ಸಚಿವೆ ಜಯಮಾಲರ ಭೇಟಿ
ಮಂಜೇಶ್ವರ: ನೃತ್ಯ ಕಲಾವಿದೆ, ಬಹುಭಾಷಾ ಚಿತ್ರನಟಿ ಸಾಂಸ್ಕೃತಿಕ ಇಲಾಖೆಯ ಸಚಿವರಾಗಿರುವುದು ಶುಭ ಸೂಚಕ. ಕಲೆಯ ಬಗ್ಗೆ ಅರಿವಿರುವ, ಕಲಾಪೋಷಕರು ಈ ಸ್ಥಾನವನ್ನು ತುಂಬಿದಾಗ ಕಲೆ ಹಾಗೂ ಕಲಾವಿದರಿಗೆ ಪ್ರಯೋಜನಕಾರಿಯಾಗಿರಲು ಸಾಧ್ಯ ಎಂದು ದಕ್ಷಿಣ ಕನ್ನಡದ ಹೆಸರಾಂತ ನಾಟ್ಯಗುರು ನಾಟ್ಯನಿಲಯಂ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅಭಿಪ್ರಾಯಪಟ್ಟರು.
ಅವರು ಮಂಗಳೂರಿನಲ್ಲಿ ಕನರ್ಾಟಕ ಸಾಂಸ್ಕೃತಿಕ ಇಲಾಖೆಯ ಸಚಿವೆ ಜಯಮಾಲಾ ಅವರನ್ನು ಇತ್ತೀಚೆಗೆ ಭೇಟಿಯಾಗಿ ಶಾಲು, ಪುಷ್ಪ ಗುಚ್ಛವನ್ನು ನೀಡಿ ಕಲಾಮಾತೆಯ ಸೇವೆಯೊಂದಿಗೆ ಜನರ ಸೇವೆಯನ್ನೂ ಅತ್ಯುತ್ತಮವಾದ ರೀತಿಯಲ್ಲಿ ಮಾಡಲು ಸಾಧ್ಯವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಮೋ ಮೋಹನ-2018 ಗುರುವಂದನಾ ಕಾರ್ಯಕ್ರಮದ ಸಿಡಿಯನ್ನು ಸಚಿವರಿಗೆ ನೀಡಿದರು. ಅಸಾಮಾನ್ಯ ಸಾಧನೆಯ ಮೂಲಕ ಗಡಿನಾಡಿನ ಗಡಿದಾಟಿ ನೃತ್ಯದ ಸೊಬಗನ್ನು, ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವ ಕಲಾವಿದನ ಕಲಾಪ್ರೇಮವನ್ನು ಸಚಿವೆ ಜಯಮಾಲಾ ಅವರು ಅಭಿನಂದಿಸಿದರು. ಬಾಲಕೃಷ್ಣ ಮಾಸ್ಟರ್ ಅವರ ಧರ್ಮಪತ್ನಿ ಶಮರ್ಿಳಾ ಬಾಲಕೃಷ್ಣ, ಸಂಧ್ಯಾಗೀತಾ ಬಾಯಾರು, ವಿದ್ಯಾಗಣೇಶ್ ಮತ್ತಿತರರು ಜೊತೆಗಿದ್ದರು.