HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬೆಸೆಯುವ ಶಿಕ್ಷಣ ಕ್ರಮ ಬೇಕು=ನಿದರ್ೇಶಕ ಟಿ.ಎಸ್.ನಾಗಾಭರಣ
    ಕಾಸರಗೋಡು: ಸಂಸ್ಕಾರ, ಮಾನವೀಯ ಮೌಲ್ಯಗಳಿಗೆ ಮಾತ್ರ ಸಮಾಜವನ್ನು ಮುನ್ನಡೆಸುವ ಶಕ್ತಿಯಿದ್ದು, ಹೊಸ ತಲೆಮಾರು ಇದರಿಂದ ವಂಚಿತರಾಗುತ್ತಿರುವುದು ದುದರ್ೈವಕರ. ಆಧುನಿಕ ನವ ಮಾಧ್ಯಮಗಳ ಮೂಲಕ ಸಮಾಜವನ್ನು, ರಾಷ್ಟ್ರವನ್ನು ಋಣಾತ್ಮಕತೆಯೆಡೆಗೆ ಕೊಂಡೊಯ್ಯುವ ಯತ್ನಗಳಿಗೆ ಕಡಿವಾಣ ಬೀಳಬೇಕು ಎಂದು ಅಂತರಾಷ್ಟ್ರೀಯ ಖ್ಯಾತಿಯ ಕನ್ನಡ ಚಲನಚಿತ್ರ ನಿದರ್ೇಶಕ, ಸಂಸ್ಕಾರ ಭಾರತಿಯ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯ ವ್ಯಕ್ತಪಡಿಸಿದರು.
   ಕೇರಳದ ಮುಂಚೂಣಿಯ ಸಾಹಿತ್ತಿಕ  ಸಂಘಟನೆ ತಪಸ್ಯದ ರಾಜ್ಯಮಟ್ಟದ ಎರಡು ದಿನಗಳ ಅಧ್ಯಯನ ಶಿಬಿರವನ್ನು ಶನಿವಾರ ಬೆಳಿಗ್ಗೆ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಡಿಟೋರಿಯಂ ನಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಕಾಳಿದಾಸ, ಪಂಪ, ಬಸವಣ್ಣರಂತವರ ಕಾವ್ಯ ಗಳನ್ನು ಮರೆಮಾಚಿ ಇಂದು ಅನರ್ಥ ಸಾಹಿತ್ಯಗಳನ್ನು ಬಳಸಿ ಶಿಕ್ಷಣಗಳನ್ನು ನೀಡಲಾಗುತ್ತಿದೆ. ಬದುಕಿಗೆ ಯಾವ ಪ್ರಭಾವಗಳನ್ನೂ ಬೀಳಿಸುವಲ್ಲಿ ವಿಫಲಗೊಳ್ಳುವ ಅಂತಹ ಶಿಕ್ಷಣ ಕ್ರಮಗಳಿಂದ ಹೊಸ ತಲೆಮಾರು ಉತ್ಸಾಹ, ಧನಾತ್ಮಕ ಚಿಂತನೆ, ಸಹಬಾಳ್ವೆಗಳಿಂದ ವಂಚಿತವಾಗಿದ್ದು, ವ್ಯಾವಹಾರಿಕ ಜಗತ್ತು ಮತ್ತು ಜೀವನ ಅಸಂತುಷ್ಠಿಗೆ ಎಡೆಮಾಡಿಕೊಡುತ್ತಿವೆ ಎಂದು ಅವರು ತಿಳಿಸಿದರು.
   ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ಪರಿಚಯಿಸುವ, ಬದುಕಿಗೆ ಪ್ರೇರೇಪಣೆ ನೀಡುವ ಚಟುವಟಿಕೆಗಳು ಇಂದು ಅಗತ್ಯವಿದ್ದು, ಆಧುನಿಕ ಸಾಮಾಜಿಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಹೆಚ್ಚು ಕ್ರೀಯಾಶೀಲರಾಗಬೇಕು. ಮನಸ್ಸು, ಸಮಾಜ, ದೇಶವನ್ನು ಬೆಸೆಯುವ ಕರ್ಮಗಳು ವಿಸ್ತರಿಸಲ್ಪಡಬೇಕು ಎಂದು ಅವರು ಕರೆನೀಡಿದರು.
   ಪಿ.ನಾರಾಯಣ ಕುರುಪ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಚಿನ್ಮಯಾ ಮಿಷನ್ ನ ಶ್ರೀವಿವಿಕ್ತಾನಂದ ಸ್ವಾಮೀಜಿ ಅವರು, ಧಾಮರ್ಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಬೆಂಬಲಿಸುವ ವ್ಯವಸ್ಥೆ ಬೆಳೆಯುತ್ತದೆ ಮತ್ತು ಇತರರನ್ನೂ ಬೆಳೆಸುತ್ತದೆ. ಆಧ್ಯಾತ್ಮಕತೆಯು ರಾಷ್ಟ್ರದ ಬೆನ್ನೆಲುಬಾಗಿದ್ದು, ಅದಕ್ಕುಂಟಾಗುವ ಹೊಡೆತಗಳು ಸಮಾಜವನ್ನು ನಿವರ್ೀಯತೆಯೆಡೆಗೆ ಕುಸಿಯುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಸಮಾಜ, ಯುವ ಜನಾಂಗಗಳಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ದಾಟಿಸುವ ಸಮರೋಪಾದಿಯ ಯತ್ನಗಳಾಗಬೇಕೆಂದು ತಿಳಿಸಿದರು. ಈ ಮಣ್ಣಿನ ಕಲೆ, ಸಂಸ್ಕೃತಿ, ಅನುಷ್ಠಾನಗಳು ಆಧ್ಯಾತ್ಮಿಕತೆಯ ಲೇಪನದೊಂದಿಗೆ ಪರಿಶುದ್ದತೆಯನ್ನು ಮುನ್ನಡೆಸುವ ಶಕ್ತಿ ಉಳ್ಳವುಗಳಾಗಿದ್ದು, ಕಲೆ, ಸಂಸ್ಕೃತಿಗಳನ್ನು ಮುನ್ನಡೆಸುವ ಕರ್ತವ್ಯ ಶಕ್ತಿ ಎಲ್ಲರಲ್ಲೂ ಜಾಗೃತವಾಗಿರಲಿ ಎಂದು ಆಶೀರ್ವಚನಗೈದು ಹಾರೈಸಿದರು.
   ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕಾಸರಗೋಡು ಕೇಂದ್ರೀಯ ವಿವಿಯ ಉಪಕುಲಪತಿ ಡಾ.ಕೆ.ಜಯಪ್ರಸಾದ್ ಅವರು, ಕೇರಳದ ನವೋತ್ಥಾನ ಹೋರಾಟಗಳ ದಿಕ್ಕುತಪ್ಪಿಸಿ ತಮ್ಮ ಸ್ವಾರ್ಥಕ್ಕಾಗಿ ಬಳಸಿದ ರಾಜಕೀಯ ವ್ಯವಸ್ಥೆಗಳಿಂದ ಮೂಲ ಪರಂಪರೆಯ ಅವನತಿಗೆ ಕಾರಣವಾಯಿತು. ಸಿದ್ದಾಂತಗಳನ್ನು ತಮ್ಮ ಮನೋಗತಗಳಿಗೆ ಅನುಸಾರ ವಿಶ್ಲೇಶಿಸಿದ್ದ ಪರಿಣಾಮ ಅಶಿಸ್ತಿನ ವ್ಯವಸ್ಥೆಗಳ ಉಗಮಕ್ಕೆ ಕಾರಣವಾಗುತ್ತಿದ್ದು, ಹಿಂದೂ ಸಂಸ್ಕೃತಿ, ಪರಂಪರೆಯ ಅವಹೇಳನವೊಂದೇ ತಮ್ಮ ಜೀವನದ ಲಕ್ಷ್ಯವೆಂಬ ಪ್ರಯತ್ನಗಳ ವಿರುದ್ದ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
   ಅಂತರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್.ಪುಣಿಚಿತ್ತಾಯ, ಸಂಸ್ಕಾರ ಭಾರತಿಯ ರಾಷ್ಟ್ರೀಯ ಸಹಕಾರ ಕಾರ್ಯದಶರ್ಿ ಪ.ರಾ.ಕೃಷ್ಣಮೂತರ್ಿ, ಚಲನಚಿತ್ರ ನಿದರ್ೇಶಕ, ರಂಗನಟ ಕಾಸರಗೋಡು ಚಿನ್ನಾ ಉಪಸ್ಥಿತರಿದ್ದು ಶುಭಾಶಂಸನೆಗೈದರು.
   ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಸಾಧಕರಾದ ಮಾ.ಭ.ಪೆರ್ಲ(ಸಾಹಿತ್ಯ&ಸಂಶೋಧನೆ), ಟಿ.ರಾಮನ್ ಮೇನೋನ್(ಸಮಾಜಸೇವೆ), ಮಲಾರು ಜಯರಾಮ ರೈ(ಪತ್ರಿಕೋದ್ಯಮ&ತುಳು ಸಾಹಿತ್ಯ), ಕೆಎಂಕೆ ನಂಬ್ಯಾರ್(ಸ್ವಾತಂತ್ರ್ಯ ಹೋರಾಟ), ವಿಜಯನ್(ಭಾರತೀಯ ಸೇನೆ&ಜಲಪಡೆ), ನಿಟ್ಟೋಣಿ(ಭೂತಾರಾಧನೆ), ಸಾಯಿರಾಂ ಗೋಪಾಲಕೃಷ್ಣ ಭಟ್(ಸಮಾಜಸೇವೆ) ಹಾಗೂ ಕೆ.ವಿ.ರಮೇಶ್(ಯಕ್ಷಗಾನ ಬೊಂಬೆಯಾಟ) ರನ್ನು ಗೌರವಿಸಲಾಯಿತು.
  ಸಿ.ರಜಿತ್ ಕುಮಾರ್ ಸ್ವಾಗತಿಸಿ, ಪ್ರೊ.ಎ.ಶ್ರೀನಾಥ ಸನ್ಮಾನಿತರ ಪರಿಚಯ ನೀಡಿ ವಂದಿಸಿದರು. ಗೋಪಿ ಕೂಡಲ್ಲೂರ್ ಪ್ರಾರ್ಥನಾಗೀತೆ ಹಾಡಿದರು. ಡಾ.ರಾಧಾಕೃಷ್ಣ ಬೆಳ್ಳೂರು ಸಹಕರಿಸಿದರು.
   ಬಳಿಕ ತಪಸ್ಯ ರಾಜ್ಯ ಉಪಾಧ್ಯಕ್ಷ ಪಿ.ಕೆ.ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ಕೇರಳದಲ್ಲಿ ಸಾಹಿತ್ಯ ಚಳವಳಿಗಳು ಎಂಬ ವಿಷಯದ ಗೋಷ್ಠಿ ನಡೆಯಿತು. ಕುರುಕ್ಷೇತ್ರ ಪ್ರಕಾಶನದ ಸಂಪಾದಕ ಕೆ.ಪಿ.ರಾಮಕೃಷ್ಣನ್ ವಿಷಯ ಮಂಡನೆ ನಡೆಸಿದರು. ಬಳಿಕ ವಿವಿಧ ವಿಷಯಗಳಲ್ಲಿ ದಿನಪೂತರ್ಿ ಚಚರ್ೆಗಳು ನಡೆದವು. ಇಂದು(ಭಾನುವಾರ) ಬೆಳಿಗ್ಗೆ ಸಂಘಟನಾ ಅವಲೋಕನ, ಭಾಷೆ ಮತ್ತು ಸಂಸ್ಕೃತಿ ಅವಲೋಕನ, ಭಾರತ ದರ್ಶನ ಅವಲೋಕನ ಕಾರ್ಯಕ್ರಮಗಳು ನಡೆದು ಅಪರಾಹ್ನ 2 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries