HEALTH TIPS

No title

               ಕನ್ನಡ ಗಝಲ್
                    ಕವಯಿತ್ರಿ ಚೇತನಾ ಕುಂಬಳೆ:
ಮಾತೊಂದುಕೇಳದೆ ಉಳಿದಿದೆ ಸಖಿ
ಮನದೊಳು ಪ್ರೀತಿಯ ಭಾವ ಸುಳಿದಿದೆ ಸಖಿ
   ಕಣ್ಣಿಂದ ದೂರವಾದಾಗಲೆಲ್ಲ ಏನೋ ಚಡಪಡಿಕೆ
   ಸನಿಹವಿದ್ದಾಗಲೆಲ್ಲ ಹೃದಯ ಪಿಸುನುಡಿಗಾಗಿ ಕಾಯುತಿದೆ ಸಖಿ
ನಿನ್ನ ಕಾಲ್ಗೆಜ್ಜೆಯ ತಾಳಕೆ ಹೃದಯ ಹಾಡಿದೆ
ಅಧರದಲ್ಲರಳಿದ ಕಿರುನಗೆ ಕಣ್ಗಳ ಸೆಳೆದಿದೆ ಸಖಿ
  ತಂಗಾಳಿಯಲ್ಲಿ ನಿನ್ನದೇ ಗಂಧ ಬೆರೆತಿದೆ
  ನನ್ನೊಡಲ ತುಂಬ ನಿನ್ನ ಕಂಪಿದೆ ಸಖಿ
ನಿನ್ನ ಸೇರುವ ಹಂಬಲವು  ಹೆಚ್ಚಾಗುತಿದೆ
ತನುವಿನೆದೆಯಾಳದಲ್ಲಿ ನೆನಪುಗಳ ಸವಿಯಿದೆ ಸಖಿ

                ಚೇತನಾ ಕುಂಬಳೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries