HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಮಾವುಂಗಾಲ್ ಕ್ಷೇತ್ರಕ್ಕೆ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಭೇಟಿ
    ಕಾಸರಗೋಡು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಕಾಂಞಂಗಾಡ್ನ ಮಾವುಂಗಾಲ್ನಲ್ಲಿರುವ ಶ್ರೀ ಪರಶಿವ ವಿಶ್ವಕರ್ಮ ದೇವಸ್ಥಾನಕ್ಕೆ ಚಿತ್ತೈಸಿದರು.
  ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಗುರುಗಳು ಕ್ಷೇತ್ರ ದರ್ಶನಗೈದು ವಿಶೇಷ ಪೂಜೆ ಸಲ್ಲಿಸಿ ನೆರೆದ ಭಕ್ತರಿಗೆ ಆಶೀರ್ವಚನ ನೀಡಿದರು. ಅವರು ಮಾತನಾಡಿ ಬಾಲಕರಲ್ಲಿ ಬಾಲ ಸಂಸ್ಕಾರ ನಿಮರ್ಾಣ ಆಗ ಬೇಕಾಗಿದೆ. ಒಂದು ಮನೆಯ ಬಾಲಕ ಸಂಸ್ಕಾರಯುತವಾದರೆ ಆ ಸಂಸ್ಕಾರವು ಮನೆ ಮನೆಗೆ ಹರಡುವುದು. ಇದಕ್ಕಾಗಿ ವೈದಿಕ ಶಿಕ್ಷಣವನ್ನು ಪಡೆಯಲು ಮುಂದಾಗಬೇಕು. ಪಡುಕುತ್ಯಾರು ಶ್ರೀ ಮಠದಲ್ಲಿ ಉಚಿತವಾಗಿ ವೈದಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ನಮ್ಮ ಸಂಸ್ಕಾರಗಳು ನಮ್ಮತನವನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ. ಹುಟ್ಟು ಸಮಾಜವನ್ನು ಹೆಮ್ಮೆಯಿಂದ ಗುರುತಿಸುವಂತಾಗಬೇಕು ಎಂದು ಅವರು ನುಡಿದರು.
    ಸ್ವಾಮಿಗಳವರು ಜು.27 ರಿಂದ ಸೆ.26 ರ ವರೆಗೆ ಉಡುಪಿ ಪಡು ಕುತ್ಯಾರುವಿನಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ವಿಲಂಬಿ ನಾಮ ಸಂವತ್ಸರದ ಚಾತುಮರ್ಾಸ್ಯ ವ್ರತಾಚರಣೆಯನ್ನು ಆಚರಿಸಲಿದ್ದು ಕಾರ್ಯಕ್ರಮದ ಪೂರ್ವಭಾವಿಯಾಗಿ ಕರಾವಳಿ ಶ್ರೀ ಕಾಳಿಕಾಂಬ ದೇಗುಲಗಳಿಗೆ ಯಾತ್ರೆ ಕೈಗೊಂಡ ವೇಳೆ ಶ್ರೀ ಕ್ಷೇತ್ರಕ್ಕೆ ಚಿತ್ತೈಸಿದರು.
   ಗುರು ದೀಕ್ಷಾ ಪೂರ್ವದಲ್ಲಿ ಇದೇ ತರಹ ಸಂಪೂರ್ಣ ಅಭಿಯಾನ ಭಾಗವಾಗಿ ಶ್ರೀ ಕ್ಷೇತ್ರಕ್ಕೆ ತೆರಳಿದ್ದರು. ಇಂದು ಚಾತುಮರ್ಾಸ್ಯ ವ್ರತಾಚರಣೆಯನ್ನು ಯಶಸ್ವಿಯಾಗಿ ಜರಗಿಸುವ ಇರಾದೆಯಿಂದ ಬಂದಿದ್ದೇವೆ ಎಂದರು. ಸುಂದರ ಶಿಲಾಮಯ ಕ್ಷೇತ್ರ ನಿಮರ್ಾಣವು ಶೀಘ್ರವಾಗಿ ನಡೆದು ಎಲ್ಲರು ಆ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಗಳಾಗುವಂತಾಗಲೀ ಎಂದು ನುಡಿದರು. ಇದೇ ಸಂದರ್ಭದಲ್ಲಿ ವಿಲಂಬಿ ನಾಮ ಸಂವತ್ಸರದ ಚಾತುಮರ್ಾಸ್ಯ ವ್ರತಾಚರಣೆಯ ಮಲಯಾಳಂ ಭಾಷೆಯಲ್ಲಿ ಮುದ್ರಿಸಿದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಅಧ್ಯಕ್ಷ ಜೆ.ದಿವಾಕರ ಆಚಾರ್ಯ ಅಡೂರು ಮತ್ತು ಪದಾಧಿಕಾರಿಗಳಿಗೆ ಶ್ರೀಗಳು ನೀಡಿ ಬಿಡುಗಡೆಗೊಳಿಸಿದರು. ಈ ವೇಳೆ ಕ್ಷೇತ್ರದ ಪದಾಧಿಕಾರಿಗಳು, ಮಹಿಳಾ ಸಂಘ, ಯುವಕ ಸಂಘದವರು ಗುರು ಪೀಠ ಪ್ರತಿಷ್ಠಾನದ ಅಧ್ಯಕ್ಷ ಬಿ.ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಕೋಶಾಧಿಕಾರಿ ಬಿ.ಯಜ್ಞೇಶ್ ಆಚಾರ್ಯ ಮಂಗಳೂರು, ಪ್ರಧಾನ ಕಾರ್ಯದಶರ್ಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರ್, ವಿಶ್ವಸ್ತ ವೈ.ಧಮರ್ೇಂದ್ರ ಆಚಾರ್ಯ ಮಧೂರು, ಕನ್ಯಾನ ಜನಾರ್ಧನ ಆಚಾರ್ಯ, ಕೆ.ಎಂ.ಮಧುಸೂದನ ಆಚಾರ್ಯ ಕಾಸರಗೋಡು, ಎ.ನಿರಂಜನ ಆಚಾರ್ಯ ವಿವೇಕಾನಂದ ನಗರ, ಶ್ರೀ ಗುರು ಸೇವಾ ಪರಿಷತ್ನ ಪದಾಧಿಕಾರಿಗಳಾದ ಪುರುಷೋತ್ತಮ ಆಚಾರ್ಯ ಪುತ್ತೂರು, ಜಿ.ಕೆ.ಆಚಾರ್ಯ ಪುತ್ತೂರು, ದೇವದಾಸ ಆಚಾರ್ಯ ಪುತ್ತೂರು, ಸುರೇಂದ್ರ ಆಚಾರ್ಯ ಪುತ್ತೂರು, ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಅಶೋಕ ಆಚಾರ್ಯ ಉದ್ಯಾವರ, ಮಂಜೇಶ್ವರ ಶ್ರೀ ಗುರು ಸೇವಾ ಪರಿಷತ್ನ ಅಧ್ಯಕ್ಷ ಬಿ.ಎಂ.ಅಶೋಕ ಆಚಾರ್ಯ ಪ್ರತಾಪನಗರ, ಸಂಚಾಲಕ ನಿತ್ಯಾನಂದ ಆಚಾರ್ಯ ರಾಮತಮಜಾಲ್, ಪ್ರಧಾನ ಕಾರ್ಯದಶರ್ಿ ದಿನೇಶ್ ಆಚಾರ್ಯ ರಾಮತಮಜಾಲ್, ಕೋಶಾಧಿಕಾರಿ  ಉದಯ ಆಚಾರ್ಯ ಆವಳ ಸಕರ್ುತಿ ಮೊದಲಾದವರು ಉಪಸ್ಥಿತರಿದ್ದರು. ಸ್ವಾಮೀಜಿಯವರ ಕ್ಷೇತ್ರ ಸಂದರ್ಶನ ಅಭಿಯಾನದ ಪ್ರಥಮ ಹಂತದ ಕೊನೆಯ ಕ್ಷೇತ್ರ ಕಾಂಞಂಗಾಡ್ ಶ್ರೀ ಪರಶಿವ ವಿಶ್ವಕರ್ಮ ಕ್ಷೇತ್ರ. 2 ನೇ ಹಂತದ ಕ್ಷೇತ್ರ ದರ್ಶನವು ಮುಂದಿನ ದಿನಗಳಲ್ಲಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries