HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ತಾಜ್ ಮಹಲ್ ರಕ್ಷಣೆಗೆ ಕೇಂದ್ರ ಸಕರ್ಾರ ನಿರ್ಲಕ್ಷ್ಯ, ಸುಪ್ರೀಂ ಕೋಟರ್್ ತರಾಟೆ
      ನವದೆಹಲಿ: ವಿಶ್ವ ಪ್ರಸಿದ್ಧ ಪಾರಂಪರಿಕ  ತಾಣ ತಾಜ್ ಮಹಲ್ ರಕ್ಷಣೆಯಲ್ಲಿ ಕೇಂದ್ರ ಸಕರ್ಾರ ಹಾಗೂ ಸಂಬಂಧಿತ ಆಡಳಿತ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂ ಕೋಟರ್್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
     ತಾಜ್ ಮಹಲ್  ಸಂರಕ್ಷಿಸುವಲ್ಲಿ ಕೇಂದ್ರಸಕರ್ಾರ ಹಾಗೂ ಭಾರತೀಯ ಪುರಾತತ್ವ  ಸಮೀಕ್ಷೆ   ಇಲಾಖೆ ನಿರ್ಲಕ್ಷ್ಯ ವಹಿಸಿವೆ ಎಂದು ಕಿಡಿಕಾರಿದ ಸುಪ್ರೀಂಕೋಟರ್್, ತಾಜ್ ಮಹಲ್ ಗತವೈಭವವನ್ನು ಮರುಸ್ಥಾಪಿಸಿ ಇಲ್ಲವೇ ಅದನ್ನು ಕೆಡವಿ ಎಂದು  ಕೇಂದ್ರಸಕರ್ಾರಕ್ಕೆ ತಾಕೀತು ಮಾಡಿದೆ.
    ಐಪೆಲ್ ಟವರ್ ಗಿಂತಲೂ ತಾಜ್ ಮಹಲ್ ಸುಂದರವಾಗಿದೆ. ಟಿವಿ ಟವರ್ ನಂತಿರುವ  ಐಪೆಲ್ ಟವರ್ ನ್ನು 80 ಮಿಲಿಯನ್ ಪ್ರವಾಸಿಗರು ವೀಕ್ಷಿಸುತ್ತಾರೆ. ಆದರೆ, ನಮ್ಮ ತಾಜ್ ಮಹಲ್ ಅದಕ್ಕಿಂತಲೂ ಸುಂದರವಾಗಿದೆ . ಆದರೆ,ಕೇಂದ್ರಸಕರ್ಾರದ ನಿರಾಸಕ್ತಿಯಿಂದಾಗಿ ದೇಶಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ನ್ಯಾಯಾಲಯ ಕಿಡಿಕಾರಿದೆ.
    ಮೊಘಲ್ ಚಕ್ರವತರ್ಿ ಷಹಜಾನ್ ತನ್ನ ಮಡದಿಗೋಸ್ಕರ್ ಕಟ್ಟಿಸಿದ ತಾಜ್ ಮಹಲ್ ಸಂರಕ್ಷಣೆಗಾಗಿ ದೃಷ್ಟಿ ದಾಖಲೆ  ಕರಡು ರೂಪಿಸುವಲ್ಲಿ ಈ ಹಿಂದೆ ಉತ್ತರ ಪ್ರದೇಶ ಸಕರ್ಾರ  ಸುಪ್ರೀಂಕೋಟರ್್ ಗೆ ಹೇಳಿಕೆ ನೀಡಿತ್ತು. ಆದರೆ. ಅದನ್ನು ನ್ಯಾಯಾಧೀಶರ ಮುಂದೆ ಮಂಡಿಸುವಲ್ಲಿ ಉತ್ತರ ಪ್ರದೇಶ ಸಕರ್ಾರ ವಿಫಲವಾದ್ದರಿಂದ  ನ್ಯಾಯಮೂತರ್ಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
    ಕಲುಷಿತ ಅನಿಲದಿಂದಾಗಿ ತಾಜ್ ಮಹಲ್ ಸುತ್ತಮುತ್ತಲಿನ ಪ್ರದೇಶದಲ್ಲಿನ ಪರಿಸರ ಹಾಳಾಗಿದ್ದು, ಇದನ್ನು ರಕ್ಷಿಸಬೇಕೆಂದು   ಪರಿಸರ ತಜ್ಞ ಎಂ. ಜಿ. ಮೆಹ್ತಾ  ಸುಪ್ರೀಂಕೋಟರ್ಿಗೆ ಅಜರ್ಿ ಸಲ್ಲಿಸಿದ್ದರು.
    ಈ ಅಜರ್ಿ ವಿಚಾರಣೆ ನಡೆಸಿದ ನ್ಯಾಯಮೂತರ್ಿಗಳಾದ  ಎಂ. ಬಿ. ಲೊಕುರ್ ಮತ್ತು ದೀಪಕ್ ಗುಪ್ತಾ ಅವರಿದ್ದ  ದ್ವಿಸದಸ್ಯ ಪೀಠ, ತಾಜ್ ಮಹಲ್ ರಕ್ಷಣೆ ಕುರಿತ ಸಂಸದೀಯ ಸಮಿತಿ ವರದಿ ಹೊರತುಪಡಿಸಿ ಕೇಂದ್ರಸಕರ್ಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿತು.
     ತಾಜ್ ಮಹಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ವಾಯುಮಾಲಿನ್ಯ ಪ್ರಮಾಣ ಕುರಿತು ವರದಿ ನೀಡಲು ಕಾನ್ಪುರದಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಹೇಳಲಾಗಿದ್ದು,  ಇನ್ನೂ ನಾಲ್ಕು ತಿಂಗಳೊಳಗೆ ವರದಿ ನೀಡುವುದಾಗಿ ಕೇಂದ್ರ ಸಕರ್ಾರ ಸುಪ್ರೀಂಕೋಟರ್ಿಗೆ ತಿಳಿಸಿದೆ.
ಅಲ್ಲದೇ ವಾಯುಮಾಲಿನ್ಯದಿಂದ ರಕ್ಷಣೆಗಾಗಿ ಸಲಹೆ ನೀಡಲು ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೇಂದ್ರ ಸಕರ್ಾರ ಸುಪ್ರೀಂ ಕೋಟರ್ಿಗೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries