HEALTH TIPS

No title

                ಸಾರ್ವಜನಿಕ ಶಿಕ್ಷಣ ಸಂರಕ್ಷಣೆಯ ಸರಕಾರದ ಧೋರಣೆಯಲ್ಲಿ ಕನ್ನಡಮಾಧ್ಯಮಕ್ಕೆ  ಸ್ಥಾನವಿಲ್ಲ
                        ಕನ್ನಡ ತಿಳಿಯದ ಶಿಕ್ಷಕರ ನೇಮಕ ನಿರಂತರ
                                      ಡಾ.ನರೇಶ್ ಮುಳ್ಳೇರಿಯ:
   ಕಾಸರಗೋಡು:  ಕೇರಳ  ಪಿ.ಎಸ್.ಸಿ ಮೂಲಕ ಸರಕಾರಿ ಕನ್ನಡಶಾಲೆಗಳಿಗೆ ಕನ್ನಡದ ಗಂಧಗಾಳಿಯಿಲ್ಲದ ಅಧ್ಯಾಪಕರ ನೇಮಕಾತಿ ಪ್ರಕ್ರಿಯೆ ಅವ್ಯಾಹತವಾಗಿ ಮುಂದುವರಿಯುತ್ತಿದೆ. ಇತ್ತೀಚೆಗಷ್ಟೇ ಭೌತಿಕ ವಿಜ್ಞಾನ ( ಫಿಸಿಕಲ್ ಸಯನ್ಸ್) ವಿಭಾಗದಲ್ಲಿ ಐದು ಮಂದಿ ಕನ್ನಡಬಾರದವರಿಗೆ ನೇಮಕಾತಿ ನೀಡಿದ್ದನ್ನು ಕನ್ನಡಿಗರು ಪ್ರತಿಭಟಿಸುತ್ತಿರುವುದರ ನಡುವೆಯೇ ಗಣಿತ ವಿಭಾಗದಲ್ಲಿ  ಕೂಡ ಒಬ್ಬರು ಕನ್ನಡ ಬಾರದ ಶಿಕ್ಷಕರಿಗೆ ನೇಮಕಾತಿ ನೀಡಲಾಗಿದೆ ಎಂಬ ದೂರು ಕೇಳಿಬರಲಾರಂಭಿಸಿದೆ. ಪ್ರಕೃತಿ ವಿಜ್ಞಾನ (ನ್ಯಾಚುರಲ್ ಸಯನ್ಸ್) ಹಾಗೂ ಸಮಾಜ ವಿಜ್ಞಾನ (ಸೋಶಿಯಲ್ ಸಯನ್ಸ್) ವಿಭಾಗದಲ್ಲಿ ಕೂಡ ನೇಮಕಾತಿ ನಡೆಯಲಿಕ್ಕಿದ್ದು ಇನ್ನಷ್ಟು ಮಂದಿ ಕನ್ನಡಬಾರದ ಶಿಕ್ಷಕರು ನೇಮಕಗೊಳ್ಳುವ ಸಾಧ್ಯತೆಯಿದೆ.
   ಸಾರ್ವಜನಿಕ ಶಿಕ್ಷಣರಂಗವನ್ನು ಸಂರಕ್ಷಿಸಲು, ಸರಕಾರಿ ಶಾಲೆಗಳಿಗೆ ವಿದ್ಯಾಥರ್ಿಗಳನ್ನು ಆಕಶರ್ಿಸಲು ಕೇರಳ ಶಿಕ್ಷಣ ಇಲಾಖೆ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ ಎನ್ನಲಾಗುತ್ತದೆ. ಆದರೆ ಸರಕಾರಿ ಕನ್ನಡಶಾಲೆಗಳಿಗೆ ಪಿ.ಎಸ್.ಸಿ ಮೂಲಕ ಕನ್ನಡವೇ ತಿಳಿಯದ ಅಧ್ಯಾಪಕರನ್ನು ನೇಮಿಸುವ ಮೂಲಕ ಕನ್ನಡಮಾಧ್ಯಮ ಶಾಲೆಗಳು ತಾವಾಗಿಯೇ ಮುಚ್ಚುವಂತೆ ಮಾಡುವ ಹುನ್ನಾರ ನಡೆಯುತ್ತವೆ. ಸಾರ್ವಜನಿಕ ಶಿಕ್ಷಣದ ಬಗ್ಗೆ ಬೀದಿ ಬದಿಯಲ್ಲಿ ಭಾಷಣ ಮಾಡುವ ಅಧ್ಯಾಪಕ ಸಂಘಟನೆಗಳಾಗಲೀ, ಕನ್ನಡಿಗರಿಗೆ ಮಲಯಾಳವನ್ನು ಕಡ್ಡಾಯವಾಗಿ ಕಲಿಸಲು ಉತ್ಸುಕವಾದ ರಾಜಕೀಯ ಪಕ್ಷಗಳಾಗಲೀ ಸರಕಾರಿ ಶಾಲೆಗಳಿಗೆ ಹೋಗುತ್ತಿರುವ ಬಡ ಕನ್ನಡ ವಿದ್ಯಾಥರ್ಿಗಳಿಗೆ ಆಗುತ್ತಿರುವ ಘೋರ ಅನ್ಯಾಯದ ವಿರುದ್ಧ ತುಟಿ ಬಿಚ್ಚುವುದಿಲ್ಲ.
