ರಸ್ತೆ ಬದಿಯ ಕಾಡು ಕಡಿದು ಪ್ರಶಂಸೆಗೆ ಪಾತ್ರರಾದ ಚಾಲಕರು
ಮುಳ್ಳೇರಿಯ: ಕಾಸರಗೋಡು-ಸುಳ್ಯ ರಾಜ್ಯ ರಸ್ತೆಯ ಇಕ್ಕಡೆಗಳಲ್ಲಿಯೂ ಕಾಡು ಬೆಳೆದು ವಾಹನ ಸಂಚಾರ ದುಸ್ತರವಾಗುತ್ತಿದೆ. ಇದನ್ನು ಕಡಿಯಲು ಲೋಕೋಪಯೋಗಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿರಾಸಕ್ತಿ ವಹಿಸುತ್ತಿದೆ. ಈ ಕಾರಣಗಳಿಂದ ಸ್ಥಳೀಯ ವಿವಿಧ ಸಂಘಟನೆಗಳು ಇದನ್ನು ತೆರವುಗೊಳಿಸಲು ಮುಂದಾಗುತ್ತಿವೆ.
ಮುಳ್ಳೇರಿಯದಿಂದ ಆದೂರು ಆಲಂತಡ್ಕದ ವರೆಗಿನ ಒಂದು ಕಿಲೋ ಮೀಟರ್ ರಸ್ತೆಯ ಇಕ್ಕಡೆಗಳಲ್ಲಿಯೂ ಬೆಳೆದು ನಿಂತ ಕಾಡನ್ನು ಪಿಕ್ ಅಪ್ ಮತ್ತು ಆಪೆ ರಿಕ್ಷದ ಚಾಲಕರು ಗುರುವಾರ ಕಡಿದು ಶುಚಿಗೊಳಿಸಿದರು. ಇದರಿಂದಾಗಿ ಈ ಪ್ರದೇಶದಲ್ಲಿ ವಾಹನ ಚಾಲಕರು ಅನುಭವಿಸುತ್ತಿದ್ದ ಭಾರೀ ಸಮಸ್ಯೆಗೆ ಚಾಲಕರೇ ಪರಿಹಾರ ಕಂಡುಕೊಂಡು ಇವರು ಶ್ಲಾಘನೆಗೆ ಕಾರಣರಾಗಿದ್ದಾರೆ. ಕುರುಚಲು ಕಾಡುಗಳು ಭಾರೀ ಎತ್ತರಕ್ಕೆ ಬೆಳೆದು ನಿಂತಿರುವುದರಿಂದ ವಾನಹ ಚಾಲಕರಿಗೆ ತೀವ್ರ ಸಮಸ್ಯೆಯಾಗಿ ಕಾಡುತ್ತಿತ್ತು. ಜೊತೆಗೆ ಇಂತಹ ಪ್ರದೇಶಗಳನ್ನು ಕೇಂದ್ರೀಕರಿಸಿ ತ್ಯಾಜ್ಯ ಎಸೆಯುವವರಿಗೂ ಸಹಕಾರಿಯಾಗಿತ್ತು. ಇನ್ನು ಮುಂದೆ ಅದು ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಕಳೆದ ವರ್ಷವೂ ಶುಚೀಕರಣ ಕಾರ್ಯಗಳಲ್ಲಿ ಮುಳ್ಳೇರಿಯದ ವಾಹನ ಚಾಲಕರು ಕೈಜೋಡಿಸಿದ್ದರು.
ಈ ರಸ್ತೆಯ ಪಕ್ಕದಲ್ಲಿ ಇನ್ನು ಸಾಕಷ್ಟು ಕಡೆಗಳಲ್ಲಿ ಕಾಡು ಬೆಳೆದು ಸಮಸ್ಯಯಾಗುತ್ತಿದೆ. ಈ ಬಗೆಗೆ ಅಧಿಕೃತರು ಗಮನಹರಿಸಬೇಕಾಗಿದೆ.