HEALTH TIPS

No title

             ವೀಸಾ ಅಜರ್ಿ ತಿರಸ್ಕಾರದಿಂದ ಯೋಜನೆ ವೆಚ್ಚ ಅಧಿಕವಾಗಿ ವಿಳಂಬತೆ ಉಂಟಾಗಬಹುದು: ಇನ್ಫೋಸಿಸ್
    ನವದೆಹಲಿ: ಕೆಲಸದ ವೀಸಾ ಅಜರ್ಿಗಳು ತಿರಸ್ಕೃತವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ, ಇದರಿಂದ ಗ್ರಾಹಕರ ಯೋಜನೆ ವೆಚ್ಚಗಳು ಅಧಿಕವಾಗುವುದಲ್ಲದೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
    ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳು, ಭಾರತೀಯ ಐಟಿ ಉದ್ಯೋಗಿಗಳಿಗೆ ಕೆಲಸದ ವೀಸಾ ನೀಡುವುದರಲ್ಲಿ ಸೂಕ್ಷ್ಮ ಪರಿಶೀಲನೆ ಮಾಡುತ್ತಿರುವುದರಿಂದ ಪ್ರಾಜೆಕ್ಟ್ ಗಳ ಕೆಲಸದಲ್ಲಿ ವಿಳಂಬವಾಗುತ್ತಿರುವುದು ಮನಗಂಡು ಪ್ರಮುಖ ಕೆಲಸದ ಮಾರುಕಟ್ಟೆಯಲ್ಲಿ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.
   ಇತ್ತೀಚಿನ ದಿನಗಳಲ್ಲಿ ವೀಸಾ ಅಜರ್ಿಗಳ ತಿರಸ್ಕಾರದಲ್ಲಿ ಹೆಚ್ಚಳವಾಗಿದೆ. ಇದರಿಂದ ಕಂಪೆನಿಯ ಕೆಲಸದ ಮೇಲೆ ಪರಿಣಾಮ ಉಂಟಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಸಮಯಕ್ಕೆ ಸರಿಯಾಗಿ ವೀಸಾ ಪಡೆದು ಸಿಬ್ಬಂದಿಗಳಿಂದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಪ್ರಾಜೆಕ್ಟ್ ಗಳು ವಿಳಂಬವಾಗುವುದಲ್ಲದೆ ಹೆಚ್ಚಿನ ವೆಚ್ಚವಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ.
   ಕಂಪೆನಿಯು ವೀಸಾಗೆ ಅವಧಿಗಿಂತ ಮೊದಲೇ ಅಜರ್ಿಗಳನ್ನು ಸಲ್ಲಿಸಬೇಕಾಗಬಹುದು ಅಥವಾ ಇಂತಹ ವೀಸಾಗಳ ನಿರ್ವಹಣೆಯಿಂದ ಹೆಚ್ಚುವರಿ ವೆಚ್ಚ ಉಂಟಾಗಬಹುದು ಎಂದು ಹೇಳಿದ್ದಾರೆ.
   ಅಮೆರಿಕಾ ಸಕರ್ಾರ ವಲಸೆ ಮತ್ತು ಕೆಲಸ ಅನುಮತಿ ನಿಯಮದಲ್ಲಿ ಬದಲಾವಣೆ ತಂದರೆ ಕಂಪೆನಿಯ ಅಂತಾರಾಷ್ಟ್ರೀಯ ಕಾರ್ಯತಂತ್ರ ಮತ್ತು ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದಿದೆ.
   ಈ ಹಿಂದೆ ಇನ್ಫೋಸಿಸ್, ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳ ಕಠಿಣ ಕೆಲಸದ ವೀಸಾದಿಂದಾಗಿ ತನ್ನ ಉದ್ಯಮ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ, ಸ್ಥಳೀಯರನ್ನು ನೇಮಿಸಿಕೊಂಡು ಅವರಿಗೆ ಕೆಲಸದ ತರಬೇತಿ ನೀಡಲಾಗುವುದು ಎಂದು ಹೇಳಿಕೆ ನೀಡಿತ್ತು.
ಕಳೆದ ಕೆಲ ತಿಂಗಳಲ್ಲಿ ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳು ತಾತ್ಕಾಲಿಕ ಕೆಲಸ ವೀಸಾ ನೀಡಿಕೆಯಲ್ಲಿ ಕಠಿಣ ಕ್ರಮಗಳನ್ನು ಅನುಸರಿಸುತ್ತಿವೆ. ಇದರಿಂದಾಗಿ ಸಾಗರೋತ್ತರ ಭಾರತೀಯ ಐಟಿ ಕಂಪೆನಿಗಳು ವೀಸಾಗೆ ಹೆಚ್ಚು ಅವಲಂಬಿತವಾಗದೆ ಸ್ಥಳೀಯರನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries