ಅಗಲ್ಪಾಡಿ ಯಾದವ ಸೇವಾ ಸಂಘದ ಮಹಾಸಭೆ
ಬದಿಯಡ್ಕ : ಯಾದವ ಸೇವಾ ಸಂಘ ಅಗಲ್ಪಾಡಿ ಇದರ ಮಹಾಸಭೆಯು ಬಲಿವಾಡು ಕೂಟದೊಂದಿಗೆ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರ ಅಗಲ್ಪಾಡಿಯಲ್ಲಿ ಇತ್ತೀಚೆಗೆ ನಡೆಯಿತು. ಕಳೆದ ಆರುವತ್ತು ವರುಷಗಳಿಂದ ಸಕ್ರಿಯವಾಗಿರುವ ಯಾದವ ಸೇವಾ ಸಂಘದ ಈ ಮಹಾಸಭೆಗೆ ಮುಖ್ಯ ಅತಿಥಿಯಾಗಿ ಅಖಿಲ ಕೇರಳ ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ನೀಚರ್ಾಲು ಭಾಗವಹಿಸಿದರು. ಬಾಬು ಮಾಸ್ತರ್ ಅಗಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯಲ್ಲಿ ಅಗಲ್ಪಾಡಿ ಕ್ಷೇತ್ರದ ಆಡಳಿತ ಮೋಕ್ತೆಸರ ವಾಸುದೇವ ಭಟ್ ಉಪ್ಪಂಗಳ ಕಾರ್ಯಕ್ರಮಕ್ಕೆ ಶುಭಕೋರಿ ಶ್ರೀಕ್ಷೇತ್ರ ಅಗಲ್ಪಾಡಿಯ ನವೀಕರಣ ಹಾಗೂ ಶತಮಾನೋತ್ಸವದ ಮಾಹಿತಿಯನ್ನು ಸಮುದಾಯ ಭಾಂದವರಿಗೆ ನೀಡಿ ಈ ಮಹಾಕಾರ್ಯಕ್ಕೆ ಸರ್ವ ವಿಧದ ಸಹಕಾರಗಳನ್ನು ನೀಡಬೇಕೆಂದು ಆಹ್ವಾನ ನೀಡಿದರು. ವೇದಿಕೆಯಲ್ಲಿ ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು, ಅಚ್ಚುತ ಮಾಸ್ತರ್ ಅಗಲ್ಪಾಡಿ, ಅಶೋಕ ಮಾಸ್ತರ್ ಅಗಲ್ಪಾಡಿ, ಉದಯ ಕುಮಾರ್ ಕಲ್ಲಕಟ್ಟ, ವಸಂತಿ ಟೀಚರ್ ಅಗಲ್ಪಾಡಿ, ಬಾಬು ಮಣಿಯಾಣಿ ಜಯನಗರ, ರಮೇಶ್ಕೃಷ್ಣ ಪದ್ಮಾರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2018-2022ನೇ ಸಾಲಿನ ನೂತನ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಯಿತು. ನೂತನ ಸಮಿತಿ ಅಧ್ಯಕ್ಷರಾಗಿ ಕುಂಞಿರಾಮ ಮಣಿಯಾಣಿ ಪದ್ಮಾರು, ಪ್ರಧಾನ ಕಾರ್ಯದಶರ್ಿಯಾಗಿ ನಾರಾಯಣ ಪದ್ಮಾರು ಅವರನ್ನು ಆರಿಸಲಾಯಿತು. ಹಾಗೂ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ನೂತನ ಅಧ್ಯಕ್ಷರಾಗಿ ಬಾಬು ಮಾಸ್ತರ್ ಅಗಲ್ಪಾಡಿ, ಪ್ರಧಾನ ಕಾರ್ಯದಶರ್ಿ ರಮೇಶ್ ಕೃಷ್ಣ ಪದ್ಮಾರು, ಕೋಶಾಧಿಕಾರಿಯಾಗಿ ಅಚ್ಚುತ ಪದ್ಮಾರು ಆಯ್ಕೆಯಾದರು. ಅಚ್ಚುತ ಮಾಸ್ತರ್ ಅಗಲ್ಪಾಡಿ ಲೆಕ್ಕ ಪತ್ರ ಮಂಡಿಸಿದರು. ಉದಯ ಕುಮಾರ್ ಕಲ್ಲಕಟ್ಟ ಸ್ವಾಗತಿಸಿ, ಮೋಹನ ಪದ್ಮಾರು ವಂದಿಸಿದರು.