HEALTH TIPS

No title

            ಕುಂಬಳೆ ಗ್ರಾ.ಪಂ. ವತಿಯಿಂದ ಕ್ರೀಡಾ ಕಿಟ್ ವಿತರಣೆ
   ಕುಂಬಳೆ: ವಿದ್ಯಾಥರ್ಿಗಳ ಶಾರೀರಿಕ, ಬೌದ್ದಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಶಾಲೆಗಳ ಅಭಿವೃದ್ದಿಯಾಗಬೇಕು. ಆಸಕ್ತ ಕ್ಷೇತ್ರಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ, ಸಹಕಾರಗಳೊಂದಿಗೆ ವಿದ್ಯಾಥರ್ಿಗಳ ಶ್ರೇಯೋಭಿವೃದ್ದಿಗೆ ಪ್ರಯತ್ನಿಸಿದಾಗ ಸಮಗ್ರ ಶಿಕ್ಷಣದ ಪರಿಕಲ್ಪನೆ ಸಾಕಾರವಾಗುವುದು ಎಂದು ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಕರೆನೀಡಿದರು.
    ಕುಂಬಳೆ ಗ್ರಾ.ಪಂ. ವತಿಯಿಂದ 2017-18ನೇ ವಾಷರ್ಿಕ ಯೋಜನೆಯಲ್ಲಿ ಮೀಸಲಿರಿಸಿ ಶಾಲೆಗಳಿಗೆ ವಿತರಿಸಲಾಗುವ ಕ್ರೀಡಾ ಕಿಟ್ ಗಳ ವಿತರಣೆಯನ್ನು ಇತ್ತೀಚೆಗೆ ಕುಂಬಳೆ ಗ್ರಾ.ಪಂ. ಸಭಾಂಗಣದಲ್ಲಿ ವಿತರಿಸಿ ಅವರು ಮಾತನಾಡಿದರು.
   ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಕ್ಷೇಮ ಕಾರ್ಯಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮಾ ಅಬ್ದುಲ್ಲ ಕುಂಞಿ, ಮೊಹಮ್ಮದಾಲಿ, ಗ್ರಾ.ಪಂ. ಸದಸ್ಯರುಗಳಾದ ರಮೇಶ್ ಭಟ್, ಸುಜಿತ್ ರೈ, ಸುಧಾಕರ ಕಾಮತ್, ಪ್ರೇಮಲತಾ, ಮೊಹಮ್ಮದ್ ಕುಂಞಿ, ಸೈನಬ, ಸಜಿನಿ ಉಪಸ್ಥಿತರಿದ್ದರು. ಗ್ರಾ.ಪಂ. ವಿದ್ಯಾಭ್ಯಾಸ ಸಮಿತಿ ಕಾರ್ಯದಶರ್ಿ ರಾಮಚಂದ್ರ ಭಟ್ ಸ್ವಾಗತಿಸಿ, ಕೇಶವ ಮಾಸ್ತರ್ ವಂದಿಸಿದರು.
   ಯೋಜನೆಯನ್ವಯ ಗ್ರಾ.ಪಂ. ವ್ಯಾಪ್ತಿಯ 15 ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ 5 ಎಂಜಿಎಲ್ಸಿ ಶಾಲೆಗಳಿಗೆ ಕ್ರೀಡಾ ಕಿಟ್ ವಿತರಿಸಲಾಯಿತು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries