HEALTH TIPS

No title

                   ಪಿ.ಎನ್.ಪಣಿಕ್ಕರ್ ರವರ ತಪಸ್ಸಿನ ಫಲ ಲೈಬ್ರರಿ ಚಳವಳಿ-ಶ್ಯಾಮ ಭಟ್
                    ನೇತಾಜಿ ಗ್ರಂಥಾಲಯದ ಸಾಹಿತ್ಯ ಕಮ್ಮಟ-ದಾಖಲೆಯ ಸಂಖ್ಯೆಲ್ಲಿ ಶಿಬಿರಾಥರ್ಿಗಳು       
    ಪೆರ್ಲ: ಶಾಲಾ ವಿದ್ಯಾಭ್ಯಾಸ ಸಂಪೂರ್ಣ ವ್ಯಕ್ತಿತ್ವವನ್ನು ಬದಲಾಯಿಸಲಾರದು. ಆದರೆ ವ್ಯಕ್ತಿಯ ಸರ್ವತೋಮುಖ ಜ್ಞಾನ ಸಮೃದ್ದತೆಗೆ ಪುಸ್ತಕಗಳ ಮೂಲಕ ಲಭ್ಯವಾಗುವ ಅರಿವುಗಳು ಮಹತ್ವದ್ದಾಗಿದೆ. ರಾಜ್ಯದಲ್ಲಿ ಶಾಲಾ ವಿದ್ಯಾಭ್ಯಾಸಕ್ಕೆ ಸಮಾಂತರವಾಗಿ ಗ್ರಂಥಶಾಲಾ ಚಳವಳಿ ವ್ಯವಸ್ಥಿತವಾಗಿ ಬೆಳೆದು ಜನಜೀವನದ ಒಂದು ಅಂಗವಾಗಿ ರೂಪುಗೊಂಡಿದೆ ಎಂದು ರಾಜ್ಯ ಗ್ರಂಥಶಾಲಾ ಕೌನ್ಸಿಲ್ ಸದಸ್ಯ ಶ್ಯಾಮ್ ಭಟ್ ತಿಳಿಸಿದರು.
   ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯವು ವಾಚನಾ ಪಾಕ್ಷಿಕದ ಸಮಾರೋಪದ ಅಂಗವಾಗಿ ಶನಿವಾರ ಎಣ್ಮಕಜೆ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಆಯೋಜಿಸಿದ್ದ "ಸಾಹಿತ್ಯ ಕಮ್ಮಟ-2018" ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
   ದಿ.ಪಿ.ಎನ್.ಪಣಿಕ್ಕರ್ ರವರ ಸಂಪೂರ್ಣ ಬದುಕು ಪುಸ್ತಕ ಜ್ಞಾನ ಪಸರಿಸುವಲ್ಲಿ ಮಹತ್ವದ್ದಾಗಿ ಗುರುತಿಸಲ್ಪಟ್ಟಿದೆ. ಋಷಿ ಸದೃಶ ಅವರ ಅಕ್ಷರ ತಪಸ್ಸಿನ ಫಲವಾಗಿ ಇಂದು ರಾಜ್ಯಾದ್ಯಂತ 8380 ಲೈಬ್ರರಿಗಳು ಕಾಯರ್ಾಚರಿಸುತ್ತಿರುವುದು ಅದರ ಮಹತ್ವಕ್ಕೆ ಹಿಡಿದ ಕನ್ನಡಿಯಾಗಿದ್ದು, ಜನಸಾಮಾನ್ಯರ ಓದುವ ಹವ್ಯಾಸವನ್ನು ಬೆಳೆಸಿದೆ ಎಂದು ಅವರು ತಿಳಿಸಿದರು.
   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕವಿಯಿತ್ರಿ ರಾಜಶ್ರೀ ಟಿ.ರೈ ಮಾತನಾಡಿ, ಸಾಹಿತ್ಯಾಸಕ್ತಿ ವ್ಯಕ್ತಿಯನ್ನು ಶಕ್ತಿಯಾಗಿ ಬೆಳೆಸುವಲ್ಲಿ ನೆರವಾಗುತ್ತದೆ. ವಾಸ್ತವವನ್ನು ಕಲ್ಪನೆಗಿಳಿಸಿ ಸರಳವಾಗಿ ಅರಗಿಸುವುದು ಸಾಹಿತ್ಯಗಳಾಗಿವೆ. ಸಾಹಿತ್ಯ ಜೀವನವನ್ನು ಬದಲಿಸಿ ಜ್ಞಾನದ ಬೆಳಕನ್ನು ನೀಡುವುದರಿಂದ ಅದು ಜೀವನದ ಪ್ರಮುಖ ಅಂಗವಾಗಬೇಕು ಎಂದು ಅವರು ತಿಳಿಸಿದರು.
   ನೇತಾಜಿ ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸುಂದರ ಬಾರಡ್ಕ, ಕವಿ, ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
   ನೇತಾಜಿ ಗ್ರಂಥಾಲಯದ ಕಾರ್ಯದಶರ್ಿ, ಶಿಕ್ಷಕ, ರಂಗಕಮರ್ಿ ಉದಯ ಸಾರಂಗ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಮಾಸ್ತರ್ ವಂದಿಸಿದರು.
  ಸಮಾರಂಭದಲ್ಲಿ 90 ಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಜಿಲ್ಲೆಯಲ್ಲಿ ಸಾಹಿತ್ತಿಕ ಕಾರ್ಯಕ್ರಮವೊಂದಕ್ಕೆ ಇಷ್ಟೊಂದು ಸಂಖ್ಯೆಯ ವಿದ್ಯಾಥರ್ಿಗಳು ಪಾಲ್ಗೊಂಡಿದ್ದಂದು ದಾಖಲೆ ಬರೆಯುವಲ್ಲಿ ಯಶಸ್ವಿಯಾಯಿತು. ವಿದ್ಯಾಥರ್ಿಗಳಿಗೆ ಸುಂದರ ಬಾರಡ್ಕ ಹಾಗೂ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ಸಮಗ್ರ ತರಬೇತಿ ನೀಡಿದರು.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries