HEALTH TIPS

No title

              ಪಳ್ಳತ್ತಡ್ಕ ಶಾಲೆಯಲ್ಲಿ ಫುಟ್ಬಾಲ್ ಮೇನಿಯಾ
      ಬದಿಯಡ್ಕ: ಜಗತ್ತಿನೆಲ್ಲೆಡೆ ಇದೀಗ ಪುಟ್ಬಾಲ್ ಹವಾ ಜೋರಾಗಿಯೇ ಆಕರ್ಷಣೀಯವಾಗಿ ಗಮನ ಸೆಳೆಯುತ್ತಿದೆ. ವಿಶ್ವಕಪ್ ಫುಟ್ಬಾಲ್ ರಷ್ಯಾದಲ್ಲಿ ನಡೆಯುವ ಇದೀಗ ದಿಲ್ಲಿಯಿಂದ ಹಳ್ಳಿಗಳ ವರೆಗೂ ಪುಟ್ಭಾಲ್ನ ಮಾತುಗಳು ಕೇಳಿಬರುತ್ತಿರುವ ಮಧ್ಯೆ  ಆಟದ ಪರಿಚಯಕ್ಕಾಗಿ ಹಾಗೂ ಮನೋರಂಜನೆಗಾಗಿ ಪಳ್ಳತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಟ್ಬಾಲ್ ಮಾದರಿ ಆಟವನ್ನು ಮಕ್ಕಳಿಂದ ಆಡಿಸಲಾಗುತ್ತಿರುವುದೂ ಗಮನ ಸೆಳೆದಿದೆ.
    ಶಾಲಾ ಮುಖ್ಯೋಪಾಧ್ಯಾಯ ಮಣಿ.ಎಂ ಪುಟ್ಬಾಲ್ ಬಗೆಗೆ ಶಾಲೆಯಲ್ಲಿ ಆಯೋಜಿಸುವ ಪರಿಚಯಾತ್ಮಕ ಆಟವನ್ನು ಮಂಗಳವಾರ ಉದ್ಘಾಟಿಸಿ ಚಾಲನೆ ನೀಡಿದರು. ಶಿಕ್ಷಕ ವಿಘ್ನೇಶ್ ಪ್ರಸಾದ್ ರವರ ಮಾರ್ಗದರ್ಶನದೊಂದಿಗೆ ಮಕ್ಕಳ ಎರಡು ಗುಂಪುಗಳೊಳಗೆ ಆಟವನ್ನು ಆಡಲಾಯಿತು.ಅಧ್ಯಾಪಕ ಶರತ್ ಕೃಷ್ಣ ಭರಣ್ಯ ಸಹಕರಿಸಿದರು.ಸಂತಸ, ಉತ್ಸಾಹಭರಿತ ಆಟವು ಮಕ್ಕಳಿಗೆ ಹುರುಪನ್ನು ನೀಡಿತು. ವೀಕ್ಷಿಸಿದ ಮಕ್ಕಳ ಹಷರ್ೋದ್ದಾರ ಮುಗಿಲು ಮುಟ್ಟಿತು. ಈ ಸಂದರ್ಭದಲ್ಲಿ ಫುಟ್ಬಾಲ್ ಆಟವು ಕಾಲೋಚಿತವಾದುದು.
    ಕೇರಳದಲ್ಲಿ ಹೆಚ್ಚು ಆಸಕ್ತಿ!:
   ರಾಷ್ಟ್ರದಲ್ಲೇ ಕೇರಳವು ಸಾಂಪ್ರದಾಯಿಕ ಪುಟ್ಬಾಲ್ ಪಂದ್ಯಾಟಗಳ ತವರು ನೆಲ. ಕೇರಳಿಗರ ಅಭಿಮಾನದ ಸಂಕೇತವಾಗಿಯೂ ಇದು ಗುರುತಿಸಲ್ಪಟ್ಟಿದೆ. ಇಲ್ಲಿ 1930 ರಿಂದ 60ರ ವರೆಗಿನ ಕಾಲಗಳಲ್ಲಿ ಅಮೆಚೂರು ಕ್ಲಬ್ ಪ್ರಸಿದ್ದ ಪುಟ್ಬಾಲ್ ಆಟಗಾರರ ತಂಡವಾಗಿ ರಾಷ್ಟ್ರಮಟ್ಟದಲ್ಲೇ ಹೆಸರುಗಳಿಸಿತ್ತು. ಮಲಬಾರ್, ತಿರುವಾಂಕೂರು ಹಾಗೂ ಎನರ್ಾಕುಳಂ ವಿಭಾಗಗಳ ಆಕರ್ಷಣೀಯ ಪಂದ್ಯಾಟಗಳೂ ಗಮನಾರ್ಹ. ಎಚ್ಎಂಸಿ ಕೋಟ್ಟಯಂ, ಕ್ಯಾಲಿಕಟ್ ಯಂಗ್ ಚಾಲೆಂಜರ್ಸ್, ಬ್ರದಸರ್್, ಲಕ್ಕೀಸ್ಟಾರ್, ಜಿನ್ಕಾನ(ಕಣ್ಣೂರು) ಮೊದಲಾದ ತಂಡಗಳು ಇದೀಗಲೂ ವೈವಿಧ್ಯಮಯ ಪಂದ್ಯಾಟಗಳ ಮೂಲಕ ಪ್ರಚಾರದಲ್ಲಿದೆ. ಕೋಟ್ಟಯಂ ಸಲೇಹ್, ಜೇಮ್ಸ್ ಪೇನ್, ತಿರುವಲ್ಲಾ ಪಾಪ್ಪನ್, ತ್ರಿಶೂರ್ ಆಮಟನಿ, ಪಪ್ಪು, ಡಿಕ್ರೂಸ್, ಟಿ.ಎ.ರಹ್ಮಾನ್, ಓ.ಚಂದ್ರಶೇಖರನ್, ಚಿದಾನಂದನ್, ಆರ್.ಬಾಲಕೃಷ್ಣನ್, ಪೇಟ ರವಿ, ಮೊಯ್ದೀನ್ ಕುಟ್ಟಿ, ಗೋಲ್ಕೀಪ್ ಮುಸ್ತಫ, ಡಾ.ರಾಜಗೋಪಾಲ್, ತಿರುವಲ್ಲ ಥೋಮಸ್, ಬಾಲಗೋಪಾಲ್, ಸತ್ಯನ್, ಜಯರಾಮನ್, ಬಾಲಕೃಷ್ಣನ್, ಇಂದ್ರಬಾಲನ್, ಮಲಪ್ಪುರಂ ಅಸಿಸ್, ರಾಮಕೃಷ್ಣನ್ ಮೊದಲಾದವರು ಖ್ಯಾತ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾಗವಿಸಿದ್ದ ಕ್ರೀಡಾಳುಗಳಾಗಿದ್ದಾರೆ. ಜೊತೆಗೆ ಎ.ಕೆ.ಶೇಷಾದ್ರಿ, ಟಿ.ಓ.ಅಬ್ದುಲ್ಲ ಇವರು ಅಖಿಲ ಭಾರತ ಪುಟ್ಬಾಲ್ ಫೆಡರೇಶನ್ ನ ಉಪಾಧ್ಯಕ್ಷರುಗಳಾಗಿ ಕಾರ್ಯನಿರ್ವಹಿಸಿದ್ದರು.
    ಪ್ರಸ್ತುತ ವಿಶ್ವಕಪ್ ಪುಟ್ಬಾಲ್ ಪಂದ್ಯಾಟಗಳನ್ನು ವೀಕ್ಷಿಸುವಲ್ಲಿ ಕಿಕ್ಕಿರಿದ ಪ್ರೇಮಿಗಳು ಟಿವಿ ಪರದೆಯ ಮುಂದೆ ತಮ್ಮ ಪ್ರೀತಿಯ ತಂಡಗಳ ಗೆಲುವಿನ ನಿರೀಕ್ಷೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹೊಸ ತಲೆಮಾರಿನ ಕಂಪ್ಯೋಟರ್-ಮೊಬೈಲ್ ಗುಗ್ಗುಗಳೂ ಎಚ್ಚೆತ್ತು ಪಂದ್ಯಾಟದತ್ತ ಆಕಷರ್ಿತರಾಗುತ್ತಿದ್ದಾರೆ. ಶಾಲೆಗಳಲ್ಲಿ ಈ ಬಗ್ಗೆ ಶಿಕ್ಷಕರಿಂದಲೇ ಪ್ರೋತ್ಸಾಹಗಳು ನೀಡಲ್ಪಡುತ್ತಿರುವುದು ಶ್ಲಾಘನೆಗೊಳಗಾಗಿದೆ.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries