HEALTH TIPS

No title

                   ಸಾಹಿತಿಗಳ ಮಾಹಿತಿ ಅಭಿಯಾನಕ್ಕೆ ಸಚಿವೆಯಿಂದ ಚಾಲನೆ
    ಬದಿಯಡ್ಕ: ಕಾಸರಗೋಡಿನ ಸಾಹಿತ್ಯ ವಲಯದ ಕನ್ನಡ ಚಳವಳಿಗಾರರ ಸಮಗ್ರ ಮಾಹಿತಿ ಕಲೆಹಾಕಿ ಕೈಪಿಡಿಯನ್ನು ಹೊರತರುವ ಕಾರ್ಯ ಶ್ಲಾಘನೀಯ  ಎಂದು ಕನರ್ಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು.
   ಸುಬ್ಬಯ್ಯಕಟ್ಟೆ ಕೈರಳಿ ಪ್ರಕಾಶನ ಬಿಡುಗಡೆಗೊಳಿಸುವ ಕಾಸರಗೋಡಿನ ಸಾಹಿತಿಗಳ ಮಾಹಿತಿ ಅಭಿಯಾನಕ್ಕೆ ಬುಧವಾರ ಮಂಗಳೂರಿನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
   ಕಾಸರಗೋಡು ಬಹುಭಾಷೆ, ಸಂಸ್ಕೃತಿಗಳ ನೆಲೆವೀಡು. ಕನ್ನಡ ಸಾರಸ್ವತ ಲೋಕವು ಇಲ್ಲಿ ಸಂಪತ್ಸಮೃದ್ಧವಾಗಿದೆ. ಇಲ್ಲಿನ ಕನ್ನಡ ಹೋರಾಟ, ಚಳವಳಿಯು ದೇಶಕ್ಕೆ ಮಾದರಿ.ಆದರೆ ಇಲ್ಲಿನ ಸಾಹಿತಿಗಳ, ಚಳವಳಿಗಾರರ ಸಮಗ್ರ ಮಾಹಿತಿಯ ದಾಖಲೀಕರಣ ಇನ್ನೂ ಆಗಿಲ್ಲ. ಈ ನಿಟ್ಟಿನಲ್ಲಿ ಸಮಗ್ರ ಮಾಹಿತಿಯ ಕೋಶ ರಚಿಸಲು ಮುಂದಾಗಿರುವ ಕೈರಳಿ ಪ್ರಕಾಶನದ ಸಾಹಸ ನಿಜಕ್ಕೂ ಶ್ಲಾಘನೀಯ ಎಂದು ಸಚಿವೆ ತಿಳಿಸಿದರು.
   ಈ ಸಂದರ್ಭದಲ್ಲಿ ಕೈರಳಿ ಪ್ರಕಾಶನದ ಎ.ಆರ್.ಸುಬ್ಬಯ್ಯಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ ನಿದರ್ೇಶಕ ದೇವಿ ಪ್ರಸಾದ್ ಶೆಟ್ಟಿ, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕೋಶಾಧಿಕಾರಿ ರವಿ ನಾಯ್ಕಾಪು ಮೊದಲಾದವರು ಉಪಸ್ಥಿತರಿದ್ದರು.
  ಕೈಪಿಡಿಯ ಬಗ್ಗೆ :
 ಎಲೆಮರೆಯ ಕಾಯಿಗಳಾಗಿರುವ ಕಾಸರಗೋಡಿನ ಪ್ರತಿಭಾವಂತ ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಹೊರತರುವ ಕೈಂಕರ್ಯವನ್ನು ಕೈರಳಿ ಪ್ರಕಾಶನವು ದಶಕಗಳಿಂದ ಮುಂದುವರಿಸಿದೆ. ಇದೀಗ ಎರಡನೇ ಹಂತವಾಗಿ ಕನ್ನಡ ಸಾಹಿತಿಗಳ, ಚಳವಳಿಗಾರರ ಪರಿಶ್ರಮ, ಕಟ್ಟುಪಾಡು, ವಚನ ಬದ್ಧತೆ, ಸಾಧನೆ ಮತ್ತು ಕೊಡುಗೆಗಳನ್ನು ಗುರುತಿಸುವ, ಪರಿಚಯಿಸುವ  ದಾಖಲಿಸುವ ಅಭಿಯಾನವನ್ನು ಕೈಗೊಂಡಿದೆ.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries