ಕಾಟುಕುಕ್ಕೆ ಸೆಕಂಡರಿ ಶಾಲೆಯಲ್ಲಿ ಎನ್ಎಸ್ಎಸ್ ತಿಳುವಳಿಕಾ ಶಿಬಿರ
ಪೆರ್ಲ: ಸೇವಾ ಮನೋಭಾವವನ್ನು ಬದುಕಿನಲ್ಲಿ ರೂಢಿಸಿ ಕೊಳ್ಳುವಂತೆ ಮಾಡುವಲ್ಲಿ ಎನ್ಎಸ್ಎಸ್ ಕೊಡುಗೆ ಅಮೂಲ್ಯವಾದುದು, ಶಿಬಿರಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ವಿದ್ಯಾಥರ್ಿಗಳಲ್ಲಿ ಸಂಘಟನಾ ಚಾತುರ್ಯವು ವೃದ್ಧಿಸುವುದು ಎಂದು ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಅಭಿಪ್ರಾಯಪಟ್ಟರು.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಫ್ಲಸ್ ವನ್ ವಿದ್ಯಾಥರ್ಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ ಎನ್ಎಸ್ಎಸ್ ಕುರಿತ ತಿಳುವಳಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಎನ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾಥರ್ಿಗಳಲ್ಲಿ ಉಂಟಾಗುವ ವ್ಯಕ್ತಿತ್ವ ವಿಕಾಸದ ಕುರಿತಾಗಿ ನಿರ್ಗಮಿತ ಯೋಜನಾಧಿಕಾರಿ ಸಂದೀಪ್ ಕುಮಾರ್ ಎನ್.ವಿ. ವಿವರಿಸಿದರು. ಕಲಾ ವಿಭಾಗದ ಅದ್ಯಾಪಕ ರಾಜೇಶ್ ಸಿ.ಎಚ್. ನೂತನ ಶೈಕ್ಷಣಿಕ ವರ್ಷದ ಎಲ್ಲಾ ಚಟುವಟಿಕೆಗಳಿಗೆ ಶುಭ ಹಾರೈಸಿದರು.
ಎನ್ಎಸ್ಎಸ್ ನೇತೃತ್ವದಲ್ಲಿ ನಡೆಯುವ ಎಲ್ಲಾ ಚಟುವಟಿಗಳು, ಶಿಬಿರದ ಸಮಯದಲ್ಲಿ ವಿದ್ಯಾಥರ್ಿಗಳು ಅನುಸರಿಸಬೇಕಾದ ಶಿಷ್ಟಾಚಾರಗಳ ಕುರಿತು ಯೋಜನಾಧಿಕಾರಿ ಮಹೇಶ ಏತಡ್ಕ ವಿವರಿಸಿದರು. ವಾಣಿ ಕೆ. ಸ್ವಾಗತಿಸಿ ರಮಣಿ ಎಮ್.ಎಸ್. ವಂದಿಸಿದರು.ಶಿಕ್ಷಕ ವೃಂದ, ಪ್ಲಸ್ ವನ್ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.