HEALTH TIPS

No title

            ಕನ್ನಡ ಗಝಲ್
                    ಕವಯಿತ್ರಿ ಚೇತನಾ ಕುಂಬಳೆ:

ನಿನ್ನನ್ನರಸಿ ಹೊರಟ ಹೆಜ್ಜೆಗಳೆಲ್ಲ ದಾರಿತಪ್ಪಿವೆ ಗೆಳೆಯಾ
ಹೋದಲ್ಲಿ ಬಂದಲ್ಲೆಲ್ಲ ನಿನ್ನನ್ನೇ ಹುಡುಕುತ್ತಿರುವೆ ಗೆಳೆಯಾ

ಕಣ್ಣ ತುಂಬ ಕನಸುಗಳಿವೆ ಕನಸಲ್ಲಿ ನೀನೇ ತುಂಬಿರುವೆ
ಮನದ ತುಂಬ ನಿನ್ನನ್ನು ಸೇರುವ ತವಕಗಳಿವೆ ಗೆಳೆಯಾ

ಸಿಹಿಯಿರಲಿ ಜೊತೆಗೆ ಕಹಿಯಿರಲಿ ಸನಿಹ ನೀನಿರೆ
ನಿತ್ಯವೂ ನಿನ್ನ ಸಾನಿಧ್ಯವನ್ನು ಬಯಸುತ್ತಿರುವೆ ಗೆಳೆಯಾ

ನಿನ್ನೊಡನೆ ಆಡದೆ ಉಳಿಸಿದೆ ಸಾವಿರ ಮಾತುಗಳಿವೆ
ಮೌನ ಮುರಿದು ಎಲ್ಲವನ್ನೂ ಹೇಳಲು ಹಂಬಲಿಸುತ್ತಿರುವೆ ಗೆಳೆಯಾ

ತನುವಿನಂತರಾಳದಲ್ಲಿ ಭಾವನೆಗಳು ಮುದುಡಿ ಕುಳಿತಿವೆ
ಜೀವ ತುಂಬಲು ನೀನು ಬರುವೆಯೆಂದು ಕಾಯುತ್ತಿರುವೆ ಗೆಳೆಯಾ

              ಚೇತನಾ ಕುಂಬಳೆ:

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries