HEALTH TIPS

No title

                    ಛಿ!;ಮಯರ್ಾದೆ ಇಲ್ಲದ ಸರಕಾರ: ಕಬ್ಬಿಣ ಕಡಲೆಗೆ ಉಕ್ಕಿನ ಪೆಟ್ಟು
                           ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ
                         ಮತ್ತೆ ಮಲೆಯಾಳ ಶಿಕ್ಷಕನ ನೇಮಕ
     ಉಪ್ಪಳ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಆಳುವ ಸರಕಾರ ಮತ್ತೆಮತ್ತೆ ಗಧಾಪ್ರವಾರಗಳ ಮೂಲಕ ಸಾಂವಿಧಾನಿಕ ಹಕ್ಕನ್ನು ಚ್ಯುತಿಗೊಳಿಸಲು ಪ್ರಯತ್ನಿಸುತ್ತಿದ್ದು, ಕನ್ನಡಿಗರ ರಕ್ತವನ್ನು ಕುದಿಯುವಂತೆ ಮಾಡಿದೆ.
   ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾಥರ್ಿಗಳಿಗೆ ಕನ್ನಡದ ಗಂಧಗಾಳಿ ತಿಳಿಯದ ಶಿಕ್ಷಕರನ್ನು ನೇಮಿಸುವ ಯತ್ನ ಮುಂದುವರಿಯುತ್ತಿದ್ದು, ಇದೀಗ ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನ(ಕುಕ್ಕಾರು ಶಾಲೆ) ಕನ್ನಡ ಮಾಧ್ಯಮ ಗಣಿತ ಶಿಕ್ಷಕ ತೆರವಿದ್ದ ಹುದ್ದೆಗೆ ಮಲೆಯಾಳ ಶಿಕ್ಷಕರನ್ನು ಸೋಮವಾರ ನೇಮಕಗೊಳಿಸಿ ಕೆಂಗಟ್ಟಿಗೆ ಗುರಿಯಾದ ಪ್ರಸಂಗ ನಡೆದಿದೆ.
   ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಯ ಕನ್ನಡ ಮಾಧ್ಯಮಗಳಲ್ಲಿ ಪ್ರತಿ ತರಗತಿಗಳಲ್ಲೂ ಎರಡೆರಡು ಡಿವಿಜನ್ ಗಳಿದ್ದು, ನಾಲ್ಕುನೂರಕ್ಕೂ ಮಿಕ್ಕಿದ ವಿದ್ಯಾಥರ್ಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂಬ ಸಾಂವಿಧಾನಿಕ ಹಕ್ಕು ಮತ್ತು ಆದೇಶಗಳನ್ನು ಗಾಳಿಗೆ ತೂರಿ ಮಲೆಯಾಳ ಮಾತ್ರ ಗೊತ್ತಿರುವ ಶಿಕ್ಷಕರೋರ್ವರನ್ನು ಇದೀಗ ನೇಮಕಗೊಳಿಸಿರುವುದು ವಿದ್ಯಾಥರ್ಿಗಳ ಭವಿಷ್ಯವನ್ನು ಘಾಸಿಗೊಳಿಸುವ ಭೀತಿ ಎದುರಾಗಿದೆ.
       ಗ್ರಾಮೀಣ ವಿದ್ಯಾಥರ್ಿಗಳು ಅತಂತ್ರ:
   ಮಂಗಲ್ಪಾಡಿ ಸರಕಾರಿ ಶಾಲೆಯು ಶತಮಾನಗಳ ಹೊಸ್ತಿಲಲ್ಲಿರುವ  ವಿದ್ಯಾಸಂಸ್ಥೆಯಾಗಿದ್ದು, ಬಡ-ಮಧ್ಯಮ ವರ್ಗದ ವಿದ್ಯಾರ್ಜನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯ ಶಾಲೆಯಲ್ಲಿ ಮಲೆಯಾಳ ಹಾಗೂ ಆಂಗ್ಲ ಮಾಧ್ಯಮಗಳಲ್ಲೂ ಶಿಕ್ಷಣ ಸೌಲಭ್ಯವಿದ್ದು, ಹೆಚ್ಚು ಮಂದಿ ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿರುವುದು ವಿಶೇಷ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಕುಕ್ಕಾರು ಶಾಲೆಯೆಂದೇ ಪ್ರಸಿದ್ದವಾಗಿರುವ ಈ ಪರಿಸರದ ಐಲ, ನಯಾಬಝಾರ್, ಮಲ್ಲಂಗೈ, ಬಂದ್ಯೋಡು, ಅಂಬಾರು ಪರಿಸರದ ಸಾವಿರಾರು ವಿದ್ಯಾಥರ್ಿಗಳಿಗೆ ಒಂದನೇ ತರಗತಿಯಿಂದಲೇ ಕಲಿಕಾವಕಾಶವಿರುವ ಶಾಲೆಯಾಗಿ ಗುರುತಿಸಿಕೊಂಡಿದೆ. ಇದೀಗ ಮಲೆಯಾಳ ಶಿಕ್ಷಕರನ್ನು ನೇಮಕಗೊಳಿಸಿರುವುದು ವಿದ್ಯಾಥರ್ಿಗಳ ಕಲಿಕೆಯ ಮೇಲೆ ಪರಿಣಾಮ ಬೀರಲಿದ್ದು ಹೆತ್ತವರು ಆತಂಕಿತರಾಗಿದ್ದಾರೆ.
     ಏನಂತಾರೆ: 
  1) ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಯ ಬದಲಿಗೆ ಮಲೆಯಾಳ ಮಾತ್ರ ಬಲ್ಲ ಶಿಕ್ಷಕರನ್ನು ನೇಮಿಸಿರುವುದು ಖಂಡನಾರ್ಹವಾಗಿದೆ. ಪ್ರತಿವರ್ಷವೂ ಈ ರೀತಿಯಲ್ಲಿ ಕನ್ನಡಿಗರ ಹಕ್ಕುಚ್ಯುತಿಗೊಳಿಸುವ ಯತ್ನಗಳು ಅಧಿಕಾರಿ ವರ್ಗ ಕನ್ನಡಿಗರ ಮೇಲೆಸಗುವ ಮನಃಪೂರ್ವಕವಾದ ಯತ್ನವಾಗಿದ್ದು, ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ವಿರೋಧ ವ್ಯಕ್ತಪಡಿಸುತ್ತಿದೆ. ಕನ್ನಡ ವಿದ್ಯಾಥರ್ಿಗಳ ಶಿಕ್ಷಣ ಹಕ್ಕನ್ನು ಹೊಸಕುವ ಯತ್ನಗಳಿಂದ ಸಂಬಂಧಪಟ್ಟವರು ಹಿಂದೆ ಸರಿಯಬೇಕು. ಈ ಬಗ್ಗೆ ಶಿಕ್ಷಣ ಉಪನಿದರ್ೇಶಕರ ಸಹಿತ ಉನ್ನತ ಅಧಿಕಾರಿಗಳಿಗೆ ಮನವಿ ನೀಡಲಾಗುವುದು. ಜೊತೆಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಮುಂದಿನ ಹೋರಾಟಕ್ಕೆ ನೈತಿಕ ಬೆಂಬಲ ನೀಡಲಾಗುವುದು.
                  ರವೀಂದ್ರನಾಥ ಕೆ.ಆರ್.
            ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ
.......................................................................................................................................................
   2) ನೇಮಕಗೊಂಡ ಶಿಕ್ಷಕರು ಸರಕಾರದ ಎಲ್ಲಾ ಅರ್ಹತೆಗಳೊಂದಿಗೆ ಆಯ್ಕೆಯಾಗಿದ್ದು, ಕನ್ನಡ ಮಾಧ್ಯಮ ವಿದ್ಯಾಥರ್ಿಗಳಿಗೆ ಬೋಧಿಸಲು ನೇಮಕ ಗೊಳಿಸಿರುವುದು ದುರದೃಷ್ಟಕರ. ಶಿಕ್ಷಣ ಉಪನಿದರ್ೇಶಕರಿಂದ ಬಂದ ಆದೇಶಗಳನ್ನು ನಾವು ಜಾರಿಗೊಳಿಸುವುದು ಈ ಹುದ್ದಯ ಅಗತ್ಯವಾಗಿದೆ. ಆದರೆ ಓರ್ವ ಕನ್ನಡಿಗನಾಗಿ ನಾನಿದನ್ನು ಖಂಡಿಸುತ್ತಿದ್ದು, ಈ ಬಗ್ಗೆ ಅಗತ್ಯದ ನಿದರ್ೇಶನಗಳನ್ನು ಶಾಲಾ ರಕ್ಷಕ ಶಿಕ್ಷಕ ಸಂಘಕ್ಕೆ ನೀಡಿರುವೆನು. ಅಲ್ಲದೆ ಶಿಕ್ಷಣ ಉಪನಿದರ್ೇಶಕರಿಗೂ ಕನ್ನಡ ಶಿಕ್ಷಕರ ನೇಮಕಾತಿಯ ಕಾನೂನಿನ ಬಗ್ಗೆ ತಿಳಿಸಿರುವೆನು. ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
                            ಎನ್.ನಂದಿಕೇಶನ್
                         ಜಿಲ್ಲಾ ವಿದ್ಯಾಧಿಕಾರಿ. ಕಾಸರಗೋಡು ವಿದ್ಯಾಭ್ಯಾಸ ಜಿಲ್ಲೆ
.........................................................................................................................................................
 3)  ಕನ್ನಡ ಮಾಧ್ಯಮಗಳ ಸಾಮಾನ್ಯ ವಿದ್ಯಾಥರ್ಿಗಳ ಕಲಿಕೆಯ ಮಟ್ಟದ ಮೇಲೆ ಪರಿಣಾಮ ಬೀರುವ ಇಂತಹ ಯತ್ನಗಳು ಹೇಯಕರ. ಗಡಿನಾಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ಕಸಿಯುವಿಕೆ ಕಾನೂನುಬಾಹಿರಾಗಿದ್ದು, ರಕ್ಷಕ ಶಿಕ್ಷಕ ಸಮಿತಿ ಈ ಬಗ್ಗೆ ಹೋರಾಟದ ಹಾದಿ ತುಳಿಯಲಿದೆ. ಈಗಾಗಲೇ ಶಿಕ್ಷಣ ಉಪನಿದರ್ೇಶಕರು, ಜಿಲ್ಲಾ ವಿದ್ಯಾಧಿಕಾರಿ, ಸಹಾಯಕ ವಿದ್ಯಾಧಿಕಾರಿಗಳ ಸಹಿತ ಉನ್ನತ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಮನವಿ ನೀಡಲಾಗಿದೆ.
       ಬಾಲಕೃಷ್ಣ ಅಂಬಾರು.
     ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಮಂಗಲ್ಪಾಡಿ ಸರಕಾರಿ ಫ್ರೌಢಶಾಲೆ.




   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries