ರಸ್ತೆ ಮಧ್ಯೆ ಗೂಳಿ ಕಾಳಗ, ವಾಹನ ಸಂಚಾರಕ್ಕೆ ತಡೆ!
ಮಧೂರು: ನಿರಂತರ ವಾಹನ ಸಂಚಾರವಿರುವ ಸೀತಾಂಗೋಳಿ-ಉಳಿಯತ್ತಡ್ಕ ರಸ್ತೆಯಲ್ಲಿ ಹಲವು ಗಂಟೆಗಳ ಕಾಲ ಗೂಳಿ ಕಾಳಗ ಏರ್ಪಟ್ಟು ವಾಹನ ಸಂಚಾರಕ್ಕೆ ತೊಡಕಾದ ಘಟನೆ ಬುಧವಾರ ನಡೆದಿದೆ.
ಮಾಯಿಪ್ಪಾಡಿ ಆರೋಗ್ಯ ಕೇಂದ್ರದ ಸಮೀಪವಿರುವ ತಿರುವು ರಸ್ತೆಯಲ್ಲಿ ನಡೆಯುತ್ತಿದ್ದ ಎರಡು ಗೂಳಿಗಳ ಕಾದಾಟದಿಂದ ವಾಹನ ಸವಾರರು ತೊಂದರೆಗೀಡಾದರು. ಮದವೇರಿದ ಗೂಳಿಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕೊಂಬು ಹೂಡಿ ಕಾದಾಡಿವೆ. ಸ್ಥಳೀಯರ ಪ್ರಥಮ ಪ್ರಯತ್ನದಲ್ಲಿ ಗೂಳಿಗಳನ್ನು ಬೇರ್ಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಹಲವು ದಿನಗಳಿಂದ ಮಾಯಿಪ್ಪಾಡಿ ಅರಮನೆ ಸಹಿತ ಪಟ್ಲ ಪ್ರದೇಶದಲ್ಲಿ ಈ ಎರಡು ಗೂಳಿಗಳು ಸುತ್ತಾಡುತ್ತಿದ್ದವು ಎಂದು ಸ್ಥಳಿಯರು ತಿಳಿಸಿದ್ದಾರೆ. ಏಕಾಏಕಿ ಏರ್ಪಟ್ಟ ಕಾಳಗವು ಮುಖ್ಯ ರಸ್ತೆಗೆ ಬಂದು ತಲುಪಿದೆ. ಗಂಟೆಗಳ ಕಾಲ ನಡೆದ ಗುದ್ದಾಟವನ್ನು ವೀಕ್ಷಿಸಲು ಕೆಲ ಮಂದಿ ಪ್ರಯಾಣಿಕರು ರಸ್ತೆ ಬದಿ ವಾಹನ ನಿಲುಗಡೆಗೊಳಿಸಿದ್ದರು. ಗಂಟೆಗಳ ಕಾಲ ಕಾದಾಟದಲ್ಲಿ ಗೂಳಿಗಳ ಮೈಮೇಲೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮಧ್ಯಾಹ್ನದ ವೇಳೆ ಯುವಕರ ಸಹಾಯದಿಂದ ನೀರು ಎಸೆದು ದೊಡ್ಡ ದೊಣ್ಣೆಗಳ ಮೂಲಕ ಕಾದಾಡಿ ಸುಸ್ತಾಗಿದ್ದ ಗೂಳಿಗಳನ್ನು ಬೇರ್ಪಡಿಸಲಾಗಿದ್ದು, ಸುಖೀ ರಸ್ತೆ ಸಂಚಾರಕ್ಕೆ ಆಸ್ಪದ ಮಾಡಿಕೊಡಲಾಯಿತು.