ಕನ್ನಡ ಗಝಲ್
ಕವಯಿತ್ರಿ: ಚೇತನಾ ಕುಂಬಳೆ.
ನಾಲಿಗೆ ಮೌನಕ್ಕೆ ಜಾರುವಾಗ, ಕತ್ತಿ ಮಾತನಾಡುತ್ತಿದೆ
ಮಿಡಿವ ಹೃದಯ ದ್ವೇಷದ ಬೆಂಕಿಯಲ್ಲಿ ಉರಿಯುತ್ತಿದೆ//
ಮನದ ಗಾಯಕ್ಕೆ ಒಲವ ಮುಲಾಮು ಹಚ್ಚಿದರೂ
ಮಾಸದ ಹಸಿಗುರುತೊಂದು ನರಳಿ ಒದ್ದಾಡುತ್ತಿದೆ//
ಸಾಂತ್ವನಿಸುವ ತಂಗಾಳಿಯಲ್ಲೂ ಬಿಸಿನಿಟ್ಟುಸಿರು
ಸುಡುವ ಧಗೆಗೆ ಭುವಿಯೊಡಲು ಕಾವೇರುತ್ತಿದೆ//
ಎದೆಯ ನೋವುಗಳು ಅಳುವುದನ್ನೇ ಮರೆತಿರುವಾಗ
ಭಾವನೆಗಳಿಗೆ ಸ್ಪಂದಿಸದ ಮನಸ್ಸು ಸತ್ತು ಬದುಕುತ್ತಿದೆ//
ಜೊತೆಗಿದ್ದು ನೆರಳಾಗಿರಬೇಕಾದವರೇ ದೂರ ಸರಿಯುವಾಗ
ಅಗಲುವಿಕೆ ಅನಿವಾರ್ಯವೆಂಬ ಕಟುಸತ್ಯದ ದರ್ಶನವಾಗುತ್ತಿದೆ//
-ಚೇತನಾ ಕುಂಬಳೆ