HEALTH TIPS

No title

            ಕನ್ನಡ ಗಝಲ್
                ಕವಯಿತ್ರಿ ಚೇತನಾ ಕುಂಬಳೆ:
ನಿನ್ನ ಕಂಗಳ ಮಿಂಚಿನ ಸೆಳತಕ್ಕೆ ಹೃದಯವನ್ನೇ ಕಳೆದುಕೊಂಡಿದ್ದೇನೆ
ನಿನ್ನ ತುಟಿಯಂಚಿನ ಕಿರುನಗೆಯಲ್ಲಿ ನನ್ನನ್ನೇ ಮರೆಯುತ್ತಿದ್ದೇನೆ
         ನಡೆವ ಹೆಜ್ಜೆಗಳಿಗೆ ಬೆಳಕಾಗಿ, ನಿತ್ಯವೂ ಜೊತೆಗಿದ್ದು ನೆರಳಾಗಿರು ನೀನು
         ಹೃದಯ ಮಂದಿರದಲ್ಲಿ ಪ್ರತಿದಿನ ನಿನ್ನನ್ನೇ ಪೂಜಿಸುತ್ತಿದ್ದೇನೆ
ನಿನ್ನೆದೆಯ ಹಾಡಿಗೆ ತಾಳ ಹಾಕಲೆಂದೇ ಕಾಯುತ್ತಿದೆ ನನ್ನೆದೆಬಡಿತ
ನೀನಿತ್ತ ಭರವಸೆಯಿಂದಲೇ ನಾನಿಂದು ಉಸಿರಾಡುತ್ತಿದ್ದೇನೆ
         ಕಾಡದಿರು,ಸತಾಯಿಸದಿರು,ಬಳಿ ಬರದೆ ಕಾಯಿಸದಿರು ಸುಮ್ಮನೆ
         ಓಡುವ ಸಮಯವನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ

ರಾತ್ರಿಯಿಡೀ ದಾಳಿಯಿಡುವ ಕನಸುಗಳಿಗೆ ಹೆದರಿ ನಿದ್ರೆ ದೂರ ಸರಿದಿದೆ
ನೆನಪುಗಳ ಸಂತೆ ನಿನ್ನಲ್ಲಿ ಕಳೆದುಹೋಗಿರುವ ನನ್ನ ಹುಡುಕುತ್ತಿದ್ದೇನೆ

               - ಚೇತನಾ ಕುಂಬಳೆ:

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries