ಆನೆಗುಂದಿ ಶ್ರೀಗಳ ಭೇಟಿ
ಮಂಜೇಶ್ವರ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನಂ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ಥೇಂದ್ರ ಸರಸ್ವತಿ ಮಹಾ ಸ್ವಾಮಿಗಳವರು ವಿಲಂಬಿ ನಾಮ ಸಂವತ್ಸರದ ಚಾತುಮರ್ಾಸ್ಯ ವೃತಾಚರಣೆಯನ್ನು ಜು. 27 ರಿಂದ ಸೆ. 25 ರ ವರೆಗೆ ಉಡುಪಿ ಪಡುಕುತ್ಯಾರಿನಲ್ಲಿರುವ ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದಲ್ಲಿ ಆಚರಿಸುವರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಕರಾವಳಿಯ ಶ್ರೀಕಾಳಿಕಾಂಬಾ ದೇಗುಲಗಳ ಸಂದರ್ಶನ ಯಾತ್ರೆಗೆ ಶ್ರೀಗಳು ಶನಿವಾರ ಆರಂಭಿಸಿದರು.
ಶನಿವಾರ ಬೆಳಿಗ್ಗೆ ಕೋಟೆಕಾರ್ ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ತೆರಳಿ ಬಳಿಕ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರಕ್ಕೆ ಚಿಥೈಸಿದರು. ಈ ವೇಳೆ ಕ್ಷೇತ್ರದ ಆಡಳಿತ ಸಮಿತಿ, ಮಹಿಳಾ ಸಮಿತಿ, ಓಜ ಸಾಹಿತ್ಯ ಕೂಟ, ಶ್ರೀಗುರು ಸೇವಾ ಪರಿಷತ್ ವತಿಯಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಬಳಿಕ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು ನೆರೆದ ಭಕ್ತರಿಗೆ ಆಶೀರ್ವಚನದೊಂದಿಗೆ ಫಲ ಮಂತ್ರಾಕ್ಷತೆ ನೀಡಿದರು. ಬಳಿಕ ಆರಿಕ್ಕಾಡಿ ಕಾಲರ್ೆ ಶ್ರೀ ಕಾಳಿಕಾಂಬಾ ದೇವಸ್ಥಾನ, ಅಪರಾಹ್ನ ಮಧೂರು ಶ್ರೀ ಕಾಳಿಕಾಂಬಾ ಮಠ, ಸಂಜೆ ಕಾಳ್ಯಂಗಾಡ್ ಶ್ರೀ ಪರಶಿವ ವಿಶ್ವಕರ್ಮ ಕ್ಷೇತ್ರಕ್ಕೆ ತೆರಳಿದರು. ಕ್ಷೇತ್ರಗಳ ಸಂದರ್ಶನದ ವೇಳೆ ಕ್ಷೇತ್ರಗಳ ಆಡಳಿತ ಮೊಕ್ಥೇಸರರು, ಪಧಾಧಿಕಾರಿಗಳು, ಪ್ರತಿಷ್ಠಾನದ ಪಧಾಧಿಕಾರಿಗಳು ಸದಸ್ಯರು, ಚಾತುಮರ್ಾಸ್ಯ ವೃತ ನಿರ್ವಹಣಾ ಸಮಿತಿ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.