ಕನ್ನಡ ಪತ್ರಿಕಾ ದಿನಾಚರಣೆ
ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯಿಂದ ಹಿರಿಯ ಪತ್ರಕರ್ತ ಮಲಾರು ರವರಿಗೆ ಅಭಿನಂದನೆ
ಕುಂಬಳೆ: ಕನ್ನಡ ಪತ್ರಿಕೋದ್ಯಮ ಇಂದು ವಿಸ್ಕೃತವಾಗಿ ಬೆಳೆದಿದೆ. ಆಧುನಿಕ ತಂತ್ರಜ್ಞಾನ ಯುಗದ ಪೈಪೋಟಿಯ ಮಧ್ಯೆ ತನ್ನದೇ ಮಹತ್ವಗಳಿಂದ ಪತ್ರಿಕೆಗಳು ಸಾಮಾಜಿಕ, ಸಾಂಸ್ಕ್ರತಿಕ, ರಾಜಕೀಯ ಹಾಗೂ ವ್ಯಾವಹಾರಿಕ ಅರಿವನ್ನು ಪಸರಿಸುವಲ್ಲಿ ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಿರುವುದರ ಹಿಂದೆ ಕ್ರಿಯಾತ್ಮಕ ಪತ್ರಕರ್ತರ ಪಾತ್ರ ಮಹತ್ತರವಾಗಿದೆ ಎಂದು ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ನೇತೃತ್ವದಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯ ಅಂಗವಾಗಿ ಭಾನುವಾರ ಸಂಜೆ ಶಿರಿಯಾದಲ್ಲಿರುವ ಅವರ ಸ್ವಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೌರವಿಸಿದಾಗ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಧನಾತ್ಮಕ ಚಿಂತನೆಗಳನ್ನು ಪಸರಿಸುವ ಕಾರ್ಯಗಳು ಪತ್ರಿಕೆಗಳಿಂದಾಗಬೇಕು. ಮನಸ್ಸನ್ನು ಅರಳಿಸುವ ವರ್ತಮಾನಗಳು ಇಂದಿನ ಸಮಾಜಕ್ಕೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪತ್ರಿಕೆಗಳು, ವರದಿಗಾರರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದಾಗ ಸುಖೀ ಸಮಾಜ ನಿಮರ್ಾಣ ಸಾಧ್ಯ ಎಂದು ಅವರು ತಿಳಿಸಿದರು. ಆಧ್ಯಾತ್ಮಿಕ ಚಿಂತನೆಗಳು ಮನೋಲ್ಲಾಸದೊಂದಿಗೆ ಸಂಘರ್ಷ ರಹಿತ ವ್ಯವಸ್ಥೆಗೆ ಪ್ರೇರಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಹೆಚ್ಚು ಕ್ರಿಯಾಶೀಲರಾಗಬೇಕೆಂದು ಅವರು ಕರೆನೀಡಿದರು.
ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲ್ಯಾಣ ಸಮಾಜ ಸಂರಚನೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಪತ್ರಿಕಾ ಮಾಧ್ಯಮ ಜವಾಬ್ದಾರಿಯುತವಾಗಿ ಮುನ್ನಡೆದಾಗ ಉತ್ಕಷರ್ೆ ಸಾಧ್ಯ. ಈ ಹಿನ್ನೆಲೆಯಲ್ಲಿ ಮಾಧ್ಯಮ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸುವ, ಅವರೊಂದಿಗೆ ಕೈಜೋಡಿಸಿ ಕೈಲಾದ ನೆರವು ನೀಡುವ ಮತ್ತು ಸಾಧಕರನ್ನು ಗುರುತಿಸಿ ಗೌರವಿಸುವ ಹೊಣೆ ಸಮಾಜದ ಕರ್ತವ್ಯ ಎಂದು ತಿಳಿಸಿದರು.
ಅಕಾಡೆಮಿ ಗೌರವಾಧ್ಯಕ್ಷ ಪ್ರೊ. ಎ.ಶ್ರೀನಾಥ್ ಉಪಸ್ಥಿತರಿದ್ದು ಮಾತನಾಡಿದರು. ಅಕಾಡೆಮಿ ಪ್ರಧಾನ ಕಾರ್ಯದಶರ್ಿ ಅಖೀಲೇಶ್ ನಗುಮುಗಂ ಉಪಸ್ಥಿತರಿದ್ದು, ಮಲಾರು ಜಯರಾಮ ರೈ ದಂಪತಿಗಳನ್ನು ಸ್ಮರಣಿಕೆ, ಫಲಗಳನ್ನು ನೀಡುವ ಮೂಲಕ ಗೌರವಿಸಿದರು.
ಮಲಾರು ಜಯರಾಮ ರೈ ಭಜನ್ ಹಾಡಿದರು. ವಸಂತ ಬಾರಡ್ಕ ಕನ್ನಡ ಗೀತ ಗಾಯನ ನಡೆಸಿದರು. ಮಲಾರು ಜಯರಾಮ ರೈಗಳ ಧರ್ಮಪತ್ನಿ ಗೀತಾ ಜೆ. ರೈ, ಪತ್ರಕತರ್ೆ ಸಾಯಿಭದ್ರಾ ರೈ, ಧನ್ಯಶ್ರೀ, ಅಶ್ವಿನ್ ಯಾದವ್, ಬಾಲಸುಬ್ರಹ್ಮಣ್ಯ ಮವ್ವಾರು ಮೊದಲಾದವರು ಉಪಸ್ಥಿತರಿದ್ದರು. ಅಖಿಲೇಶ್ ನಗುಮುಗಂ ಸ್ವಾಗತಿಸಿ, ವಸಂತ ಬಾರಡ್ಕ ವಂದಿಸಿದರು. ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.