   ಕನ್ನಡಶಾಲೆಗಳಿಗೆ ಕನ್ನಡ ಬಾರದ ಶಿಕ್ಷಕರನ್ನು ನೇಮಿಸಬಾರದು, ಬಹಳ ಎಚ್ಚರಿಕೆವಹಿಸಿ ಕನ್ನಡತಿಳಿದವರನ್ನೇ ನೇಮಿಸಬೇಕು ಎಂದು ಕೇರಳ ಉಚ್ಚನ್ಯಾಯಾಲಯ ಆದೇಶ ನೀಡಿದೆ. ಕನ್ನಡಮಾಧ್ಯಮಕ್ಕೆ ಪ್ರಧಾನವಿಷಯ (ಕೋರ್ ಸಬ್ಜೆಕ್ಟ್) ಬೋಧಿಸಲು  ನಿಯುಕ್ತರಾದ ಶಿಕ್ಷಕರು ಶಾಲೆಗಳಲ್ಲಿ ಕನ್ನಡ ಕಲಿತವರಾಗಬೇಕೆಂಬ ನಿಯಮವೂ ಇದೆ. ಆದರೆ ನಿಯಮ ರಚನೆಯಾಗುವುದಕ್ಕಿಂತ ಹಿಂದಿನ ವಿಜ್ಞಾಪನೆಗಳ ಮೂಲಕ ನಡೆಯುತ್ತಿರುವ ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಸಂದರ್ಶನದ ಮೂಲಕ ಕನ್ನಡ ತಿಳಿಯದವರನ್ನು ಆರಿಸಲಾಗುತ್ತಿದೆ. ಸಂದರ್ಶಕ ಸಮಿತಿಯಲ್ಲಿ ಕನ್ನಡ ಭಾಷಾತಜ್ಞರು ಉಪಸ್ಥಿತರಿದ್ದರೂ ಕನ್ನಡ ತಿಳಿಯದವರ ಆಯ್ಕೆಗೆ ಯಾವುದೇ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ ಎಂದು ಸಾರ್ವಜನಿಕ ಆಕ್ರೋಶ ಕೇಳಿಬರುತ್ತಿದೆ.
   ಹೆಚ್ಚಿನ ಸರಕಾರಿ ಹಾಗೂ ಅನುದಾನಿತ ಕನ್ನಡಶಾಲೆಗಳಲ್ಲಿ ಭಾಷಾವಿಷಯಗಳನ್ನು, ಕಲೆ-ದೈಹಿಕ ಶಿಕ್ಷಣದಂತಹ ವಿಷಯಗಳನ್ನು ಬೋಧಿಸುತ್ತಿರುವವರು ಕನ್ನಡ ತಿಳಿಯದವರೇ ಆಗಿದ್ದಾರೆ. ಇದೀಗ ಪ್ರಧಾನವಿಷಯಗಳನ್ನು ಬೋಧಿಸಲು ಕೂಡ ಕನ್ನಡ ತಿಳಿಯದವರನ್ನು ನೇಮಿಸಲಾಗುತ್ತಿದೆ. ಒಟ್ಟಿನಲ್ಲಿ ಕನ್ನಡಮಾಧ್ಯಮವನ್ನು ಸಮಾಧಿ ಮಾಡಲು ಕೇರಳ ಪಿ.ಎಸ್.ಸಿ ಹಾಗೂ ಕೇರಳ ಸರಕಾರ ಪಣತೊಟ್ಟಂತೆ ಕಾಣಿಸುತ್ತಿದೆ. ಭಾಷಾವಿಷಯ, ವಿಶೇಷವಿಷಯ ಹಾಗೂ ಪ್ರಧಾನವಿಷಯಗಳ ಸಹಿತ ಎಲ್ಲ ವಿಷಯಗಳನ್ನು ಸರಕಾರಿ ಹಾಗೂ ಅನುದಾನಿತಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸಲು ನಿಯುಕ್ತರಾಗುವ ಶಿಕ್ಷಕರು ಕನಿಷ್ಠಪಕ್ಷ ಹತ್ತನೇತರಗತಿವರೆಗೆ ಕನ್ನಡವನ್ನು ಕಲಿತವರಾಗಿರಬೇಕೆಂದು ಕನ್ನಡಮಾಧ್ಯಮ ಶಿಕ್ಷಕರ ಮೂಲ ಅರ್ಹತೆಯನ್ನು ರೂಪಿಸದಿದ್ದರೆ ಕನ್ನಡಮಾಧ್ಯಮಕ್ಕೆ ಉಳಿಗಾಲವಿಲ್ಲದಂತಾಗುತ್ತದೆ.
              ಡಾ.ನರೇಶ್ ಮುಳ್ಳೇರಿಯ.
 






Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries