HEALTH TIPS

No title

                    ಸೂಕ್ತ ವ್ಯವಸ್ಥೆಯಿಲ್ಲದೆ ಸೊರಗಿದ ಅಗ್ನಿಶಾಮಕ ದಳದ ಕಚೇರಿ
                   ಉಪ್ಪಳ ಫಯರ್ ಸ್ಟೇಶನ್ ನುಗ್ಗಿದ ಮಳೆಗಾಲದ ನೀರು
             ರಾತ್ರಿ ವೇಳೆ ಸಿಬ್ಬಂದಿಯ ವಿಶ್ರಾಂತಿ ಕೊಠಡಿಯೊಳಗೆ ಬರುತ್ತವೆ ಹಾವು ಮತ್ತು ಚೇಳುಗಳು
   ಉಪ್ಪಳ:  ಜಿಲ್ಲೆಯ ಹೊಸ ತಾಲೂಕು ಕೇಂದ್ರವಾಗಿರುವ ಮಂಜೇಶ್ವರದ ಉಪ್ಪಳದಲ್ಲಿ ಸುವ್ಯವಸ್ಥಿತ ಅಗ್ನಿಶಾಮಕ ದಳದ ಕೇಂದ್ರ ಕಚೇರಿಯಿಲ್ಲದೆ ಅಗ್ನಿಶಾಮಕ ದಳ ಸಿಬ್ಬಂದಿ ಸಹಿತ ನಾಗರಿಕರು ಹತಾಶರಾಗಿದ್ದಾರೆ. 2010 ರಲ್ಲಿ ಆರಂಭಗೊಂಡ ನಯಾಬಜಾರಿನ ಸೋಂಕಾಲ್ ಸಮೀಪದ ಫಯರ್ ಸ್ಟೇಶನ್ನಲ್ಲಿ ಎರಡು ಫಯರ್ ಎಂಜಿನ್ ವಾಹನಗಳಿವೆ, ವಾಹನ ಚಾಲಕರು ಸಹಿತ ಒಟ್ಟು 7 ಮಂದಿ ಸಿಬ್ಬಂದಿಗಳಿದ್ದಾರೆ. ಆದರೆ ವಾಹನ ನಿಲುಗಡೆಗೊಳಿಸಲು ಸೂಕ್ತ ವ್ಯವಸ್ಥೆಯಿಲ್ಲ, ಸುದೀರ್ಘ ಮುಂಗಾರಿನ ಸಮಯ ಅಗ್ನಿಶಮನ ವಾಹನಗಳ ಪಾಕರ್ಿಂಗ್ ಸ್ಥಳಕ್ಕೆ ಮಳೆ ನೀರು ನುಗ್ಗುತ್ತದೆ. ಕಚೇರಿ ಸಮೀಪವು ಮಳೆ ನೀರು ನಿಂತು ಅಧಿಕಾರಿಗಳು ಸಹಿತ ಸಿಬ್ಬಂದಿಗಳ ಒಡಾಟಕ್ಕೆ ತೊಂದರೆಯಾಗುತ್ತಿದೆ.
     ಅವ್ಯವಸ್ಥೆಯ ಆಗರ:
  ಮಂಗಲ್ಪಾಡಿ ಗ್ರಾ.ಪಂ ವ್ಯಾಪ್ತಿಯ ಕೇವಲ 17 ಸೆಂಟ್ಸ್ ಸ್ಥಳದಲ್ಲಿ ನಿಮರ್ಾಣಗೊಂಡ ಅಗ್ನಿಶಾಮಕ ದಳದ ಕೇಂದ್ರ- ಒಂದು ಕಚೇರಿ, ಮೂರು ವಾಹನ ನಿಲುಗಡೆಯ ಪಾಕರ್ಿಂಗ್ ಲಾಟ್ ಸಹಿತ ಸಿಬ್ಬಂದಿಗಳ ವಿಶ್ರಮ ಕೇಂದ್ರವನ್ನು ಹೊಂದಿದೆ. ವಿಶ್ರಾಂತಿ ಕೊಠಡಿಯಲ್ಲಿಯೇ ಸಿಬ್ಬಂದಿಗಳು ರಾತ್ರಿ ವೇಳೆಯನ್ನು ಕಳೆಯಬೇಕಿದೆ. ಇಕ್ಕಟ್ಟು ಜಾಗದಲ್ಲಿ ನಿಮರ್ಾಣ ಕಂಡ ವಿಶ್ರಾಂತಿ ಕೇಂದ್ರದಲ್ಲಿ ಸಿಬ್ಬಂದಿಗಳು ತಮ್ಮ ವಸತಿ ಸೌಕರ್ಯ ಸಹಿತ ಅಡುಗೆ ತಯಾರಿಯನ್ನು ಮಾಡಿಕೊಳ್ಳಬೇಕಿದೆ. ದೂರದೂರಿನ ಸಿಬ್ಬಂದಿಗಳಿಗೆ ಕ್ವಾಟರ್್ಸ್ ವ್ಯವಸ್ಥೆಯಾಗಲಿ, ಸೂಕ್ತ ಖಾಸಗಿ ಕೊಠಡಿ ವ್ಯವಸ್ಥೆಯಾಗಲಿ ಇಲ್ಲವಾಗಿದೆ. ಹಲವು ಬಾರಿ ವಿಷ ಹಾವು ಸಹಿತ ಚೇಳುಗಳು ವಿಶ್ರಾಂತಿ ಕೇಂದ್ರದಲ್ಲಿ ಕಾಣಿಸಿಕೊಂಡಿವೆ ಎಂದು ಇಲ್ಲಿ ತಂಗುವ ಸಿಬ್ಬಂದಿಗಳು ತಿಳಿಸಿದ್ದಾರೆ. ಕಚೇರಿ ಸಮೀಪದಲ್ಲಿ ಕಾಡು ಪೊದೆಗಳು ಆವೃತವಾಗಿದ್ದು, ಸ್ಥಳೀಯಾಡಳಿತ ಸಂಸ್ಥೆಗಳ ದಿವ್ಯ ನಿರ್ಲಕ್ಷದಿಂದ ಸಮಸ್ಯೆಗಳು ಇಮ್ಮಡಿಯಾಗಿದೆ. ಜನಪ್ರತಿನಿಧಿಗಳ ಅಸಡ್ಡೆಯು ಅಗ್ನಿಶಾಮಕ ಕಚೇರಿಯನ್ನು ಮೇಲ್ದಜರ್ೆಗೇರಿಸುವಲ್ಲಿ ಮುಳುವಾಗಿದೆ. ಫಯರ್ ಇಂಜಿನ್ಗಳು ನಿಲುಗಡೆಗೊಳ್ಳುವ ಸ್ಥಳವು ಶೀಟ್ ಹೊದಿಸಿದ ಮೇಲ್ಛಾವಣಿಯನ್ನು ಹೊಂದಿದ್ದು, ಮಳೆ ಗಾಳಿ ನೀರು ಎಂಜಿನ್ ಗಳಿಗೆ ರಾಚಿ ನೆಲವು ಕೆಸರುಗುಂಡಿಯಾಗುತ್ತಿದೆ. ಸೂಕ್ತ ವ್ಯವಸ್ಥೆ ಮತ್ತು ಭದ್ರತೆ ಇಲ್ಲದ ಫಯರ್ ಸ್ಟೇಶನ್ನಲ್ಲಿ ಗ್ಯಾರೇಜ್ ವ್ಯವಸ್ಥೆ ಇಲ್ಲ. ವಾಹನಗಳ ದುರಸ್ತಿಗೆ ಪೂರಕವಾಗುವ ಮೆಕಾನಿಕಲ್ ಡಿವಿಶನ್ ಕೊರೆತೆಯಿದೆ. ಪ್ರಸ್ತುತ ಒಂದು ಅಂಬುಲೆನ್ಸ್ ಸಹಿತ ಎರಡು ಫಯರ್ ಎಂಜಿನ್ ಇರುವ ಅಗ್ನಿಶಾಮಕ ಕೇಂದ್ರದಲ್ಲಿ ಮೂರು ಮಂದಿ ವಾಹನ ಚಾಲಕರು ಇದ್ದಾರೆ. ಒಟ್ಟಾರೆ 10 ಮಂದಿ ಸಿಬ್ಬಂದಿಗಳಿರಬೇಕಾದ ಕಚೇರಿಯು ಸೂಕ್ತ ಸಿಬ್ಬಂದಿಗಳಿಲ್ಲದ ಕಾರಣ ಆಗಾಗ್ಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದೆ. ಉತ್ತಮ ಫಯರ್ ಸ್ಟೇಶನ್ ನಿಮರ್ಾಣಕ್ಕೆ ಈ ಹಿಂದೆ ಹೊಸ ಸ್ಥಳವನ್ನು ಗೊತ್ತುಪಡಿಸಲಾಗಿದ್ದರು, ಹಲವು ಕಾರಣಗಳಿಂದ ಯೋಜನೆ ನೆನೆಗುದಿಗೆ ಬಿದ್ದಿದೆ, ಪ್ರಸ್ತುತ ಕಾಯರ್ಾಚರಿಸುತ್ತಿರುವ ಕಚೇರಿಯು ಸಮಸ್ಯೆಗಳ ಮೂಲಕ ಅವಗಣನೆಗೆ ಒಳಗಾಗಿದೆ ಎನ್ನುತ್ತಾರೆ ಫಯರ್ ಸ್ಟೇಶನ್ ಅಧಿಕಾರಿಯೋರ್ವರು.
   ಇತ್ತೀಚೆಗೆ ಉಪ್ಪಳ ನಯಾಬಜಾರಿನಲ್ಲಿ ನಡೆದ ವಾಹನ ಅಪಘಾತದಲ್ಲಿ ಒಟ್ಟು ಐದು ಮಂದಿ ಸ್ಥಳದಲ್ಲೇ ಅಸುನೀಗಿದ್ದರು. ಬದುಕುಳಿದ ಮಂದಿ ವಾಹನದಲ್ಲಿ ಸಿಲುಕಿದ್ದರು, ಸಂಪೂರ್ಣ ಹಾನಿಗೊಂಡ ವಾಹನದಿಂದ ಬದುಕುಳಿದವರನ್ನು ಪಾರು ಮಾಡಲು, ನಜ್ಜುಗುಜ್ಜಾದ ವಾಹನದ ಡೋರ್ಗಳ ಕೀಳುವ ಮತ್ತು ಕತ್ತರಿಸಲು ಸಹಾಯಕವಾಗುವ ಅತ್ಯವಶ್ಯ ಉಪಕರಣಗಳು ಉಪ್ಪಳದ ಅಗ್ನಿಶಾಮಕ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ.
        ಸಮುದ್ರ ರಕ್ಷಣೆ ಕಷ್ಟಸಾಧ್ಯ!
  ಸಮುದ್ರ ರಕ್ಷಣೆ ಸಹಿತ ಮಳೆಗಾಲದ ಅವಧಿಯಲ್ಲಿ ಸಂಭವಿಸುವ ಸಂಭಾವ್ಯ ಅವಘಡಗಳನ್ನು ತಪ್ಪಿಸುವ ಕಾರ್ಯ ಉಪ್ಪಳದ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಕಷ್ಟಸಾಧ್ಯವಾಗಿದೆ. ಸೂಕ್ತ ರಕ್ಷಣಾ ವ್ಯವಸ್ಥೆಗೆ ಸಹಾಯಕವೆನಿಸುವ ಮೂಲಭೂತ ಸೌಕರ್ಯ, ನುರಿತ ಸಿಬ್ಬಂದಿಗಳ ನೇಮಕದಿಂದ ಮಳೆಗಾಲದ ಸಮಯ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗಬಹುದು. ರಕ್ಷಣಾ ಕೈಂಕರ್ಯದಲ್ಲಿ ತೊಡಗಲು ಅನುಕೂಲವಾಗುವ  ಯಾವುದೇ ಸಕಲ ಅಗತ್ಯತೆಗಳನ್ನು ಇಲ್ಲಿ ಕೊಡಮಾಡಬೇಕಿದೆ. ರಾ.ಹೆ ಯಿಂದ ಸುಮಾರು 2 ಕಿ.ಮೀ ಒಳಗಿರುವ ಈ ಅಗ್ನಿಶಾಮಕ ದಳದ ಕೇಂದ್ರವನ್ನು ಎ. 17, 2010 ರಂದು ಅಂದಿನ ಗೃಹಖಾತೆ ಸಚಿವ ಕೊಡಿಯೇರಿ ಬಾಲಕೃಷ್ಣನ್ ಉದ್ಘಾಟಿಸಿದ್ದರು. ಅಂದಿನ ಮಂಜೇಶ್ವರ ಶಾಸಕರಾಗಿದ್ದ ಸಿ.ಎಚ್ ಕುಞಂಬುರವರ ದೂರದಶರ್ಿ ಯೋಜನೆಯಾಗಿದ್ದ ಉಪ್ಪಳ ಫಯರ್ ಸ್ಟೇಶನ್ ಪ್ರಸ್ತುತ ಜನಪ್ರತಿನಿಧಿಗಳ ಅಸಡ್ಡೆಗೆ ಒಳಗಾಗಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.
   ಏನಂತಾರೆ:
  ಅಗ್ನಿಶಾಮಕ ಕೇಂದ್ರದ ಅಭಿವೃದ್ದಿಗಾಗಿ ಸರಕಾರದ ಯೋಜನೆಯಲ್ಲಿ ನಿಧಿ ಮೀಸಲಿರಿಸಲಾಗಿದೆ. ಆದರೆ ಕಂದಾಯ ಇಲಾಖೆಯಿಂದ ನಿವೇಶನ ಲಭ್ಯವಾಗದಿರುವುದರಿಂದ ಶಾಶ್ವತ ಘಟಕವನ್ನು ನಿಮರ್ಿಸಲು ತೊಡಕಾಗಿದ್ದು, ಶೀಘ್ರ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
                                       ಪಿ.ಬಿ.ಅಬ್ದುಲ್ ರಝಾಕ್
                                   ಶಾಸಕ ಮಂಜೇಶ್ವರ ವಿಧಾನ ಸಭಾ ಕ್ಷೇತ್ರ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries