ದಶಕಗಳಿಂದ ಅವಗಣಿಸಲ್ಪಟ್ಟ ರೈಲು ನಿಲ್ದಾಣ ಮಂಜೇಶ್ವರ
ಬೇಕಿದೆ ಎರಡು ರೈಲ್ವೇ ಮೇಲ್ಸೇತುವೆ
ಒಂದು ಪ್ರಯಾಣಿಕ ಕಾಲ್ನಡೆ ಅಂಡರ್ಪಾಸ್
ಮಂಜೇಶ್ವರ: ರಾಜ್ಯ ಸರಕಾರ ಮತ್ತು ಸಂಸದರು ಜಿಲ್ಲೆಯ ಉತ್ತರದಲ್ಲಿರುವ ಮಂಜೇಶ್ವರ ತಾಲೂಕಿನ ಅಭಿವೃದ್ಧಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಮಂಜೇಶ್ವರ ತಾಲೂಕು ಕೇಂದ್ರವಾದ ಬಳಿಕ ಇಲ್ಲಿಗೆ ಅತ್ಯಗತ್ಯವಾದ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ದಿಸೆಯಲ್ಲಿ ಮುನ್ನಡೆಯುವ ಕನಸು ಇನ್ನೂ ನನಸಾಗಿಲ್ಲ. ಎಡರಂಗ ಸರಕಾರ ಅಧಿಕಾರ ವಹಿಸಿದ ನಂತರ ನೆನೆಗುದಿಗೆ ಬಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಿ ಮಂಜೇಶ್ವರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎನ್ನುವ ಆಶಾಭಾವ ಕುಂಠಿತವಾಗಲಾರಂಭಿಸಿದೆ. 2013 ರಲ್ಲಿ ಮಂಜೇಶ್ವರವು ತಾಲೂಕು ಕೇಂದ್ರ ಎಂದು ಘೋಷಿಸಲ್ಪಟ್ಟ ನಂತರ ಇಲ್ಲಿನ ಜನಸಾಮಾನ್ಯರಲ್ಲಿ ಭೌತಿಕ ಮತ್ತು ಆಥರ್ಿಕ ಅಭಿವೃದ್ಧಿಯ ಕನಸುಗಳು ಚಿಗುರಿದ್ದವು. ಆದರೆ ಐದು ವರ್ಷಗಳ ನಂತರವೂ ಮಂಜೇಶ್ವರ ತಾಲೂಕಿಗೆ ಸೂಕ್ತ ಕೇಂದ್ರ ಕಚೇರಿ ಇಲ್ಲ. ಉಪ್ಪಳ ಬಸ್ಸು ನಿಲ್ದಾಣದ ಮುಂಭಾಗದ ಬಾಡಿಗೆ ಕೊಠಡಿಯಲ್ಲಿ ತಹಶೀಲ್ದಾರರ ಕಚೇರಿ ಪ್ರಸ್ತುತ ಕಾಯರ್ಾಚರಿಸುತ್ತಿದೆ.
ಶಿಕ್ಷಣ, ಆರೋಗ್ಯ ಸೇವೆ ವಿಸ್ತರಣೆ ಸಹಿತ ಮಹತ್ವಾಕಾಂಕ್ಷಿ ಯೋಜನೆಗಳು ಪ್ರಾಪ್ತಿಯಾಗದ ಗಡಿಭಾಗದ ಮಂಜೇಶ್ವರದಲ್ಲಿ ರೈಲ್ವೇ ಇಲಾಖೆಯ ಸೇವಾ ಸೌಲಭ್ಯಗಳನ್ನೂ ವಿಸ್ತರಿಸಲಾಗಿಲ್ಲ. ಆರು ತಿಂಗಳ ಹಿಂದೆಯಷ್ಟೇ ಮಂಜೇಶ್ವರದ ಹೊಸಂಗಡಿ, ಉದ್ಯಾವರದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರೈಲ್ವೇ ಮೇಲ್ಸೇತುವೆ ಅಥವಾ ಕೆಳಸೇತುವೆ ನಿಮರ್ಾಣವಾಗಬೇಕೆಂದು ಸಂಸದರ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು. ಸ್ಥಳೀಯ ಗ್ರಾ.ಪಂಗಳು ಸೇರಿದಂತೆ ಮಂಜೇಶ್ವರ ಬ್ಲಾ.ಪಂ, ಕಾಸರಗೋಡು ಜಿ.ಪಂ ಸಹಿತ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ರೈಲ್ವೇ ಕೆಳ ಸೇತುವೆ ನಿಮರ್ಾಣಕ್ಕೆ ಹಣ ಮೀಸಲಿಡುವಂತೆ ನಿದರ್ೇಶಿಸಲಾಗಿತ್ತು. ಆದರೆ ಆರು ತಿಂಗಳು ಕಳೆದ ನಂತರವೂ ಸ್ಥಳೀಯಾಡಳಿತಗಳು ಹಣ ಮೀಸಲಿಟ್ಟಿಲ್ಲ ಮತ್ತು ಯೋಜನೆಯ ಪೂರ್ಣತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.
2005-06 ರಲ್ಲಿ ಲಾಲೂ ಪ್ರಸಾದ್ ಯಾದವ್ ಕೇಂದ್ರ ರೈಲ್ವೇ ಸಚಿವರಾಗಿದ್ದಾಗ ಹೊಸಂಗಡಿ ರೈಲ್ವೇ ಮೇಲ್ಸೇತುವೆ ನಿಮರ್ಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂತಿಸಲಾಗಿತ್ತು. ಅದರಂತೆ ಅಂದಿನ ರೈಲ್ವೇ ಬಜೆಟ್ಟಿನಲ್ಲಿ ಯೋಜನೆಗೆ ಪೂರಕವೆನ್ನುವಂತೆ ಟೋಕನ್ ಹಣ ಮೀಸಲಿರಿಸಲಾಗಿತ್ತು ಎನ್ನುತ್ತಾರೆ ಸಿಪಿಐ ಧುರೀಣ ಬಿ.ವಿ.ರಾಜನ್. ರೈಲ್ವೇ ಅಧಿಕಾರಿ ವರ್ಗದ ಹಸ್ತಕ್ಷೇಪ, ರಾಜಕಾರಣಿಗಳ ಇಬ್ಬಗೆ ನೀತಿ ಮಂಜೇಶ್ವರದ ಅಭಿವೃದ್ಧಿಗೆ ಮುಳುವಾಗಿದೆ ಎನ್ನುತ್ತಾರೆ ಇವರು. ಉಪ್ಪಳ, ಕುಂಬಳೆ ರೈಲು ನಿಲ್ದಾಣಗಳು ದಶಕಗಳಿಂದ ಸತತ ಅವಗಣನೆಯಲ್ಲಿವೆ, ಸಂಸದರು ಕಾಳಜಿ ವಹಿಸಿ ಉತ್ತರದ ಮಂಜೇಶ್ವರ ಕ್ಷೇತ್ರದ ರೈಲ್ವೇ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎನ್ನುತ್ತಾರೆ ರಾಜನ್.
ಈ ಹಿಂದೆ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಅವರಲ್ಲಿ ರೈಲ್ವೇ ಮೇಲ್ಸೇತುವೆ ನಿಮರ್ಾಣದ ಬಗ್ಗೆ ವಿನಂತಿಸಲಾಗಿತ್ತು, ಅದರಂತೆ ಸ್ಥಳವನ್ನು ಸಂದಶರ್ಿಸಿದ ಸಚಿವರು ಶೀಘ್ರದಲ್ಲೇ ಹೊಸಂಗಡಿ ಮತ್ತು ಉದ್ಯಾವರ ರೈಲ್ವೇ ಗೇಟ್ ಬಳಿ ರಸ್ತೆ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿಮರ್ಾಣ ಮಾಡಲಾಗುದೆಂದು ತಿಳಿಸಿದ್ದಾರೆ. ಕೇರಳ ರೈಲು ಅಭಿವೃದ್ಧಿ ನಿಗಮ ಮಂಡಳಿ(ಕೆಆರ್ಡಿಸಿಎಲ್) ಮೂಲಕ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಅಭಿವೃದ್ಧಿ ಕನಸು ನನಸೆಂದು!
2012 ರಲ್ಲಿ ಸಿದ್ದಪಡಿಸಿದ ಕಾಸರಗೋಡು ಅಭಿವೃದ್ಧಿ ವರದಿಯಲ್ಲಿ ಮಂಜೇಶ್ವರ ರೈಲ್ವೇ ನಿಲ್ದಾಣವನ್ನು ಮೇಲ್ದಜರ್ೆಗೇರಿಸಬೇಕು, ಉತ್ತಮ ಮೇಲ್ಛಾವಣಿ ಸಹಿತ ಪ್ರಯಾಣಿಕರಿಗೆ ಕುಡಿನೀರು ವ್ಯವಸ್ಥೆ, ಶೌಚಾಲಯ ಸೇರಿದಂತೆ ರಾ.ಹೆ 66 ಕ್ಕೆ ಸಂಪರ್ಕ ಸಾಧಿಸಲು ಸಹಾಯಕವಾಗುವಂತೆ ರಸ್ತೆ ನಿಮರ್ಾಣ ಮಾಡಬೇಕೆಂದು ತಿಳಿಸಲಾಗಿತ್ತು. ಆದರೆ ರಸ್ತೆ ನಿಮರ್ಾಣದ ಕಾರ್ಯ ಇನ್ನೂ ಕೈಗೂಡಿಲ್ಲ. ಬ್ರಿಟಿಷರ ಕಾಲದ ಉಪ್ಪಳ ರೈಲ್ವೇ ನಿಲ್ದಾಣದ ಮೇಲ್ದಜರ್ೆ ಕಾರ್ಯವನ್ನು ಕೈಗೊಳ್ಳಬೇಕು, ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ಸಾಧ್ಯವಾಗಬೇಕು ಎಂದು ಹೇಳಲಾಗಿದೆ. ಉಪ್ಪಳ ಹಾಗೂ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆ ಅಗತ್ಯತೆಯನ್ನು ವರದಿಯಲ್ಲಿ ಸೂಚಿಸಲಾಗಿದೆ. 6 ವರ್ಷ ಕಳೆದರೂ ವರದಿಯಲ್ಲಿ ಸೂಚಿಸಲ್ಪಟ್ಟ ಯಾವುದೇ ಅಂಶಗಳು ಪರಿಗಣಿತವಾಗಿಲ್ಲ ಮತ್ತು ಅಭಿವೃದ್ಧಿಯ ಕನಸು ಸಾರ್ಥಕ್ಯವಾಗಿಲ್ಲ.
ಏನಂತಾರೆ: ಜಿಲ್ಲೆಯ ಉತ್ತರದ ಕುಂಬಳೆ, ಉಪ್ಪಳ ಮತ್ತು ಮಂಜೇಶ್ವರ ರೈಲು ನಿಲ್ದಾಣದ ಅಭಿವೃದ್ಧಿ ರಾಜ್ಯ ಸರಕಾರ ಹಾಗೂ ಸಂಸದರಿಂದ ಅವಗಣಿಸಲ್ಪಟ್ಟಿದೆ. ಮಂಜೇಶ್ವರ ರೈಲು ನಿಲ್ದಾಣದ ಸಮೀಪವಿರುವ ಉದ್ಯಾವರ ಹಾಗೂ ಹೊಸಂಗಡಿ ರೈಲ್ವೇ ಕ್ರಾಸಿಂಗ್ ತ್ರಾಸದಾಯಕವಾಗಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಓವರ್ ಬ್ರಿಡ್ಜ್ ಅವಶ್ಯಕವಾಗಿದೆ. ಈ ಯೋಜನೆಯನ್ನು ಶೀಘ್ರದಲ್ಲೇ ಸಂಬಂಧಪಟ್ಟ ಇಲಾಖೆ ಕೈಗೊಳ್ಳಬೇಕು. ಪ್ರಯಾಣಿಕರ ಸಹಾಯಕವಾಗುವ ನಿಟ್ಟಿನಲ್ಲಿ ರೈಲ್ವೇ ಅಂಡರ್ಪಾಸ್ ಕಾಲ್ನಡೆ ಹಾದಿಯ ನಿಮರ್ಾಣ ಸಾಧ್ಯವಾಗಬೇಕು. ಸೂಕ್ತ ನಡೆಹಾದಿ ಇಲ್ಲದ ಕಾರಣ ಹಲವು ಮಂದಿ ತಮ್ಮ ಪ್ರಾಣ ಕಳೆದುಕೊಂಡ ಘಟನೆ ಸಂಭವಿಸಿದ್ದು, ಇನ್ನೂ ಮುಂದೆ ಇಂತಹ ದುಸ್ಥಿತಿಗೆ ಆಸ್ಪದ ನೀಡಬಾರದು. ಆಧುನಿಕ ಹಾಗೂ ವೈಜ್ಞಾನಿಕ ರೀತಿಯ ಮೂಲಭೂತ ಸೌಲಭ್ಯ ಸೌಕರ್ಯಗಳು ಮಂಜೇಶ್ವರಕ್ಕೆ ತಲುಪಬೇಕು.
ಎಂ.ಕೆ ಮಜೀದ್
ನಾಗರಿಕ ವಿಕಸನ ಸಮಿತಿ ಮಾಜಿ ಅಧ್ಯಕ್ಷ, ಮಂಜೇಶ್ವರ