HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ವಿದ್ಯಾಥರ್ಿಗಳಿಗೆ ಪಾಠವಾದ ಗದ್ದೆ ಬೇಸಾಯ
      ಬದಿಯಡ್ಕ: ಆಧುನಿಕ ಶಿಕ್ಷಣ ವ್ಯವಸ್ಥೆಯ ಆಕರ್ಷಣೀಯತೆಯ ಮಧ್ಯೆ ಇದೀಗ ಅಲ್ಲಲ್ಲಿ ಪರಂಪರೆಯ ಹಿನ್ನೋಟ, ಕಳಕೊಂಡ ಗ್ರಾಮೀಣ ಬದುಕಿನ ಬಗೆಗಿನ ಆಸಕ್ತಿ ಚಿಗುರುಡೆಯುತ್ತಿದ್ದು, ಹಳ್ಳಿ ಬದುಕು, ಕೃಷಿಯೇ ಶ್ರೇಷ್ಠವೆಂಬ ಭಾವ ಮೂಡತೊಡಗಿದೆ. ಶಾಲಾ ಪಠ್ಯದ ಭಾಗವಾಗಿ ಅದರಲ್ಲಿ ಬಿಂಬಿಸಿರುವ ಹಳ್ಳಿ, ಕೃಷಿ ಮೊದಲಾದವುಗಳನ್ನು ನೇರ ಸಂದಶರ್ಿಸುವ ಹೆಸರಿನಲ್ಲಿ ಒಂದಷ್ಟು ಆಸಕ್ತ ಮನಸ್ಸುಗಳನ್ನು ಸೆಳೆಯುವಲ್ಲಿ ಯತ್ನಗಳು ಸಾಗುತ್ತಿವೆ.
    ಮಾನವನ ಹಸಿವನ್ನು ನೀಗಿಸುವ ನೇಗಿಲ ಯೋಗಿಯ ಕಷ್ಟವನ್ನು ಕೇವಲ ಪುಸ್ತಕದಿಂದಷ್ಟೇ ಓದಿ ತಿಳಿದಿರುವ ವಿದ್ಯಾಥರ್ಿಗಳಲ್ಲಿ ಆ ಬಗೆಗಿನ ಸತ್ಯದರ್ಶನ ನಡೆಸುವ ನಿಟ್ಟಿನಲ್ಲಿ ಮ್ವಾರು ಶಾಲಾ ಶಿಕ್ಷಕರು ವಿದ್ಯಾಥರ್ಿಗಳನ್ನು ನೇರವಾಗಿ ಗದ್ದೆಗೆ ಕರೆದೊಯ್ದು ಭತ್ತ ಕೃಷಿಯ ಪ್ರಾತ್ಯಕ್ಷಿಕೆಯನ್ನು ಬುಧವಾರ ಏರ್ಪಡಿಸಿದ್ದರು.
   ಭತ್ತದ ಕೃಷಿಯ ಹಲವು ಹಂತಗಳ ಪೈಕಿ ನೇಜಿ ನಡುವುದನ್ನು ಪ್ರತ್ಯಕ್ಷವಾಗಿ ನೋಡುವ ಮತ್ತು ಪಾಲ್ಗೊಳ್ಳುವ ಅವಕಾಶವು ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ಮೂಲಕ ಒದಗಿ ಬಂತು.ಶಾಲಾ ಸಮೀಪದ ಪ್ರಗತಿಪರ ಭತ್ತದ ಕೃಷಿಕರಾದ ಅರಸಪ್ಪ ಪೂಜಾರಿಯವರ ಭತ್ತದ ಗದ್ದೆಯನ್ನು ಶಿಕ್ಷಕರೊಂದಿಗೆ ಮಕ್ಕಳು ಸಂದಶರ್ಿಸಿದರು.ಕೆಸರ ಗದ್ದೆಯಲ್ಲಿ ಯಾವುದೇ ಅಂಜಿಕೆಯಿಲ್ಲದೇ ರೈತರ ಜೊತೆಗೂಡಿ ನಾಟಿ ಹಾಡಿನೊಂದಿಗೆ ನಾಟಿಯ ನೈಜ ಅನುಭವವನ್ನು ಪಡಕೊಂಡರು.ಇದುವರೆಗೂ ಗದ್ದೆಯನ್ನು ದೂರದಿಂದ ನೋಡಿದ ಮಕ್ಕಳು ಗದ್ದೆಗಿಳಿದು ಕೃಷಿಯಲ್ಲಿ ತೊಡಗಿ ಹೊಸ ಅನುಭವ ಸವಿದರು. ಅಧ್ಯಾಪಕರಾದ ವಿಘ್ನೇಶ ಶಮರ್ಾ,ಅಧ್ಯಾಪಿಕೆಯರಾದ ಸುಮತಿ.ಬಿ ಹಾಗೂ ಭಾಗ್ಯ ಜ್ಯೋತಿ ವಿದ್ಯಾಥರ್ಿಗಳ ಗದ್ದೆ ಪಾಠಕ್ಕೆ ಜೊತೆಗಿದ್ದು ಸಹಕರಿಸಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries