ಪುನರ್ನವ ಟ್ರಸ್ಟ್ ನಿಂದ ಮರಿಕಾನ ಶಾಲೆಗೆ ಶೈಕ್ಷಣಿಕ ಪರಿಕರ ವಿತರಣೆ
ಮುಳ್ಳೇರಿಯ: ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಹಲವು ಪರಿಮಿತಿಗಳಿವೆ. ಆದರೆ ಅವುಗಳನ್ನೆಲ್ಲ ಕಡೆಗಣಿಸಿ ಹಳ್ಳಿಯ ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದು, ಅವರಿಗೆ ಲಭಿಸುವ ಸಾಮಾಜಿಕ ಸಹಾಯ ಸಹಕಾರಗಳು ಅವರ ಪ್ರತಿಭೆಯನ್ನು ಬೆಳೆಸಲು ಪೂರಕವಾಗುತ್ತವೆ ಎಂದು ಮರಿಕಾನ ಶ್ರೀ ಸುಬ್ರಹ್ಮಣ್ಯ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗಂಗಾಧರ ರೈ ಅವರು ಅಭಿಪ್ರಯ ವ್ಯಕ್ತಪಡಿಸಿದರು.
ಕಾಸರಗೋಡಿನ ಪುನರ್ನವ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಯ ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಮರಿಕಾನದಂತಹ ಕನ್ನಡ ಮಾಧ್ಯಮ ಶಾಲೆಗಳ ಪುಟಾಣಿಗಳಿಗೆ ಪ್ರತಿ ವರ್ಷವೂ ಶೈಕ್ಷಣಿಕ ಪರಿಕರಗಳನ್ನು ನೀಡಿ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸುವ ಪುನರ್ನವ ಟ್ರಸ್ಟ್ ಸಮಾಹಜಕ್ಕೆ ಮಾದರಿಯಾಗಿದೆ. ಟ್ರಸ್ಟ್ ನ ಯುವತಂಡ ಮಾಡುವ ಇಂತಹ ಸಾಮಾಜಿಕ ಬದ್ಧತೆಯಿಂದಾಗಿ ಇದನ್ನು ಪಡೆದುಕೊಂಡ ವಿದ್ಯಾಥರ್ಿಗಳಲ್ಲಿಯೂ ಸಾಮಾಜಿಕ ಜಾಗೃತಿ ಮೂಡಿಬರಲು ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಮಾತನಾಡಿ, ಶಾಲೆಯು ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಇಲ್ಲಿನ ವಿದ್ಯಾಥರ್ಿಗಳಿಗೆ ತಮ್ಮದೇ ಆದ ಸಮಸ್ಯೆಗಳಿದ್ದರೂ ಅದನ್ನು ಇಲ್ಲವಾಗಿಸಿದ ಹಿರಿಮೆ ಶಾಲೆಯ ಅಧ್ಯಾಪಕರಿಗೆ ಮತ್ತು ಪುನರ್ನವ ಟ್ರಸ್ಟ್ ನಂತಹ ಸಾಮಾಜಿಕ ಸಂಘಟನೆಗಳಿಗೆ ಸಲ್ಲಬೇಕು ಎಂದರು.
ವಿದ್ಯಾಥರ್ಿಗಳ ಪೋಷಕರಾದ ರಸೀನ, ನಸೀಮ, ಪುಷ್ಪ, ಮಮತ ಹಳೆವಿದ್ಯಾಥರ್ಿಗಳಾದ ಭವ್ಯ, ಫಾತಿಮಾಯಾಸ್ಮಿನ್, ಫಾತಿಮತ್ ಮುಬಶಿರ, ಫಾತಿಮತ್ ಶಿಫಾನ, ಮೊಹಮ್ಮದ್ ಶಿಬಿಲಿ, ಮೊಹಮ್ಮದ್ ನೌಶಾದ್, ಪ್ರತೀಕ್ ರೈ, ಭವಿತ್, ಅಶ್ವತಿ, ಜಯೇಶ, ಪವಿತ್ರ, ಕವಿತ, ಜ್ಯೋತಿ, ವಿದ್ಯ, ಚೈತನ್ಯ, ಯಾನ್ಸನ್ ಹಾಗೂ ಅಧ್ಯಾಪಿಕೆಯರಾದ ವಾಣಿಶ್ರೀ, ಗಾಯತ್ರಿ, ಅಡುಗೆ ಸಹಾಯಿ ಚಂದ್ರಾವತಿ ಉಪಸ್ಥಿತರಿದ್ದರು.
ಪುನರ್ನವ ಟ್ರಸ್ಟ್ ನ ಪದಾಧಿಕಾರಿಗಳಾದ ಡಾ. ರತ್ನಾಕರ ಮಲ್ಲಮೂಲೆ, ನವೀನ ಎಲ್ಲಂಗಳ, ರಾಜ ಎಲ್ಲಂಗಳ ಈ ಸಂದರ್ಭದಲ್ಲಿ ಮಾತನಾಡಿದರು. ವಿದ್ಯಾಥರ್ಿಗಳು ಪುನರ್ನವ ಟ್ರಸ್ಟ್ ನ ಸಹಾಯಕ್ಕೆ ಪ್ರತಿಕ್ರಿಯಿಸಿದರು. ವಾಣಿಶ್ರೀ ಟೀಚರ್ ಸ್ವಾಗತಿಸಿ, ನಿರೂಪಿಸಿದರು. ಚಂದ್ರಾವತಿ ಟೀಚರ್ ವಂದಿಸಿದರು.