಸಹಕಾರವನ್ನಿತ್ತರು.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries