HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ರಾಸಾಯನಿಕಗಳ ಬಳಕೆಯಿಂದ ಇಳುವರಿ ಕುಂಠಿತ
     ಬದಿಯಡ್ಕ: ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿಕರು ಹೆಚ್ಚಿನ ಮುತುವಜರ್ಿ ವಹಿಸಬೇಕಾಗಿರುವುದು ಅನಿವಾರ್ಯವಾಗಿದೆ. ರಾಸಾಯನಿಕಗಳ ಬಳಕೆಯಿಂದ ವರ್ಷದಿಂದ ವರ್ಷಕ್ಕೆ ಇಳುವರಿಯು ಕುಂಠಿತಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದು ಸಾವಯವ ಕೃಷಿ ತಜ್ಞರಾಗಿರುವ ಸಚಿನ್ ಸದಾಶಿವಪ್ಪ ಕಬ್ಬೂರ ರಾಣೆಬೆನ್ನೂರು ತಿಳಿಸಿದರು.
   ಅವರು ನೀಚರ್ಾಲು ಕುಮಾರಸ್ವಾಮಿ ಭಜನಾಮಂದಿರದ ಸಭಾ ಭವನದಲ್ಲಿ ಮಂಗಳವಾರ ನಡೆದ ಜೈವಿಕ ಕೃಷಿ ಮಾಹಿತಿ ಕಾಯರ್ಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪಯುಕ್ತ ಮಾಹಿತಿಯನ್ನು ನೀಡಿ ಮಾತನಾಡಿದರು.
  ಸಹಜ ಕೃಷಿ, ಸಾವಯವ ಕೃಷಿ, ಹೋಮ ಕೃಷಿ, ಸಂಗೀತ ಕೃಷಿ, ಜೀವಾಮೃತ ಕೃಷಿ, ಯೋಗ ಕೃಷಿ ಮತ್ತು ನಕ್ಷತ್ರ ಕೃಷಿ ಮುಂತಾದ ಜೈವಿಕ ಕೃಷಿಯ ಕುರಿತು ವಿವರಿಸಿ ಮಾತನಾಡಿದರು.
  ಭೂಮಿಗೆ ಗೊಬ್ಬರ ನೀರು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬ ಅಳತೆ ನಮ್ಮಲಿಲ್ಲ. ಪ್ರತೀವರ್ಷ ಚೀಲ-ಚೀಲ ರಾಸಾಯನಿಕ ಗೊಬ್ಬರ ಹಾಕಿ ಎಲ್ಲವೂ ಸರಿಯಾಗಿದೆ ಎಂದು ಭಾವಿಸುವುದು ಸರಿಯಲ್ಲ. ಜೀವಾಮೃತ, ಸೆಗಣಿ ಹಾಗೂ ಇನ್ನಿತರ ಸಾವಯವ ಗೊಬ್ಬರಗಳನ್ನು ಬಳಸುವ ಮೂಲಕ ಮಣ್ಣಿಗೆ ಜೀವ ತುಂಬುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು. ಯಾವ ನಕ್ಷತ್ರದಲ್ಲಿ ಗಿಡಗಳನ್ನು ನೆಟ್ಟರೆ ಏನಾಗಲಿದೆ ಎಂಬ ಅರಿವು ಅಗತ್ಯ. ಮನೆಯಲ್ಲೇ ಇರುವ ಉಪಯೋಗಶೂನ್ಯ ವಸ್ತುಗಳನ್ನು ಉಪಯೋಗಿಸಿ ಹೇಗೆ ಸಾವಯವ ಗೊಬ್ಬರವನ್ನು ತಯಾರಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು. ಸತ್ತ ಸಾಕುಪ್ರಾಣಿಗಳಿಂದ ಮಣ್ಣಿನ ಫಲವತ್ತತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಏನೇನು ಮಾಡಬೇಕು ಎಂಬುದನ್ನು ತಿಳಿಸಿದರು. ಅಡಿಕೆ ಕೃಷಿಕರು ಎದುರಿಸುತ್ತಿರುವ ಮಹಾಳಿ ರೋಗವು ಬಾರದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ವಿವರಿಸಿದರು.
    ಕಾರ್ಯಕ್ರಮ ಸಂಯೋಜಕ ಮಧುಸೂದನ ತೊಡಿಕ್ಕಾನ ಪ್ರಾಸ್ತಾವಿಕವಾಗಿ ಮಾತನಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಜಯದೇವ ಖಂಡಿಗೆ, ಶಂಕರನಾರಾಯಣ ಭಟ್ ಕುಳಮರ್ವ, ಪ್ರಸಾದ್ ಹೊಸಮನೆ, ಎಂ.ನಾರಾಯಣ ಭಟ್, ರಾಜಗೋಪಾಲ ಕುರುಮುಜ್ಜಿ, ವಿ.ಬಿ.ಪಟ್ಟಾಜೆ, ರಾಜಗೋಪಾಲ ಚಾಳೆತ್ತಡ್ಕ, ಕೇಶವ ಪ್ರಸಾದ ಕುಳಮರ್ವ, ಎಂ.ಎಚ್.ಜನಾರ್ಧನ ಹಾಗೂ ನೂರಾರು ಕೃಷಿಕರು ಪಾಲ್ಗೊಂಡು ಕಾಯರ್ಾಗಾರದ ಪ್ರಯೋಜನವನ್ನು ಪಡೆದುಕೊಂಡರು.
      ಪಾಲ್ಗೊಂಡ ಕೃಷಿಕರ ಅಭಿಪ್ರಾಯಗಳು:
  * ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಮಾರ್ಗದರ್ಶನದ ಕೊರತೆಯನ್ನು ನೀಗಿಸುವಲ್ಲಿ ಇಂತಹ ತರಗತಿಗಳು ಸಹಕಾರಿಯಾಗಲಿವೆ. ಇಂತಹ ಉತ್ತಮ ಕಾಯರ್ಾಗಾರಗಳು ಇನ್ನಷ್ಟು ನಡೆಯಬೇಕು
- ಜಯದೇವ ಖಂಡಿಗೆ

* ಕೃಷಿಯನ್ನು ಹೇಗೆ ಲಾಭದಾಯಕವಾಗಿಸಬಹುದು. ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮಗಳು ಯಾವುವು ಎಂಬುದರ ಬಗ್ಗೆ ಸ್ವಲ್ಪ ಮಟ್ಟಿನ ಮಾಹಿತಿ ಇಲ್ಲಿಂದ ಲಭ್ಯವಾಯಿತು. ಈ ಕಾಯರ್ಾಗಾರವು ಬಹಳ ಉಪಯುಕ್ತವಾಗಿದೆ.
- ಸತ್ಯಶಂಕರ ದೇವಪೂಜಿತ್ತಾಯ ಕುಂಬಳೆ

* ಕೃಷಿಕರೆಲ್ಲರೂ ಒಗ್ಗಟ್ಟಿನಿಂದ ಸರಕಾರದಿಂದ ಲಭಿಸುವ ಸವಲತ್ತುಗಳನ್ನು ಪಡೆಯಲು ಶ್ರಮಿಸುವುದಲ್ಲದೆ, ಇಂತಹ ತರಗತಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೃಷಿಯ ಬಗೆಗಿನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು.
- ಎಂ.ಎಚ್.ಜನಾರ್ಧನ

* ಇದುವರೆಗೆ ಇಂತಹ ಅನೇಕ ಶಿಬಿರಗಳಲ್ಲಿ ಪಾಲ್ಗೊಂಡಿದ್ದರೂ, ಇಲ್ಲಿ ಲಭಿಸಿದ ಮಾಹಿತಿಯು ಹೆಚ್ಚು ಪ್ರಯೋಜನಕರವಾಗಿದೆ
- ನಾರಾಯಣ ನಾಯ್ಕ ಪಳ್ಳ
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries