HEALTH TIPS

No title

                    ಎಲೆಮರೆಯ ಸಾಹಿತಿಗಳನ್ನು ಗೌರವಿಸುವುದು ಕರ್ತವ್ಯ-ಡಾ.ಭರಣ್ಯ
     ಬದಿಯಡ್ಕ: ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆಯಲ್ಲಿ ಸಾಹಿತ್ಯ ಪ್ರಕಾರದ ಕೊಡುಗೆ ಮಹತ್ವದ್ದಾಗಿದ್ದು, ಹೊಸ ತಲೆಮಾರಿಗೆ ಸಾಹಿತ್ಯದ ಬರವಣಿಗೆ ಮತ್ತು ಓದನ್ನು ರೂಢಿಸುವ ಯತ್ನಗಳಾಗಬೇಕು ಎಂದು ನಿವೃತ್ತ ಶಿಕ್ಷಕ ಬಾಬು ಮಾಸ್ತರ್ ಚಂಬಲ್ತಿಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಸಿರಿ ತಿಂಗಳ ಸರಣಿ ಕಾರ್ಯಕ್ರಮದ ಮೂರನೇ ಕಾರ್ಯಕ್ರಮವನ್ನು ಸೋಮವಾರ ಬದಿಯಡ್ಕದ ದಸ್ತಾವೇಜು ಬರಹಗಾರರಾದ ಕರಿಂಬಿಲ ಲಕ್ಷ್ಮಣ ಪ್ರಭುಗಳ ಕಾಯರ್ಾಲಯದಲ್ಲಿ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
    ಆಧುನಿಕ ಯುವ ಸಮೂಹ ಪುಸ್ತಕಗಳ ಓದುವಿಕೆಯಲ್ಲಿ ಆಸಕ್ತರಾಗದಿರುವುದು ಗಂಭೀರ ವಿಷಯವಾಗಿದ್ದು, ಶಾಶ್ವತ ಜ್ಞಾನ ಸಂಪಾದನೆ ಮತ್ತು ಸಂತೃಪ್ತಿಗೆ ಕಾರಣವಾಗುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.
    ಕನ್ನಡ ಸಾಹಿತ್ಯ ಸಿರಿಯ ಅಧ್ಯಕ್ಷ ಮೊಹಮ್ಮದಾಲಿ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಾಹಿತಿ ಹಾಗೂ ಕಾಸರಗೋಡು ಜಿಲ್ಲಾ ನಿವೃತ್ತ ವಯಸ್ಕ ಶಿಕ್ಷಣಾಧಿಕಾರಿ ಸ್ಟ್ಯಾನಿ ಕ್ರಾಸ್ತಾ ಬೇಳ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸನ್ಮಾನಿತರ ಕೃತಿಗಳ ಬಗ್ಗೆ ಮಾತನಾಡಿದ ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ, ಕವಿ ಡಾ.ಹರಿಕೃಷ್ಣ ಭರಣ್ಯ ಮಾತನಾಡಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಂಸ್ಕೃತಿಯನ್ನು ದಾಟಿಸುವ ಶಕ್ತಿ ಭಾಷೆಗಳಿಗಿವೆ. ಕನ್ನಡ ಸಹಿತ ಭಾರತದ ಎಲ್ಲಾ ಭಾಷೆಗಳೂ ಪ್ರಾದೇಶಿಕ ಪ್ರಬೇಧಗಳನ್ನು ಹೊಂದಿದ್ದು, ಅವುಗಳ ಬಗ್ಗೆ ಅಧ್ಯಯನ, ದಾಖಲೀಕರಣ ಆಗಬೇಕು ಎಂದು ತಿಳಿಸಿದರು. ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ವಿವಿಧ ಭಾಷಾ ಕವಿ, ಬರಹಗಾರರನ್ನು ಗುರುತಿಸುವ ಯತ್ನಗಳಾಗಬೇಕು. ಉದಯೋನ್ಮುಖ ಬರಹಗಾರರನ್ನು ಬೆಳೆಸುವ ಕಾರ್ಯಕ್ರಮಗಳು ಮುತುವಜರ್ಿಯಿಂದ ನಡೆಯಬೇಕು ಎಂದು ಅವರು ತಿಳಿಸಿದರು. ಕೃತಿ ಮತ್ತು ಕೃತಿಕಾರರನ್ನು ಗೌರವಿಸುವ ಸಮಾಜ ಸಮೃದ್ದವಾಗಿ ಬೆಳೆಯಬಲ್ಲದು ಎಂದು ಆಶಯ ವ್ಯಕ್ತಪಡಿಸಿದರು. ಸ್ಟ್ಯಾನಿ ಕ್ರಾಸ್ತಾರ ಹಲವು ವೈವಿಧ್ಯಮಯ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿ ಸಹೃದಯ ಸಾಹಿತ್ಯ ಪ್ರೇಮಿಗಳು ಕೈಜೋಡಿಸಬೇಕು ಎಂದು ಅವರು ಕರೆನೀಡಿದರು.
   ಕಾರ್ಯಕ್ರಮದಲ್ಲಿ ರಾಮಾಯಣ ಮಾಸಾಚರಣೆಯ ಬಗ್ಗೆ ವಿಶೇಷೋಪನ್ಯಾಸ ನೀಡಿದ ಪಿಲಿಂಗಲ್ಲು ಕೃಷ್ಣ ಭಟ್ ಅವರು, ರಾಮಾಯಣದಂತಹ ಉದ್ಗ್ರಂಥಗಳು ಬದುಕಿನಲ್ಲಿ ಧರ್ಮ, ಸತ್ಯಗಳ ಸಾರ್ಥಕ್ಯವನ್ನು ಬಿಂಬಿಸುವುದರೊಂದಿಗೆ ಜೀವನದ ಲಕ್ಷ್ಯವನ್ನು ಬಿಂಬಿಸಿದೆ. ರಾಷ್ಟ್ರದ ಇಂತಹ ಮಹತ್ ಗ್ರಂಥಗಳು ಜನಜೀವನದ ನೆಮ್ಮದಿಗಾಗಿ ನಿಮರ್ಿತವಾಗಿದ್ದು, ಅದು ಸಕಾಲಿಕ ಮಹತ್ವಗಳನ್ನು ಹೊಂದಿದೆ ಎಂದು ತಿಳಿಸಿದರು.
   ಕನ್ನಡ ಸಾಹಿತ್ಯ ಸಿರಿಯ ಗೌರವಾಧ್ಯಕ್ಷ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ನಿವೃತ್ತ ಆರೋಗ್ಯ ಇಲಾಖಾ ಸಿಬ್ಬಂದಿ ಉಡುಪಮೂಲೆ ಪ್ರಭಾಕರ, ನ್ಯಾಯವಾದಿ ಥೋಮಸ್ ಡಿಸೋಜಾ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಸಂಚಾಲಕ ಕೇಳು ಮಾಸ್ತರ್ ಅಗಲ್ಪಾಡಿ  ಉಪಸ್ಥಿತರಿದ್ದು ಮಾತನಾಡಿದರು.  ಈ ಸಂದರ್ಭ ಅಗಲಿದ ಪತ್ರಕರ್ತ, ಕನ್ನಡ ಹೋರಾಟಗಾರ ಎಂ.ವಿ.ಬಳ್ಳುಳ್ಳಾಯ ಇವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
   ಸಂಘಟನೆಯ ಉಪಾಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಕಾರ್ಯದಶರ್ಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ವಂದಿಸಿದರು. ಪ್ರೊ.ಎ.ಶ್ರೀನಾಥ್ ಸನ್ಮಾನಿತರ ಪರಿಚಯ ನೀಡಿ ಕಾರ್ಯಕ್ರಮ ನಿರೂಪಿಸಿದರು. ಬೇಂಗ್ರೋಡಿ ಗೋವಿಂದ ಭಟ್ ಪ್ರಾರ್ಥನಾ ಗೀತೆ ಹಾಡಿದರು.
  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries