ಗಂಗಾ ನದಿ ನೀರು ದಿನನಿತ್ಯದ ಬಳಕೆಗೆ ಯೋಗ್ಯವಾಗಿಲ್ಲ: ಪವಿತ್ರ ನದಿಯ ದುಸ್ಥಿತಿಗೆ ಎನ್'ಜಿಟಿ ವಿಷಾದ
ನವದೆಹಲಿ: ಭಾರತೀಯರ ಪಾಲಿನ ಪವಿತ್ರ ನದಿ ಗಂಗೆಯ ನೀರು ಕುಡಿಯಲು ಅಥವಾ ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಘೋಷಿಸಿದೆ. ಪವಿತ್ರ ಕ್ಷೇತ್ರ ಹರಿದ್ವಾರದಿಂದ ಉತ್ತರ ಪ್ರದೇಶದ ಉನ್ನಾವೋ ವರೆಗಿನ ಗಂಗಾ ನದಿಯ ನೀರು ಕುಡಿಯಲು, ಸ್ನಾನ ಹಾಗೂ ಇತರೆ ಬಳಕೆಗೆ ಅರ್ಹವಾಗಿಲ್ಲ ಎಂದು ಪೀಠವು ಹೇಳಿದ್ದು ಈ ಸಂಬಂಧ ವಿಷಾದ ವ್ಯಕ್ತಪಡಿಸಿದೆ.
ನದಿ ನೀರು ತಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ತಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎನ್ನುವುದನ್ನು ಅರಿಯದ ಮುಗ್ದ ಜನರು ಗಂಗೆಯ ನೀರನ್ನೇ ಕುಡಿಯುತ್ತಾರೆ, ಇಲ್ಲೇ ಸ್ನಾನವನ್ನು ಮಾಡುತ್ತಾರೆ.ಸಿಗರೇಟ್ ಪ್ಯಾಕ್ ಗಲಲ್ಲಿ ಹೇಗೆ ಎಚ್ಚರಿಕೆ ಸಂದೇಶವಿರುತ್ತದೆಯೋ ಹಾಗೆಯೇ ನದಿಯ ನೀರಿನ ಬಗೆಗೆ ಸಹ ಎಚ್ಚರಿಕೆ ಸಂದೇಶ ಸಾರಬೇಕಾಗುತ್ತದೆ ಎಂದು ಹಸಿರು ಪೀಠ ಅಭಿಪ್ರಾಯ ಪಟ್ಟಿದೆ.
ಎನ್ಜಿಟಿ ಮುಖ್ಯಸ್ಥ ಎ.ಕೆ. ಗೋಯೆಲ್ ನೇತೃತ್ವದ ಪೀಠವು ಗಂಗಾ ನದಿ ನೀರಿನ ಪರಿಶುದ್ದತೆ ಬಗೆಗೆ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ನದಿಯಿಂದ ನೂರು ಮೀಟರ್ ಅಂತರದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್ (ಎನ್ ಎಂಸಿಜಿ) ಗೆ ನಿದರ್ೇಶನನ ನೀಡಿದೆ.
ಎನ್ಎಂಸಿಜಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎರಡು ವಾರಗಳೊಳಗೆ ತಮ್ಮ ಅಧಿಕೃತ ವೆಬ್ ಸೈಟ್ ಗಳಲ್ಲಿ ಗಂಗೆಯಲ್ಲಿ ಸ್ನಾನ ಹಾಗೂ ಕುಡಿಯುವುದಕ್ಕೆ ಯೋಗ್ಯವಾದ ನಿರು ಎಲ್ಲೆಲ್ಲಿ ಸಿಗಲಿದೆ ಎನ್ನುವ ಕುರಿತು ಒಂದು ನಕ್ಷೆಯನ್ನು ಅಳವಡಿಸಬೇಕು ಎಂದು ಪೀಠವು ಆದೇಶಿಸಿದೆ.