ಕೇರಳ ಮರಾಟಿ ಶಾರದೋತ್ಸವ ಸಮಿತಿಯ ವತಿಯಿಂದ ಶ್ರದ್ಧಾಂಜಲಿ ಸಭೆ
ಬದಿಯಡ್ಕ : ಪ್ರತಿಯೊಂದು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದ ಉನ್ನತಿಗಾಗಿ ದುಡಿದು, ಆದರ್ಶಪ್ರಾಯನಾಗಿ ಜನಮಾನಸದಲ್ಲಿ ಚಕ್ರೇಶ್ವರ ಅವರು ನೆಲೆಯೂರಿದ್ದಾರೆ ಎಂದು ನಿವೃತ್ತ ವಿಜ್ಞಾನಿ ಬಿ.ಜಿ.ನಾಯ್ಕ ಪೆರ್ಲ ಅಭಿಪ್ರಾಯಪಟ್ಟರು.
ಅವರು ಭಾನುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕೇರಳ ಮರಾಟಿ ಶಾರದೋತ್ಸವ ಸಮಿತಿಯ ವತಿಯಿಂದ ಇತ್ತೀಚೆಗೆ ನಿಧನರಾದ ನೀಚರ್ಾಲು ಮಲ್ಲಡ್ಕ ನಿವಾಸಿ, ಕೇರಳ ಸರಕಾರ ಆಡಿಟ್ ಡಿಪಾಟರ್್ಮೆಂಟ್ನ ಸಹ ನಿದರ್ೇಶಕರಾಗಿದ್ದ ಚಕ್ರೇಶ್ವರ ಆರ್. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮರಾಟಿ ಜನಾಂಗದ ಮೀಸಲಾತಿಗಾಗಿ ಅವರು ಅವಿರತವಾಗಿ ದುಡಿದಿದ್ದರು. ಸಮಿತಿಯ ವತಿಯಿಂದ ನಡೆಯುತ್ತಿರುವ ಶಾರದೋತ್ಸವದ ಯಶಸ್ಸಿನ ಹಿಂದಿನ ಪ್ರಧಾನ ಶಕ್ತಿಯಾಗಿದ್ದರು. ಸಮಿತಿಯ ಅಧ್ಯಕ್ಷರಾಗಿಯೂ, ಉತ್ತಮ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿ ಕೃತಾರ್ಥರಾದರು. ಸಮಾಜದ ಏಳಿಗೆಯ ಗುರಿಯನ್ನಿಟ್ಟು ಮುನ್ನಡೆದಿದ್ದರು ಎಂದು ಅವರು ತಿಳಿಸಿದರು.
ಕೇರಳ ಮರಾಟಿ ಶಾರದೋತ್ಸವ ಸಮಿತಿಯ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವಾಧ್ಯಕ್ಷೆ ಕಮಲ ಪೆರಡಾಲ, ಕಾರ್ಯದಶರ್ಿ ಜಯರಾಮ ಕುಂಟಾಲುಮೂಲೆ, ಡಾ. ನಾರಾಯಣ ನಾಯ್ಕ, ಡಾ. ಜ್ಯೋತಿ, ಡಾ. ಕೇಶವ ನಾಯ್ಕ, ಕೃಷ್ಣಪ್ಪ ಮಾಸ್ತರ್ ಪೆಲ್ತಾಜೆ, ರಾಮನಾಯ್ಕ ನೀಚರ್ಾಲು, ಸುಂದರ ಕನಕಪ್ಪಾಡಿ, ಜಗದೀಶ್ ಕುಂಟಾಲುಮೂಲೆ, ಸಲಹೆಗಾರರಾದ ಸುಬ್ರಹ್ಮಣ್ಯ ಕನಕಪ್ಪಾಡಿ, ಗೋಪಿಕೃಷ್ಣ ಬದಿಯಡ್ಕ, ಸೀತಾರಾಮ ನವಕಾನ, ರಾಜಗೋಪಾಲ ಬದಿಯಡ್ಕ, ಜಿಲ್ಲಾ ಪಂಚಾಯತಿ ಸದಸ್ಯೆಯರಾದ ಪುಷ್ಪಾ ಆಮೆಕ್ಕಳ, ರತ್ನಾವತಿ ಬೇಳ, ರಜನಿ ಕರಿಂಬಿಲ ನುಡಿ ನಮನಗಳನ್ನು ಸಲ್ಲಿಸಿದರು. ನೂರಾರು ಸಮಾಜ ಬಾಂಧವರು ಪಾಲ್ಗೊಂಡು ಪುಷ್ಪಾರ್ಚನೆಗೈದರು.