ಆಧ್ಯಾತ್ಮಿಕ ಕೇಂದ್ರವನ್ನಾಗಿ ಭಜನಾ ಮಂದಿರವನ್ನು ಬೆಳೆಸೋಣ
ಕುರುಡಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಶಿಲಾನ್ಯಾಸ ಸಮಾರಂಭದಲ್ಲಿ ಮಾಣಿಲ ಸ್ವಾಮೀಜಿ
ಉಪ್ಪಳ: ಯಾವುದೇ ಒಂದು ಭಜನಾ ಮಂದಿರವನ್ನು ಭಜನೆಗೆ ಮಾತ್ರ ಸೀಮಿತಗೊಳಿಸದೆ ಅದನ್ನು ಬೌದ್ಧಿಕ, ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವತರ್ಿಸಬೇಕು. ಹಿಂದುಗಳ ಜಾಗೃತಿಯ ಶ್ರದ್ಧಾಕೇಂದ್ರವನ್ನಾಗಿ ಭಜನಾ ಮಂದಿರವನ್ನು ಮಾರ್ಪಡಿಸಬೇಕು. ಹಾಗಾದಲ್ಲಿ ಮಾತ್ರ ಭಜನಾ ಕೇಂದ್ರಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಮತ್ತು ಅಭಿವೃದ್ಧಿಯ ಜೊತೆಗೆ ಹಿಂದುತ್ವದ ಪ್ರಗತಿಯಾಗುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪೈವಳಿಕೆ ಸಮೀಪದ ಕುರುಡಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ನೂತನ ಕಟ್ಟಡದ ಶಿಲಾನ್ಯಾಸವನ್ನು ಶನಿವಾರ ಬೆಳಗ್ಗೆ ಕರ್ಕಟ ಲಗ್ನ ಶುಭಮುಹೂರ್ತದಲ್ಲಿ ನೆರವೇರಿಸಿ ಬಳಿಕ ಜರಗಿದ ಧಾಮರ್ಿಕ ಸಭೆಯಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ಕುರುಡಪದವಿನಲ್ಲಿ ಭಜನಾ ಮಂದಿರ ನಿಮರ್ಾಣವಾಗುವ ತನಕ ಇಲ್ಲಿನ ಭಕ್ತರು ಸಾತ್ವಿಕ ಆಹಾರವನ್ನೇ ಸೇವಿಸುವ ಸಂಕಲ್ಪ ಮಾಡಬೇಕು. ಪ್ರತೀ ಶನಿವಾರ ಉಪವಾಸ ಆಚರಿಸಬೇಕು. ಧರ್ಮಶಾಸ್ತನ ಸನ್ನಿಧಿಯಾದ್ದರಿಂದ ಶಬರಿಮಲೆಯಷ್ಟೇ ಶ್ರೇಷ್ಠ ಕ್ಷೇತ್ರ ಇದಾಗಲಿದೆ. ಆದರೆ ಆಸ್ತಿಕ ಶ್ರದ್ಧಾಳುಗಳು ಮಾತ್ರ ಈ ಮಹತ್ವವನ್ನರಿತು ಏಕಮನಸ್ಸಿನಿಂದ ನಿಸ್ವಾರ್ಥದ ಸೇವೆ ಸಲ್ಲಿಸಬೇಕು ಎಂದು ಶ್ರೀಗಳು ನುಡಿದರು.
ಹವನ, ಪೂಜೆ, ಪ್ರಾರ್ಥನೆ, ಅಷ್ಟದ್ರವ್ಯ, ಪಂಚಕಜ್ಜಾಯ ಸಹಿತ ಇನ್ನಿತರ ಆಚಾರ ಪದ್ಧತಿಗಳ ಕುರಿತು ಇಂದಿನ ಯುವ ಜನಾಂಗಕ್ಕೆ ಸರಿಯಾದ ಅರಿವಿಲ್ಲ. ಈ ನಿಟ್ಟಿನಲ್ಲಿ ಹಿರಿಯರು ಕೂಡ ಎಡವುತ್ತಿರುವುದು ಕಂಡುಬರುತ್ತಿದೆ. ಹೆಂಗಳೆಯರು ಕುಂಕುಮ, ಕಾಲುಂಗರ ಸೇರಿದಂತೆ ಭಾರತೀಯ ಅನುಷ್ಠಾನಗಳನ್ನು ಮರೆತು ವಿದೇಶಿ ಸಂಸ್ಕೃತಿಯ ದಾಸರಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಈ ಕುರಿತು ಪ್ರತಿಯೋರ್ವರೂ ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರದ ಸಾರ್ವಭೌಮತೆಗೇ ಧಕ್ಕೆ ಬರಬಹುದು. ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ನಮಗೆ ಬೇಡವೇ ಬೇಡ. ಮಕ್ಕಳನ್ನು ಸದಾಕಾಲ ಮೊಬೈಲ್, ಕಂಪ್ಯೂಟರ್ಗಳಲ್ಲೇ ತಲ್ಲಿನರಾಗುವಂತೆ ಮಾಡಬೇಡಿ. ಇದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಎಂದಿಗೂ ದೊರಕದು ಎಂದು ಎಚ್ಚರಿಸಿದರು.
ಇದೇ ವೇಳೆ ಮಾಣಿಲ ಶ್ರೀಗಳು ಕುರುಡಪದವು ಭಜನಾ ಮಂದಿರದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು. ಜೊತೆಗೆ ವಿವಿಧ ಭಜನಾ ಮಂದಿರಗಳ ಅಭಿವೃದ್ಧಿ ಅಭಿಯಾನವನ್ನು ಸಂಘಟಿಸಿದ್ದೇನೆ ಎಂದರು. ವೇದಮೂತರ್ಿ ಬೋಳಂತಕೋಡಿ ರಾಮ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಅನುಗ್ರಹ ಭಾಷಣ ಮಾಡಿದರು. ಧಾಮರ್ಿಕ ಮತ್ತು ಸಾಮಾಜಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ, ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ ಮುಟ್ಟ ಯಾಮಿನಿ ಎಸ್ಟೇಟ್ನ ಶ್ರೀಧರ ಶೆಟ್ಟಿ ಮುಟ್ಟ , ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಭಜನಾ ಮಂದಿರದ ಕೃಷ್ಣ ಗುರುಸ್ವಾಮಿ ಉಪಸ್ಥಿತರಿದ್ದರು.
ಜೀಣರ್ೋದ್ಧಾರ ಸಮಿತಿಯ ಗೌರವ ಸಲಹೆಗಾರ ಗೋಪಾಲಕೃಷ್ಣ ಭಟ್ ಕುರಿಯ ಸ್ವಾಗತಿಸಿ, ಸಮಿತಿಯ ಗೌರವಾಧ್ಯಕ್ಷ ಪರಮೇಶ್ವರ ಭಟ್ ಕಾಡೂರು ವಂದಿಸಿದರು. ಸೇವಾ ಸಮಿತಿಯ ಪ್ರಧಾನ ಕಾರ್ಯದಶರ್ಿ ಶಿವಪ್ರಸಾದ್ ಕುರುಡಪದವು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಜಯರಾಮ ಭಟ್ ಕಜೆ ಪ್ರಾರ್ಥನೆ ಹಾಡಿದರು.
ಸಭಾ ಕಾರ್ಯಕ್ರಮಕ್ಕಿಂತ ಮೊದಲು ವೇದಮೂತರ್ಿ ಬೋಳಂತಕೋಡಿ ರಾಮ ಭಟ್ ಅವರ ಪೌರೋಹಿತ್ಯದಲ್ಲಿ ಗಣಪತಿ ಹವನ, ವಾಸ್ತು ಪೂಜೆ ಸಹಿತ ವಿವಿಧ ವಿಧಿ ವಿಧಾನಗಳು ಶ್ರದ್ಧಾಭಕ್ತಿಯಿಂದ ಅಪಾರ ಜನಸ್ತೋಮದ ಎದುರು ನೆರವೇರಿದವು. ಕುರುಡಪದವು ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಕುರುಡಪದವು ಶ್ರೀ ಅಯ್ಯಪ್ಪ ಮಂದಿರ ಜೀಣರ್ೋದ್ಧಾರ ಸಮಿತಿ ಇವುಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.