HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕನ್ನಡ ಪರಂಪರೆ ಸಮೃದ್ಧವಾಗಿದೆ : ಕಸಾಪ ಅಧ್ಯಕ್ಷ ಎಸ್.ವಿ.ಭಟ್
   ಕಾಸರಗೋಡು:  ಕಾವೇರಿಯಿಂದ ಗೋದಾವರಿ ವರೆಗೆ ವಿಶಾಲವಾಗಿ ಹರಡಿಕೊಂಡಿದ್ದ ಕನ್ನಡ ನಾಡು ಇಂದು ವಿವಿಧ ಕಾರಣಗಳಿಂದ ಕಿರಿದಾಗಿದೆ. ಆದರೂ ನಮ್ಮ ಕನ್ನಡ ಪರಂಪರೆ ಸಮೃದ್ಧವಾಗಿದ್ದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇದೆ ಎಂಬುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಹೇಳಿದರು.
    ಕುಂಡಂಗುಳಿ ಸರಕಾರಿ ಪ್ರೌಢ ಶಾಲೆಯ ಕನ್ನಡ ವಿಭಾಗದ ವಾರದ ಸಾಹಿತ್ಯ ಸಭೆ `ಪ್ರತಿಭಾ ದರ್ಶನ' ವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
   ಕವಿರಾಜಮಾರ್ಗ ಆದಿಕವಿ ಪಂಪನಿಂದ ತೊಡಗಿ ಇಂದಿನವರೆಗೆ ಕನ್ನಡ ಸಾಹಿತ್ಯ ಪರಂಪರೆ ಬೆಳೆದ ಬಗೆ, ವಿಸ್ತಾರವಾದ ಸಾಮ್ರಾಜ್ಯಗಳ ಕುರಿತು ಸಂಕ್ಷಿಪ್ತ ಪರಿಚಯವನ್ನು ನೀಡಿದರು. ಪ್ರತಿಯೊಬ್ಬರೂ ಒಳ್ಳೆಯ ಕವಿ, ಸಾಹಿತಿ ಆಗಬಲ್ಲ ಸಾಮಥ್ರ್ಯವನ್ನು ಹೊಂದಿದ್ದು, ಕನ್ನಡಕ್ಕೆ ಹಾನಿಯಾಗುತ್ತಿರುವ ಇಂದಿನ ದಿನಗಳಲ್ಲಿ ಯಾವುದೇ ಸಂದರ್ಭದಲ್ಲೂ ಕನ್ನಡಕ್ಕಾಗಿ ದನಿಯೆತ್ತಲು ನಾವೆಲ್ಲರೂ ಸಿದ್ಧರಾಗಿ ಎಂದು ಕರೆನೀಡಿದರು.  ಅವರು ಶಾಲಾ ಗ್ರಂಥಾಲಯಕ್ಕೆ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
   ಶಾಲಾ ಮುಖ್ಯೋಪಾಧ್ಯಾಯ ಅಶೋಕ ಅಧ್ಯಕ್ಷತೆ ವಹಿಸಿ ವಾರದ ಸಾಹಿತ್ಯ ಸಭೆ, ಇನ್ನಿತರ ಶಾಲಾ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕನ್ನಡ ವಿದ್ಯಾಥರ್ಿಗಳು ಕೂಡ ಹಿಂಜರಿಕೆಯನ್ನು ತೋರದೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
   ಶಾಲಾ ಹಳೆ ವಿದ್ಯಾಥರ್ಿನಿ ಪವಿತ್ರ, ನೌಕರ ಸಂಘದ ಕಾರ್ಯದಶರ್ಿ ಅಶೋಕ್ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭನುಡಿದರು. ವಿದ್ಯಾಥರ್ಿಗಳೇ ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ವಿದ್ಯಾಥರ್ಿಗಳಾದ ಅಭಿಷೇಕ್ ಸ್ವಾಗತಿಸಿ, ಯತಿನ್ ವಂದಿಸಿದರು. ಅಶ್ವಿತ ಕಾರ್ಯಕ್ರಮ ನಿರೂಪಿಸಿದರು. ಬಳಿಕ 7 ರಿಂದ 10 ನೇ ತರಗತಿಯ ವರೆಗಿನ ವಿದ್ಯಾಥರ್ಿಗಳು ಕವಿ ಪರಿಚಯ, ಸ್ವರಚಿತ ಕವನ, ಆಶು ಭಾಷಣ, ಸಮೂಹಗಾನ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದರು. ಶಿಕ್ಷಕರಾದ ಶ್ರೀಶಕುಮಾರ್ ಪಂಜಿತ್ತಡ್ಕ, ಪ್ರೀತಾ, ಮನೋರಮ, ಶಶಿಕಲಾ, ಸವಿತಾ ಹಾಗೂ ಶಶಿಕಲಾ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries