ಸರಣಿ ತಾಳಮದ್ದಳೆ ಕೂಟ
ಮಂಜೇಶ್ವರ: ಶ್ರೀ ಅರಸು ಕೃಪಾ ಹವ್ಯಾಸಿ ಯಕ್ಷಗಾನ ಸಂಘ ಉದ್ಯಾವರ ಮಾಡ ಇದರ ಆಶ್ರಯದಲ್ಲಿ ಕಕರ್ಾಟಕ ಮಾಸದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಕೂಟವು ಜು. 22 ರಿಂದ ಮೊದಲ್ಗೊಂಡು ಆಗಸ್ಟ್ 12 ರ ವರೆಗೆ ಪ್ರತೀ ಭಾನುವಾರ ಅಪರಾಹ್ನ 3 ಗಂಟೆಗೆ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರು ದೈವಸ್ಥಾನದ ಗೋಪುರದಲ್ಲಿ ನಡೆಯಲಿದೆ.
ಸಮಾರಂಭದ ಅಂಗವಾಗಿ ಜು. 22 ರಂದು ಭಾನುವಾರ ಅಪರಾಹ್ನ 3 ಗಂಟೆಗೆ ಶ್ರೀ ಅರಸು ಕೃಪಾ ಯಕ್ಷಗಾನ ಸಂಘ ಸದಸ್ಯರಿಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ "ಯಜ್ಞ ಸಂರಕ್ಷಣೆ - ಸೀತಾ ಕಲ್ಯಾಣ" ಪ್ರಸಂಗದ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ.
ಜು. 29 ರಂದು ಭಾನುವಾರ ಅಪರಾಹ್ನ 3 ಗಂಟೆಗೆ ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರಿ ಯಕ್ಷಗಾನ ಸಂಘದವರಿಂದ "ಪಂಚವಟಿ" ಪ್ರಸಂಗ, ಆಗಸ್ಟ್ 5 ರಂದು ಅಪರಾಹ್ನ 3 ಗಂಟೆಗೆ ಯಕ್ಷ ಬಳಗ ಹೊಸಂಗಡಿ ಮಂಜೇಶ್ವರ ಇವರಿಂದ "ಚೂಡಾಮಣಿ" ಪ್ರಸಂಗ, ಆಗಸ್ಟ್ 12 ರಂದು ಅಪರಾಹ್ನ 3 ಗಂಟೆಗೆ ಯಕ್ಷ ಸಿಂಧೂರ ಮಹಿಳಾ ಯಕ್ಷಗಾನ ಕೂಟ ತಲಪಾಡಿ ಇವರಿಂದ "ರಾವಣತರಂಗ" ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರಾದ ಹರೀಶ್ ಶೆಟ್ಟಿ ಮಾಡ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.