HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬೆಳ್ಳೂರು ಲೈಫ್ ಭವನ ಯೋಜನೆಗೆ ಚಾಲನೆ
    ಮುಳ್ಳೇರಿಯ: ಕೇರಳ ಸರಕಾರದ ಮಹತ್ವಾಕಾಂಕ್ಷಿ  ಲೈಫ್ ಮಿಶನ್ ಯೋಜನೆಯ ಭಾಗವಾಗಿ ಬೆಳ್ಳೂರು ಗ್ರಾ. ಪಂ. ವ್ಯಾಪ್ತಿಯ ಸ್ವಂತ ಭೂಮಿ ಇರುವ ಮನೆ ರಹಿತರಿಗೆ ಧನ ಸಹಾಯ ನೀಡುವ ದ್ವಿತೀಯ ಹಂತದ ಲೈಫ್ ಯೋಜನೆಯ ಉದ್ಘಾಟನೆ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
   ಗ್ರಾ.ಪಂ. ಅಧ್ಯಕ್ಷೆ ಲತಾ ಯುವರಾಜ್ ಉದ್ಘಾಟನೆ ನೆರವೇರಿಸಿ ಅರ್ಹರಾದ 73 ಫಲಾನುಭವಿಗಳಲ್ಲಿ 33 ಫಲಾನುಭವಿಗಳಿಗೆ ಪ್ರಥಮ ಕಂತಿನ ಹಣವನ್ನು ನೀಡಲಾಗಿದ್ದು ಉಳಿದ ಫಲಾನುಭವಿಗಳಿಗೆ ಜು.ತಿಂಗಳಾಂತ್ಯದೊಳಗೆ ನೀಡಲಾಗುವುದು ಎಂದರು.
  ಸರಕಾರ ನಿದರ್ೇಶಿಸಿದ ಮಾನದಂಡದಂತೆ ಪ್ರತ್ಯೇಕ ಪಡಿತರ ಚೀಟಿ ಹೊಂದದವರು, 25 ಸೆಂಟ್ಸ್ ಗಿಂತಲೂ ಅಧಿಕ ಭೂಮಿ ಕೈವಶ ವಿರುವ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿಯವರನ್ನು ಯೋಜನೆಯಿಂದ ಹೊರತು ಪಡಿಸಲಾಗಿದ್ದು ಒಟ್ಟು 155ರಷ್ಟು ಅಜರ್ಿಗಳು ಬಂದಿರುತ್ತದೆ. ಇದರಲ್ಲಿ ಸಾಮಾನ್ಯ ವಿಭಾಗದ 36, ಪರಿಶಿಷ್ಟ ಜಾತಿಯ 17, ಪರಿಶಿಷ್ಟ ವರ್ಗದ 19 ಸಹಿತ ಒಟ್ಟು  72  ಫಲಾನುಭವಿಗಳು ಮಾತ್ರ ಅರ್ಹರಾಗಿದ್ದಾರೆ ಎಂದು ಹೇಳಿದರು.
   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಪಂ.ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ., ಪ್ರಥಮ ಹಂತದ ಲೈಫ್ ಭವನ ಯೋಜನೆಯ ಭಾಗವಾಗಿ ಹಲವಾರು ವರ್ಷಗಳಿಂದ ನಿಮರ್ಾಣ ಪೂತರ್ಿಯಾಗದೇ ಉಳಿದಿರುವ 24 ಮನೆಗಳ ಪೈಕಿ 23 ಮನೆಗಳ ನಿಮರ್ಾಣ ಕಾರ್ಯ ಪೂತರ್ಿಯಾಗಿದೆ. ಭೂ,ಭವನ ರಹಿತ ಫಲಾನುಭವಿಗಳಿಗೆ ಸರಕಾರದಿಂದ  ವಸತಿ ಸಮುಚ್ಚಯ ಕಟ್ಟಿಕೊಡುವ ಯೋಜನೆ ಇದ್ದು ಮುಂದಿನ ಹಂತದಲ್ಲಿ ಪರಿಗಣಿಸುವುದಾಗಿ ಹೇಳಿದರು. ಅಲ್ಲದೆ ಕುಟುಂಬಶ್ರೀ ಮೂಲಕ ನಡೆಸಿದ ಸಮೀಕ್ಷೆಗೆ ಅನುಗುಣವಾಗಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿ ತಯಾರಿಸಿ
400 ಚ.ಮೀ. ವಿಸ್ತೀರ್ಣವಿರುವ ಮನೆ ನಿಮರ್ಾಣದ ಅಡಿಪಾಯಕ್ಕೆ ಮಣ್ಣು ತುಂಬಲು ಉದ್ಯೋಗ ಖಾತರಿ ಯೋಜನೆಯ ಮೂಲಕ 90 ಆಳು ಕೆಲಸಗಳು, ಐ ಎಚ್ ಎಚ್ ಎಲ್, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಉಚಿತ ವಿದ್ಯುತ್ ಮೊದಲಾದ ಯೋಜನೆಗಳಿಗೆ ಕುಟುಂಬಶ್ರೀ ಘಟಕಗಳು ಸಹಾಯ ನೀಡುವುದಾಗಿ ಹೇಳಿದರು.
    ಕಾರಡ್ಕ ಬ್ಲಾ.ಪಂ.  ಶ್ರೀಧರ ಎಂ. ಮಾತನಾಡಿ ಲೈಫ್ ಮಿಶನ್ ಭವನ ಯೋಜನೆಯಲ್ಲಿ ಒಳಪಡದವರನ್ನು ಪ್ರಧಾನ ಮಂತ್ರಿ ಆವಾಜ್ ಯೋಜನೆ  (ಪಿಎಂಎವೈ) ಯಲ್ಲಿ ಒಳಪಡಿಸಿ 13 ಅರ್ಹತಾ ಮಾನದಂಡಕ್ಕೆ ಅನುಗುಣವಾಗಿ ಕಾರಡ್ಕ ಬ್ಲಾಕ್ ಪಂಚಾಯಿತಿ ಮೂಲಕ ಧನ ಸಹಾಯ ನೀಡುವುದಾಗಿ ತಿಳಿಸಿದರು.
    ಪಂ.ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ, ಸದಸ್ಯರಾದ ಜಯಕುಮಾರ್, ವಿಶಾಲಾಕ್ಷಿ ಬಿ.ಆರ್., ಸುಜಾತ ಎಂ. ರೈ, ರಾಧಾ ವಿ., ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸುಜಾತಾ ಶುಭ ಹಾರೈಸಿದರು. ಗ್ರಾಮ ವಿಸ್ತರಣಾಧಿಕಾರಿ ಮಹಾದೇವ ಹೆಬ್ಬಾರ್ ಸ್ವಾಗತಿಸಿ, ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮನೋಹರ ಎನ್.ಎ. ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries