HEALTH TIPS

No title

        ಕನ್ನಡ ಗಝಲ್
               ಕವಯಿತ್ರಿ ಚೇತನಾ ಕುಂಬಳೆ:
ಕ್ರೌರ್ಯದ ಕೈಗಳಲ್ಲಿ ಹಸಿ ಜೀವ ನಲುಗಿ ಹೋಗಿದೆ ಸಖಿ
ಪ್ರಾಣ ಕಳೆದುಕೊಂಡ ದೇಹವೊಂದು ಕಣ್ಣೀರಿಡುತ್ತಿದೆ ಸಖಿ
   ಹಾರಾಡ ಬೇಕಿದ್ದ ಮನಸ್ಸು ರೆಕ್ಕೆ ಕಳಚಿಟ್ಟು ಮೌನವಾಗಿದೆ
   ಹೂ ಅರಳಿ ಕಂಪ ಬೀರುವ ಮೊದಲೇ ಉಸಿರಾಟ ನಿಲ್ಲಿಸಿದೆ ಸಖಿ

ಬೆಳಕ ಕಾಣುವ ಮೊದಲೇ ಕತ್ತಲೆಯ ಅಂಧಕಾರಕ್ಕೆ  ನಡುಗಿದೆ
ಪ್ರೀತಿ ,ವಾತ್ಸಲ್ಯವ ಸವಿಯುವ ಮೊದಲೇ ಜೀವ  ಕಣ್ಣು ಮುಚ್ಚಿದೆ ಸಖಿ
   ಮಾತು ಹೊರಡುವ  ಮೊದಲೇ ಧ್ವನಿಯ ಸದ್ದಡಗಿದೆ
   ಸ್ವಾರ್ಥ ತುಂಬಿಕೊಂಡ ಮನಸ್ಸು ಕಲ್ಲಾಗಿದೆ ಸಖಿ

ತನು ಗೋರಿಯೊಳಗೆ ನಿತ್ಯವೂ ಅಳುವುದು  ಕೇಳಿಸುತ್ತಿದೆ
ಆಲಿಸಬೇಕಿದ್ದ ಕಿವಿ ಮಾತ್ರ ದೂರವಾಗಿ ಕಿವುಡಾಗಿದೆ ಸಖಿ

             ಚೇತನಾ ಕುಂಬಳೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries