HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಪೊಳಲಿಯ ಅಕ್ಕಿಹಳ್ಳಿ ಮತ್ತೆ ಹಸಿರಾಗುವ ಹೊತ್ತು                     
     ಮುಳ್ಳೇರಿಯ: ಆಧುನಿಕತೆಯೊಂದಿಗೆ ಮೂಲೆಗುಂಪಾದ ಹಲವು ಪಾರಂಪರಿಕ ವ್ಯವಸ್ಥೆಗಳು ಇದೀಗ ಮತ್ತೆ ಮತ್ತೆ ಗರಿಗೆದರುತ್ತಿದ್ದು, ಪೂರ್ವಜರು ಬಿಟ್ಟುಹೋದ ಕ್ರಮಗಳನ್ನು ಅನುಸರಿಸುವಲ್ಲಿ ಹೊಸ ತಲೆಮಾರು ಅಪ್ಪಿಕೊಳ್ಳುವ ಆಸಕ್ತಿ ಮೂಡಿಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರ ಮುಂಚೂಣಿಯಲ್ಲಿದ್ದು ಹೊಸ ತಾಂತ್ರಿಕತೆಯೊಂದಿಗೆ ಪಾರಂಪರಿಕ ಕೃಷಿ ವ್ಯವಸ್ಥೆ ಮರಳಿ ಬೆಳೆಸುವತ್ತ ಜನರು ಆಸಕ್ತರಾಗುತ್ತಿದ್ದಾರೆ. ಹಿಂದೆ ಬಯಲು ಪ್ರದೇಶಗಳನ್ನು ಕೇಂದ್ರೀಕರಿಸಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಭತ್ತದ ಬೆಳೆ ಕರಾವಳಿಯಾದ್ಯಂತ ಒಂದು ಕಾಲಘಟ್ಟದಲ್ಲಿ ಬಹುತೇಕ ನಾಮಾವಶೇಷಗೊಳ್ಳುತ್ತಿದ್ದ ಸಂದರ್ಭ ಇದೀಗ ಮತ್ತೆ ಭತ್ತದ ಬೆಳೆಯತ್ತ ಜನರು ಆಸಕ್ತರಾಗುತ್ತಿದ್ದಾರೆ.
   ಚೆರ್ಕಳ- ಜಾಲ್ಸೂರು ರಾಜ್ಯ ಹೆದ್ದಾರಿಯ ಪುಟ್ಟ ಪೇಟೆ ಪೊಳಲಿ ಅಥವಾ ಪೊವ್ವಲ್. ಪಾರಂಪರಿಕವಾಗಿ ಶ್ರೀಮಂತ ಹಿನ್ನೆಲೆಯ ಪೊವ್ವಲ್ ಕೋಟೆ ಕೊತ್ತಲಗಳಿದ್ದ ಪ್ರದೇಶ. ಪೊವ್ವಲ್ ಅಥವಾ ಪೊಳಲಿ ಕೋಟೆ ಶಿವಪ್ಪ ನಾಯಕ ಆಡಳಿತ, ಕಾಸರಗೋಡಿನ ಅಂದಿನ ಜನಜೀವನದ ಮಾರ್ಗದಶರ್ಿಯಾಗಿ ಇಂದಿಗೂ ಪಳೆಯುಳಿಕೆಯ ರೂಪದಲ್ಲಿ ನಮ್ಮಿದಿರಿದೆ. ಪೊವ್ವಲ್ ಕೋಟೆಯಿಂದ ಅನತಿ ದೂರದಲ್ಲಿ ಅಕ್ಕಿಹಳ್ಳಿ ವಿಶಾಲ ಬಯಲು ಪ್ರದೇಶ ಎಕ್ರೆಗಟ್ಟಲೆ ಭತ್ತದ ಬಯಲು ಪ್ರದೇಶ ಈ ಮಣ್ಣಿನ ಸತ್ವದ ಕೈಗನ್ನಡಿಯಾಗಿ ಶತಮಾನಗಳ ಹಿಂದೆ ಶೋಭಿಸುತ್ತಿದ್ದದು ಇಂದು ಇತಿಹಾಸ.
  ಅಕ್ಕಿಹಳ್ಳಿ ಈಗಿಲ್ಲ:
   ಜಿಲ್ಲೆಯ ಪರಂಪರೆಗೆ ಮುಳುವಾದ ಭಾಷಾವಾರು ಪ್ರಾಂತ್ಯ ವಿಭಜನೆಯ ಬಳಿಕದ ಸನ್ನಿವೆಶಗಳು ಇಲ್ಲಿಯ ಸಂಪೂರ್ಣ ಚಿತ್ರಣಗಳನ್ನೇ ಬದಲಾಯಿಸಿದವು. ಪೊವ್ವಲ್ ಪರಿಸರದ ಬಹುತೇಕ ಪ್ರದೇಶಗಳು ಮಲೆಯಾಳೀಕರಣಗೊಂಡ ಬಳಿಕ ಅಕ್ಕಿಹಳ್ಳಿ ಅಕ್ಕಾಳಿಯಾಗಿ ಬದಲಾಗಿದೆ. ಅಕ್ಕಿ ಬೆಳೆಸುತ್ತಿದ್ದವರು ಜಮೀನು ಮಾರಾಟ ಮಾಡಿ ಬೇರೆಡೆ ತೆರಳಿದ್ದರಿಂದ ಭತ್ತದ ಬೆಳೆ ಸಂಪೂರ್ಣ ನಶಿಸಿಯೇ ಹೋಯಿತು. ಗದ್ದೆಗಳ ಅಲ್ಲಲ್ಲಿ ಮನೆಗಳು ತಲೆಯೆತ್ತಿದ್ದರೆ ಮಿಕ್ಕುಳಿದವು ಹಡೀಲು ಬಿದ್ದವು.
      ಇದೀಗ ಮತ್ತೆ:
  ಪ್ರಸ್ತುತ ಹೊಸ ತಲೆಮಾರು ಮತ್ತೆ ಕೃಷಿಯತ್ತ ಆಕಷರ್ಿತರಾಗುತ್ತಿರುವಂತೆ ಅಕ್ಕಿಹಳ್ಳಿಯಲ್ಲೂ ಮತ್ತೆ ಅಕ್ಕಿ ಬೆಳೆಸುವ ಆಸಕ್ತಿಯೊಂದಿಗೆ ಭತ್ತದ ಬೇಸಾಯದ ಆರಂಭ ಕಳೆದ  ವರ್ಷದಿಂದ ಗರಿಗೆದರಿದ್ದು ಸಂಘಟಿತರಾಗಿ ಜನರು ಮುಂದೆ ಬರುತ್ತಿದ್ದಾರೆ. ಅಕ್ಕಿಹಳ್ಳಿಯಲ್ಲಿ ಶತಮಾನಗಳ ಹಿಂದೆ 200 ಎಕ್ರೆಗಳಿಗಿಂತಲೂ ಮಿಕ್ಕಿದ ಗದ್ದೆಯಲ್ಲಿ ಭತ್ತದ ಕೃಷಿ ನಡೆಯುತ್ತಿತ್ತೆಂದು ಇತಿಹಾಸ ತಿಳಿಸುತ್ತದೆ. ಆ ಪೈಕಿ ಇದೀಗ ಸುಮಾರು 60-70 ಎಕ್ರೆಗಳಷ್ಟು ಗದ್ದೆಗಳು ಮಾತ್ರ ಕೃಷಿಗಾಗಿ ಲಭ್ಯವಿದ್ದು ಮಿಕ್ಕುಳಿದವುಗಳಲ್ಲಿ ಮನೆಗಳು, ಇತರ ಬೆಳೆಗಳು ಇವೆ.
   ಪೊವ್ವಲ್ ಪರಿಸರದ ಪದವೀಧರ, ಅಡಿಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಫೀಸ್ ಎಂಬ ಯುವಕ ತಮ್ಮ ಉದ್ಯೋಗಕ್ಕೆ ಸಂಪೂರ್ಣ ತಿಲಾಂಜಲಿ ನೀಡಿ ಇದೀಗ ಕೃಷಿ ಸಹಿತ ಇತರ ಸ್ವ ಉದ್ಯೋಗಕ್ಕೆ ಹೊರಳಿದ್ದಾರೆ. ಅಕ್ಕಿಹಳ್ಳಿಯ ಹಡೀಲು ಬಿದ್ದ ಗದ್ದೆಗಳಲ್ಲಿ ಕಳೆದ ವರ್ಷ ಎರಡು ಎಕ್ರೆಗಳಷ್ಟು ಗದ್ದೆಯನ್ನು ಲೀಸ್ ಗೆ ಪಡೆದು ಭತ್ತದ ಕೃಷಿ ಮಾಡಿ ಉತ್ತಮ ಇಳುವರಿ ಪಡೆದಿದ್ದು, ಪ್ರಸ್ತುತ ವರ್ಷ ನಾಲ್ಕು ಎಕ್ರೆಗೆ ವಿಸ್ತರಿಸಿದ್ದಾರೆ. ಜೊತೆಗೆ ಹಸು-ಕೋಣಗಳನ್ನು ಸಾಕುವ ಅವರು ಹುಲ್ಲನ್ನು ಮೇವಾಗಿ ಬಳಸುತ್ತಿದ್ದಾರೆ.
    ಪ್ರೇರಣೆಯಿಂದ ಮತ್ತಷ್ಟು:
  ಹಫೀಸ್ ಅವರ ಭತ್ತದ ಕೃಷಿಯಿಂದ ಪ್ರೇರಿತರಾದ ಕೆಲವರು ಇದೀಗ ಅಕ್ಕಿಹಳ್ಳಿ(ಈಗ ಅಕ್ಕಾಳಿ)ಯ ಗದ್ದೆಗಳಲ್ಲಿ ಭತ್ತದ ಕೃಷಿಯತ್ತ ಮನಸ್ಸು ಮಾಡಿದ್ದು, ಒಂದಿಬ್ಬರು ಮೂರು-ಮೂರು ಎಕ್ರೆ ಗದ್ದೆಯನ್ನು ಲೀಸ್ ಗೆ ಪಡೆದು ವ್ಯವಸಾಯಕ್ಕೆ ಮುಂದಾಗಿರುವುದು ಭರವಸೆ ಮೂಡಿಸಿದೆ.
   ಹಫೀಸ್ ಅವರು ಕಳೆದ ವರ್ಷ ಒಂದು ಬೆಳೆಯನ್ನು ಪಡೆದ ಬಳಿಕ ಇತರ ಎಡೆ ಬೆಳೆಗಳಾದ ಉದ್ದು, ತರಕಾರಿಗಳನ್ನು ಬೆಳೆಸಿ ಲಾಭಗಳಿಸಿದ್ದರು. ಇದರಿಂದ ಆಕಷರ್ಿತರಾದವರು ಇಂತಹದೊಂದು ಪ್ರಯೋಗಕ್ಕೆ ಮುಂದಾಗಿರುವುದು ಪಾಳುಬಿದ್ದಿದ್ದ ಭೂಮಿಯಲ್ಲಿ ಮತ್ತೆ ಹಸಿರು ಮೂಡಿಸುವಲ್ಲಿ ಫಲಪ್ರದವಾಗುವ ಶುಭ ಸೂಚಕವಾಗಿ ಪರಿಗಣಿಸಲ್ಪಡುತ್ತಿದೆ.
   
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries