ಕುಸಿತದ ಭೀತಿಯಲ್ಲಿ ಬಳ್ಳಕ್ಕಾನ ರಸ್ತೆ - ಕಳಪೆ ಕಾಮಗಾರಿ ಆರೋಪ
ಮುಳ್ಳೇರಿಯ : ಅಡೂರಿನಿಂದ ಮಹಾಲಿಂಗೇಶ್ವರ ಕ್ಷೇತ್ರದ ಮುಂಭಾಗದ ಮೂಲಕ ಸಾಗುವ ಬಳ್ಳಕ್ಕಾನ ರಸ್ತೆಯನ್ನು ಕೇವಲ ಎರಡು ತಿಂಗಳ ಹಿಂದೆ ಡಾಂಬರೀಕರಣ ನಡೆಸಿದ್ದು, ಇದೀಗ ರಸ್ತೆಯ ಜಲ್ಲಿ ಕಲ್ಲುಗಳು ಚಲ್ಲಾಪಿಲ್ಲಿಯಾಗಿ ಹರಡಿ ಹೊಂಡ ನಿಮರ್ಾಣವಾಗಿದೆ. ಇದೇ ರಸ್ತೆಯ ಮೋರಿಯೊಂದರ ಪೈಪ್ ಕುಸಿದು ಕುಳಿತ ಕಾರಣ ಈ ಪ್ರದೇಶದಲ್ಲಿ ಹೊಂಡ ನಿಮರ್ಾಣವಾಗಿದೆ. ಪ್ರಸ್ತುತ ರಸ್ತೆಯೂ ಕೂಡಾ ನೀರಿನ ತೇವದಿಂದ ಸಡಿಲವಾಗಿದ್ದು, ಯಾವುದೇ ಸಂದರ್ಭದಲ್ಲೂ ಕುಸಿಯುವ ಸಾಧ್ಯತೆ ಇದೆ ಎಂದು ದೇಲಂಪಾಡಿ ಗ್ರಾಮ ಪಂಚಾಯಿತಿ ಬಿಜೆಪಿ ಸಮಿತಿ ಆರೋಪಿಸಿದೆ.
ಈ ರಸ್ತೆಯಲ್ಲಿ ವಾಹನಚಾಲಕರು ಸಂಚರಿಸುವುದಕ್ಕೂ ಹೆದರುತ್ತಿದ್ದಾರೆ. ಪ್ರತೀದಿನ ಅನೇಕ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ಈ ರಸ್ತೆಯ ನವೀಕರಣ ಹಾಗೂ ಡಾಂಬರೀಕರಣದಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು, ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಬಿಜೆಪಿ ಕಾಮಗಾರಿ ನಡೆಯುತ್ತಿದ್ದಾಗಲೇ ದೇಲಂಪಾಡಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿತ್ತು.
ಪ್ರಾದೇಶಿಕವಾದ ಅವ್ಯವಸ್ಥೆಯನ್ನು ಮನಗಂಡು ಕೆಲವು ಪ್ರದೇಶದಲ್ಲಿ ರಸ್ತೆಗೆ ಕಾಂಕ್ರೀಟಿಕರಣವೇ ನಡೆಸಬೇಕಿತ್ತು. ಆದರೆ ಇಲಾಖೆಯು ಅವಸರದಲ್ಲಿ ಕಳಪೆ ಡಾಂಬರೀಕರಣ ಮಾಡಿತ್ತು. ಈ ಸಂದರ್ಭದಲ್ಲಿ ದೇಲಂಪಾಡಿ ಗ್ರಾಮ ಪಂಚಾಯಿತಿ ಬಿಜೆಪಿ ಸಮಿತಿ ನೀಡಿದ್ದ ದೂರನ್ನೂ ಕೂಡಾ ದೇಲಂಪಾಡಿ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ನಿರ್ಲಕ್ಷಿಸಿತ್ತು. ಇದೀಗ ಮಳೆಗಾಲ ಆರಂಭವಾದಂದಿನಿಂದ ರಸ್ತೆಯು ಶಿಥಿಲವಾಗುತ್ತಿದ್ದು, ಡಾಂಬರು ಕಿತ್ತು ಹೋಗಿದ್ದು, ಅಲ್ಲಲ್ಲಿ ಕುಸಿತ ಉಂಟಾಗಿದೆ. ರಸ್ತೆಯ ನೀರು ಹರಿದು ಹೋಗುವುದಕ್ಕೆ ಕೆಲವು ಪ್ರದೇಶದಲ್ಲಿ ಅಗತ್ಯ ವ್ಯವಸ್ಥೆಯನ್ನೂ ಮಾಡಿಲ್ಲ. ಈ ರಸ್ತೆಯ ದುರಸ್ತಿಯನ್ನು ಮತ್ತೆ ನಿರ್ವಹಿಸಬೇಕೆಂದು ಬಿಜೆಪಿ ಸಮಿತಿ ಒತ್ತಾಯಿಸಿದ್ದು, ಬಳ್ಳಕ್ಕಾನ ಪರಿಸರದ ನಾಗರಿಕರನ್ನು ಸೇರಿಸಿಕೊಂಡು ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದೆ.
ಧರೆ ಕುಸಿತದ ಭೀತಿ :
ಅಡೂರಿನಿಂದ ಕಾಟಿಕಜೆಗೆ ಸಾಗುವ ರಸ್ತೆಯ ಗೋರಿಗದ್ದೆ ಪ್ರದೇಶದಲ್ಲಿ ಭಾರೀ ಗುಡ್ಡವೊಂದು ರಸ್ತೆಯ ಕಡೆಗೆ ವಾಲಿಕೊಂಡಿದ್ದು, ದುರಂತ ಸಾಧ್ಯತೆ ಇದೆ. ಪ್ರತೀದಿನ ಈ ರಸ್ತೆಯ ಮೂಲಕ ಅನೇಕ ಮಂದಿ ಶಾಲಾ ಮಕ್ಕಳು, ಮಹಿಳೆಯರು ಹಾಗೂ ವಾಹನಗಳು ಸಂಚರಿಸುತ್ತಿದ್ದು, ಧರೆಯು ಅಪಾಯಕಾರಿಯಾಗಿ ಕುಸಿಯುವ ಸಾಧ್ಯತೆ ಇದೆ. ರಸ್ತೆಗೆ ಸಂಬಂಧಿಸಿದ ಈ ಎರಡೂ ಸಮಸ್ಯೆಗಳನ್ನು ಕೂಡಲೇ ದೇಲಂಪಾಡಿಯ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ಸೂಕ್ತ ಕ್ರಮ ಕೈಗೊಂಡು ಪರಿಹರಿಸಬೇಕೆಂದು ದೇಲಂಪಾಡಿ ಬಿಜೆಪಿ ಸಮಿತಿ ಒತ್ತಾಯಿಸಿದೆ.