HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಪ್ರವೇಶ ಪರೀಕ್ಷೆಯಲ್ಲಿ ಮಿಂಚಿದ ಪೈವಳಿಕೆ ನಗರದ ಬಹುಮುಖ ಪ್ರತಿಭೆ ಶ್ರುತಿ ಕೆ
      ಉಪ್ಪಳ: ಹದಿಹರೆಯಕ್ಕೆ ಬಂದ ಮಕ್ಕಳು ಮೊಬೈಲು, ಬೈಕುಗಳ ಹಿಂದೆ ಬಿದ್ದು ಬದುಕನ್ನೇ ಹಾಳುಮಾಡಿಕೊಳ್ಳುವುದು ದುರಂತವೆಂದೇ ಹೇಳಬಹುದು. ಅದಕ್ಕೆ ಪೂರಕ ಎಂಬಂತೆ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಲು ಹೆತ್ತವರೇ ಇಂತಹ ಅಮಿಷಗಳನ್ನು ಒಡ್ಡಿ ಎಳೆ ಮನಸ್ಸುಗಳ ಭವಿಷ್ಯದಲ್ಲಿ ಚೆಲ್ಲಾಟ ಆಡುತ್ತಿರುವುದು ವರ್ತಮಾನದ ಘಟನೆಗಳಿಂದ ನಮಗೆ ಸ್ಪಷ್ಟವಾಗುತ್ತದೆ.
    ಆದರೆ ವಿದ್ಯಾಥರ್ಿಗಳು ದಾರಿ ತಪ್ಪಲು ವಿದ್ಯಾಲಯ ಮತ್ತು ಶಿಕ್ಷಕರು ಮಾತ್ರ ಕಾರಣವೆಂದು ಹೇಳಿಕೊಂಡು ರಕ್ಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಇಂತಹ ಮನಸ್ಥಿತಿಗಳನ್ನೆಲ್ಲಾ ಸುಳ್ಳಾಗಿಸಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿನಿಯೋವರ್ೆ ವಿಜಯ ಸಾಧಿಸಿ ಇತರ ವಿದ್ಯಾಥರ್ಿಗಳಿಗೆ ಮಾದರಿಯಾಗಿದ್ದಾಳೆ. ಪ್ಲಸ್ ಟು ವಿಜ್ಞಾನ ವಿಭಾಗದ ಶ್ರುತಿ ಕೆ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ) ವಿವಿಧ ರ್ಯಾಂಕುಗಳನ್ನು ಪಡೆದು ನಿರೀಕ್ಷೆ ಮೂಡಿಸಿದ್ದಾಳೆ. ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ.ವಿಭಾಗ(ಎಸ್ ಟಿ)ದಲ್ಲಿ 5ನೇ ರ್ಯಾಂಕ್, ಇಂಜಿನಿಯರಿಂಗ್ನಲ್ಲಿ ಎಸ್ ಟಿ ವಿಭಾಗದಲ್ಲಿ ಎರಡನೇ ರ್ಯಾಂಕ್ ಹಾಗೂ ಫಾರ್ಮಸಿಯಲ್ಲಿ ಎಸ್ ಟಿ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು ಕಲಿತ ಶಾಲೆಗೂ, ಹೆತ್ತವರಿಗೂ, ಊರಿಗೂ ಕೀತರ್ಿ ತಂದಿದ್ದಾಳೆ.
    ಕಾಸರಗೋಡು ಜನರಲ್ ಆಸ್ಪತ್ರೆಯ ಉದ್ಯೋಗಿ ಹಾಗೂ ಕಯ್ಯಾರು ನಿವಾಸಿ ನಾರಾಯಣ ನಾಯ್ಕ್ - ಪ್ರೇಮ ದಂಪತಿಗಳ ಸುಪುತ್ರಿಯಾದ ಶ್ರುತಿ ಕೆ ಮುಂದೆ ವೈದ್ಯೆಯಾಗಿ ಜನಸೇವೆ ಮಾಡುವ ಮಹದಾಸೆ ಹೊಂದಿದ್ದಾಳೆ. ಸಹೋದರ ಶ್ರೇಯಸ್ ನಾಯ್ಕ್ 7ನೇ ತರಗತಿ ವಿದ್ಯಾಥರ್ಿಯಾಗಿದ್ದಾನೆ. ಶಾಲಾ ಕಲೋತ್ಸವದಲ್ಲಿ ಹಿಂದಿ ಪ್ರಬಂಧ ಮತ್ತು ಆಂಗ್ಲ ಕವಿತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿರುವ ಶ್ರುತಿಗೆ ಗುರುವೃಂದದವರಲ್ಲಿ ಭಯಭಕ್ತಿ ಹೆಚ್ಚು. ಹಯರ್ ಸೆಕೆಂಡರಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಗಳಿಸಿದ ಕೀತರ್ಿ ಈಕೆಯ ಪಾಲಿಗಿದೆ. ತನ್ನ ಕಠಿಣ ಪರಿಶ್ರಮದಿಂದ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ವಿಜಯ ಸಾಧಿಸಿದ ಶ್ರುತಿ ಕೆ ವೈದ್ಯೆಯಾಗಿ ಜನಸೇವೆ ಮಾಡುವಂತಾಗಲಿ ಎಂದು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ರಕ್ಷಕ ಶಿಕ್ಷಕ ಸಂಘ ಹಾರೈಸಿದೆ.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries