HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಪೇರಾಲಿನಲ್ಲಿ ಹೋಮಿಯೋ ವೈದ್ಯಕೀಯ ಶಿಬಿರ
     ಕುಂಬಳೆ: ಹೋಮಿಯೋ ಔಷಧಿಗಳು ಯಾವುದೇ ಪಾಶ್ರ್ವ ಪರಿಣಾಮಕ್ಕೆ ಕಾರಣವಾಗದವು. ಅದನ್ನು ಬಳಸುವುದು ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಬಹಳ ಉತ್ತಮ ಎಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ನುಡಿದರು.
    ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಉಚಿತ ಹೋಮಿಯೋ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಆಧುನಿಕ ಜೀವನ ಪದ್ದತಿ, ಆಹಾರ ಕ್ರಮ ಹಾಗೂ ಅಸಮತೋಲನದ ಪರಿಸರಗಳಿಂದ ಇಂದು ಆರೋಗ್ಯ ಸಮಸ್ಯೆಗಳು ವ್ಯಾಪಕಗೊಳ್ಳುತ್ತಿದ್ದು, ಸೂಕ್ತ, ಸಮರ್ಪಕ ಚಿಕಿತ್ಸೆಗಳನ್ನು ನಿರ್ವಹಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಅಡ್ಡಪರಿಣಾಮಗಳಿಲ್ಲದ ಔಷಧಿಗಳನ್ನು ಬಳಸುವಲ್ಲಿ ಜನಸಾಮಾನ್ಯರು ಗಮನ ಹರಿಸಬೇಕು ಎಂದು ಅವರು ತಿಳಿಸಿದರು. 
    ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ ಎ ಪೇರಾಲು ಅಧ್ಯಕ್ಷತೆ ವಹಿಸಿದರು. ಡಾ. ಪ್ರಸೀದ ತರಗತಿ ನಡೆಸಿದರು.
     ಸಿ ಆರ್ ಸಿ ಸಂಯೋಜಕಿ ಸಜಿನಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಗುರುಮೂತಿ9 ನಾಯ್ಕಾಪು ಸ್ವಾಗತಿಸಿ, ಪ್ರಸೀನ ಟೀಚರ್ ವಂದಿಸಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries